ಕೇವಲ ಒಂದು ಮಳೆಗೆ ಶಿವಮೊಗ್ಗ ಬಾಪೂಜಿನಗರದ ಸ್ಥಿತಿ ಅಧ್ವಾನ, ಮನೆಗಳು ಜಲಾವೃತ ನಿವಾಸಿಗಳ ಆಕ್ರೋಶ

ಕೇವಲ ಒಂದು ಮಳೆಗೆ ಶಿವಮೊಗ್ಗ ಬಾಪೂಜಿನಗರದ ಸ್ಥಿತಿ ಅಧ್ವಾನ, ಮನೆಗಳು ಜಲಾವೃತ ನಿವಾಸಿಗಳ ಆಕ್ರೋಶ

ಅರುಣ್​ ಕುಮಾರ್​ ಬೆಳ್ಳಿ
|

Updated on: May 21, 2024 | 10:25 AM

ಬಾಪೂಜಿನಗರದ ಎಲ್ಲ ನಿವಾಸಿಗಳು ಹೇಳುವ ಪ್ರಕಾರ, ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾದಾಗಿನಿಂದ ಸಮಸ್ಯೆಗಳು ಉಲ್ಬಣಗೊಂಡಿವೆ. ರಸ್ತೆಗಳ ಅಗಲೀಕರಣದ ನೆಪದಲ್ಲಿ ಮೊದಲಿದ್ದ ರಸ್ತೆಗಳನ್ನು ಕಂಡಕಂಡಲ್ಲಿ ಅಗೆದಿರುವುದರಿಂದ ಮಣ್ಣ್ಣೆಲ್ಲ ಚರಂಡಿ ಸೇರಿದೆ ಮತ್ತು ರಸ್ತೆಗಳಲ್ಲಿ ಅಪಾಯಕಾರಿ ಗುಂಡಿಗಳು ಎಂದು ಒಬ್ಬ ಹಿರಿಯರು ಹೇಳುತ್ತಾರೆ.

ಶಿವಮೊಗ್ಗ: ಇದು ಬೇಸಿಗೆಯ ಅಕಾಲಿಕ ಮಳೆ ಮತ್ತು ನಿನ್ನೆ ರಾತ್ರಿ ಸುರಿದ ಒಂದು ಮಳೆಗೆ ಶಿವಮೊಗ್ಗ ನಗರದ ಬಾಪೂಜಿನಗರದಲ್ಲಿ (Bapujinagar) ಈ ಸ್ಥಿತಿಯಿದೆ. ಸ್ಥಳೀಯರು ಹೇಳುವ ಹಾಗೆ ಕೇವಲ ಹತ್ತು ನಿಮಿಷ ಮಳೆ ಸುರಿದರೂ ಮನೆ ಮತ್ತು ಅಂಗಡಿಗಳಲ್ಲಿ ಚರಂಡಿ ನೀರು ಹರಿದು ಹೋಗಿ ಎಲ್ಲವೂ ಜಲಾವೃತ. ಬಳಕೆಗೆಂದು ಮನೆಯಲ್ಲಿ ತಂದಿಟ್ಟಿದ್ದ ಅಕ್ಕಿ, ಬೇಳೆ, ರಾಗಿ, ಗೋಧಿ, ಹಿಟ್ಟು ನೀರುಪಾಲು. ನಗರದ ಒಳಚರಂಡಿಗಳನ್ನು (drains) ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಮತ್ತು ಚರಂಡಿಗಳಲ್ಲಿ ಮುಕ್ಕಾಲು ಭಾಗ ಮಣ್ಣು ತುಂಬಿಕೊಂಡಿರುವುದರಿಂದ ನೀರು ರಸ್ತೆಗಳ ಮೇಲೆ ಬಂದು ಅಂಗಡಿ ಮತ್ತು ಮನೆಗಳನ್ನು ನುಗ್ಗುತ್ತಿದೆ ಎಂದು ಸುನೀತಾ ಹೆಸರಿನ ನಿವಾಸಿ ಹೇಳುತ್ತಾರೆ. ಬಾಪೂಜಿನಗರದ ಎಲ್ಲ ನಿವಾಸಿಗಳು ಹೇಳುವ ಪ್ರಕಾರ, ಸ್ಮಾರ್ಟ್ ಸಿಟಿ ಕಾಮಗಾರಿ (Smart City works) ಆರಂಭವಾದಾಗಿನಿಂದ ಸಮಸ್ಯೆಗಳು ಉಲ್ಬಣಗೊಂಡಿವೆ. ರಸ್ತೆಗಳ ಅಗಲೀಕರಣದ ನೆಪದಲ್ಲಿ ಮೊದಲಿದ್ದ ರಸ್ತೆಗಳನ್ನು ಕಂಡಕಂಡಲ್ಲಿ ಅಗೆದಿರುವುದರಿಂದ ಮಣ್ಣ್ಣೆಲ್ಲ ಚರಂಡಿ ಸೇರಿದೆ ಮತ್ತು ರಸ್ತೆಗಳಲ್ಲಿ ಅಪಾಯಕಾರಿ ಗುಂಡಿಗಳು ಎಂದು ಒಬ್ಬ ಹಿರಿಯರು ಹೇಳುತ್ತಾರೆ. ನಗರಸಭೆಯ ಸಿಬ್ಬಂದಿ ದುಡ್ಡು ಬಿಚ್ಚಿದರೆ ಮಾತ್ರ ಕೆಲಸ ಮಾಡುತ್ತಾರೆ. ನಗರಸಭೆ ಇದ್ದೂ ಇಲ್ಲದ ಸ್ಥಿತಿ ಸೃಷ್ಟಿಯಾಗಿದೆ ಎಂದು ಅವರು ಹೇಳುತ್ತಾರೆ. ಜನಪ್ರತಿನಿಧಿಗಳ್ಯಾರೂ ಅವರಲ್ಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಲ್ಲವಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಾಗಲಕೋಟೆ: ರೈತನಿಗೆ ತಪ್ಪದ ಸಂಕಷ್ಟ; ಅಕಾಲಿಕ ಮಳೆಯಿಂದ ನೆಲಕ್ಕುರುಳಿದ ಲಕ್ಷಾಂತರ ರೂ. ಬಾಳೆ