ಪ್ರಿಯಕರನ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದ ಯುವತಿ ಕುಟುಂಬಸ್ಥರು; ಯುವಕನಿಗೆ ಗಂಭೀರ ಗಾಯ

ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಗಣಪತಿ ಬೀದಿ‌ ನಿವಾಸಿ ಸುಹೇಲ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಕರೆ ಮಾಡಿ ತನಗೆ ಮನೆಯಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿದಕ್ಕೆ ಆಕೆಯನ್ನು ಕರೆದುಕೊಂಡು ಹೋಗಲು ಯುವತಿ ಮನೆಗೆ ಬಂದಿದ್ದ. ಈ ಮೇಲೆ ಯುವತಿ ತಂದೆ ಸಾಧಿಕ್, ಸುಹೇಲ್ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದಿದ್ದಾರೆ.

ಪ್ರಿಯಕರನ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದ ಯುವತಿ ಕುಟುಂಬಸ್ಥರು; ಯುವಕನಿಗೆ ಗಂಭೀರ ಗಾಯ
ಸುಹೇಲ್
Follow us
Gopal AS
| Updated By: ಆಯೇಷಾ ಬಾನು

Updated on: May 21, 2024 | 10:48 AM

ಮಡಿಕೇರಿ, ಮೇ.21: ಪ್ರೀತಿಸಿದ ಯುವಕನ‌ ಮೇಲೆ ಯುವತಿಯ ಕುಟುಂಬಸ್ಥರು ಬಿಸಿ ನೀರು ಎರಚಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ. ಸುಹೇಲ್ (27) ಎಂಬ ಯುವಕನ ಮೇಲೆ ಬಿಸಿ ನೀರು ಎರಚಲಾಗಿದ್ದು ಯುವಕನ ಮುಖ, ಗುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.

ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಗಣಪತಿ ಬೀದಿ‌ ನಿವಾಸಿ ಸುಹೇಲ್ ಮದೆನಾಡಿನ ಜೀನತ್ ಎಂಬಾಕೆಯನ್ನ ಪ್ರೀತಿಸುತ್ತಿದ್ದ. ಜೀನತ್ ತನ್ನ ಪ್ರಿಯಕರನಿಗೆ ಕರೆ ಮಾಡಿ ನನಗೆ ಮನೆಯಲ್ಲಿ ತುಂಬಾ ಹಿಂಸೆಯಾಗುತ್ತಿದೆ. ಮನೆಯಲ್ಲಿರಲು ಆಗುತ್ತಿಲ್ಲ ಎಂದು ಹೇಳಿದ್ದಳು. ಹೀಗಾಗಿ ತನ್ನ ಪ್ರೇಯಸಿಯನ್ನು ಕರೆತರಲು ಎಂದು ಆಕೆಯ ಮನೆಗೆ ಹೋಗಿದ್ದಾಗ ಜೀನತ್ ತಂದೆ ಸಾಧಿಕ್ ಯುವಕನ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಸುಹೇಲ್ ಮೇಲೆ ಬಿಸಿ ನೀರು ಎರಚಿ ವಿಕೃತಿ ಮೆರೆದಿದ್ದಾರೆ. ಗಂಭೀರವಾಗಿ ಗಾಯಗೊಂಡ‌ ಸುಹೇಲ್​ನನ್ನು ಮಡಿಕೇರಿ ಕೊಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೇವಲ ಒಂದು ಮಳೆಗೆ ಶಿವಮೊಗ್ಗ ಬಾಪೂಜಿನಗರದ ಸ್ಥಿತಿ ಅಧ್ವಾನ, ಮನೆಗಳು ಜಲಾವೃತ ನಿವಾಸಿಗಳ ಆಕ್ರೋಶ

ಎಪಿಎಂಸಿಯಲ್ಲಿ ಚಾಲಕ ಜಗದೀಶ್ ಆತ್ಮಹತ್ಯೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ APMCಕಾರ್ಯದರ್ಶಿ ವಾಹನ ಚಾಲಕ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವು ವರ್ಷಗಳಿಂದ ಕಾರ್ಯದರ್ಶಿ ಡ್ರೈವರ್ ಆಗಿದ್ದ ಜಗದೀಶ್, ನಿನ್ನೆ ಆಡಳಿತ ಕಚೇರಿ ಕಟ್ಟಡದ ಮುಂಭಾಗದಲ್ಲೇ ನೇಣಿಗೆ ಶರಣಾಗಿದ್ದಾರೆ. ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ; 10 ಅಂಗಡಿಗಳು ಧಗಧಗ

ಕೊಪ್ಪಳದ ನಗರದ ಕೇಂದ್ರ ಬಸ್​​​ಸ್ಟ್ಯಾಂಡ್ ರಸ್ತೆಯಲ್ಲಿನ, ಮೇಘರಾಜ್​ ಕಾಂಪ್ಲೆಂಕ್ಸ್​​ನ ಪೇಂಟ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ನೋಡ ನೋಡುತ್ತಲೇ ಪಕ್ಕದ ಆರು ಅಂಗಡಿಗಳಿಗೆ ಬೆಂಕಿ ಆವರಿಸಿ ಧಗಧಗಿಸಿತು. ಅಂಗಡಿಗಳಲ್ಲಿದ್ದ ಕೋಟ್ಯಂತರ ಮೌಲ್ಯದ ವಸ್ತುಗಳು ಧಗಧಗಿಸಿದ್ವು.. ಬೆಂಕಿ ಜಾಲ್ವೆ ಕಂಡು ಅಂಗಡಿಗಳ ಮಾಲೀಕರು ಕಣ್ಣೀರು ಹಾಕಿದ್ರು. ಇನ್ನೂ 6 ಅಗ್ನಿಶಾಮಕ ವಾಹನಗಳು 3 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ