ಹಾಡಹಗಲೇ ಗ್ರಾಮದೊಳಕ್ಕೆ ನುಸುಳಿದ 2 ಸಾವಿರ ಹಸುಗಳು! ಬೇಸ್ತುಬಿದ್ದ ಗ್ರಾಮಸ್ಥರು
ಈ ಹಸುಗಳು ಎಲ್ಲಾ ಕೊಪ್ಪಳ ಮೂಲದ ದನಗಳು ಎಂದು ಗುರುತಿಸಲಾಗಿದೆ. ಮೇವಿನ ಕೊರತೆಯಿಂದ ಈ ದನಗಳನ್ನು ಆ ಕಡೆ ಮೇಯಿಸಲು ಹೊಡೆದು ಕೊಂಡು ಬಂದಿದ್ದಾರೆ ಎನ್ನಲಾಗಿದೆ. ಜನರು ಏಕಾಏಕಿ ಇಷ್ಟೊಂದು ಹಸುಗಳನ್ನ ಕಂಡು ಬೇಸ್ತುಬಿದ್ದಿದ್ದಂತೂ ಸತ್ಯ.
ಸುಮಾರು 2 ಸಾವಿರಕ್ಕೂ ಹೆಚ್ಚು ಜಾನುವಾರುಗಳು (cattle) ಗ್ರಾಮವೊಂದರಲ್ಲಿ ಏಕಾಏಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ಊರಿಗೆ ಊರಿನ ಜನರು (villagers) ಬೆರಗಾದ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು (ranebennur, haveri) ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ (medleri village) ಹಾಡಹಗಲೆ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಏಕಾಏಕಿ ಸುಮಾರು ಎರಡು ಸಾವಿರಕ್ಕೂ ಅಧಿಕ ಹಸುಗಳು ಆಗಮಿಸಿದ್ದು ಊರಿಗೆ ಊರೇ ಬೆರಗು ಹುಟ್ಟಿಸುವಂತೆ ಮಾಡಿದೆ.
ಈ ಹಸುಗಳು ಎಲ್ಲಾ ಕೊಪ್ಪಳ ಮೂಲದ ದನಗಳು ಎಂದು ಗುರುತಿಸಲಾಗಿದೆ. ಮೇವಿನ ಕೊರತೆಯಿಂದ ಈ ದನಗಳನ್ನು ಆ ಕಡೆ ಮೇಯಿಸಲು ಹೊಡೆದು ಕೊಂಡು ಬಂದಿದ್ದಾರೆ ಎನ್ನಲಾಗಿದೆ. ಜನರು ಏಕಾಏಕಿ ಇಷ್ಟೊಂದು ಹಸುಗಳನ್ನ ಕಂಡು ಬೇಸ್ತುಬಿದ್ದಿದ್ದಂತೂ ಸತ್ಯ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ
ಇದನ್ನೂ ಓದಿ: ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ; ವಾಟರ್ ಸ್ಪ್ರೇ ಮಾಡುವ ಮೂಲಕ ರಕ್ಷಣೆಗೆ ಮುಂದಾದ ರೈತ
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos