ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ; ವಾಟರ್ ಸ್ಪ್ರೇ ಮಾಡುವ ಮೂಲಕ ರಕ್ಷಣೆಗೆ ಮುಂದಾದ ರೈತ

ದ್ರಾಕ್ಷಿ ಬೆಳೆಯುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಫೇಮಸ್. ಪ್ರತಿ ವರ್ಷ ಸೀಸನ್​ನಲ್ಲಿ ದ್ರಾಕ್ಷಿ ಬೆಳೆದು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವುದರ ಮೂಲಕ ನೆಮ್ಮದಿ ಬದುಕು ಕಟ್ಟಿಕೊಂಡಿದ್ದರು. ಆದ್ರೆ, ಈ ಭಾರಿಯ ರಣ ಬಿಸಿಲಿನ ತಾಪಮಾನ ಮತ್ತು ಉಷ್ಣಾಂಶದಿಂದ ದ್ರಾಕ್ಷಿ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ; ವಾಟರ್ ಸ್ಪ್ರೇ ಮಾಡುವ ಮೂಲಕ ರಕ್ಷಣೆಗೆ ಮುಂದಾದ ರೈತ
ಚಿಕ್ಕಬಳ್ಳಾಪುರದಲ್ಲಿ ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 10, 2024 | 6:59 PM

ಚಿಕ್ಕಬಳ್ಳಾಪುರ, ಮೇ.10: ಚಿಕ್ಕಬಳ್ಳಾಪುರ ಜಿಲ್ಲೆಯೂ ದ್ರಾಕ್ಷಿ ಬೆಳೆ(Grape crop)ಗೆ ಹೆಸರುವಾಸಿಯಾಗಿದೆ. ಅದರಂತೆ ಪ್ರತಿ ವರ್ಷ ಸೀಸನ್​ನಲ್ಲಿಯೂ ದ್ರಾಕ್ಷಿ ಬೆಳೆದು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಆದರೆ, ಈ ಬಾರಿ ರಣ ಬಿಸಿಲಿನ ತಾಪ ಹಾಗೂ ಉಷ್ಣತೆ ಹೆಚ್ಚಾದ ಪರಿಣಾಮ ಬಳ್ಳಿಯಲ್ಲಿಯೇ ದ್ರಾಕ್ಷಿ ಬಾಡಿ ಹೋಗುತ್ತಿದೆ. ಮತ್ತೊಂದೆಡೆ ದ್ರಾಕ್ಷಿಗೆ ಕಾಯಿಲೆ ಆರಂಭವಾಗಿದೆ. ಇದರಿಂದ ಪ್ರತಿನಿತ್ಯ ಔಷಧಿ ಸಿಂಪಡಿಸುವ ಜೊತೆಗೆ ಬೂಮರ್ ಯಂತ್ರಗಳ ಮೂಲಕ ದಿನಕ್ಕೆ ನಾಲ್ಕು ಬಾರಿ ವಾಟರ್ ಸ್ಪ್ರೇ ಮಾಡುವುದರ ಮೂಲಕ ದ್ರಾಕ್ಷಿಯನ್ನು ರಕ್ಷಣೆ ಮಾಡಿಕೊಳ್ಳವಂತಾಗಿದೆ.

ಇನ್ನು ಚಿಕ್ಕಬಳ್ಳಾಪರ ತಾಲ್ಲೂಕಿನ ದೊಡ್ಡಮರಳಿ ಗ್ರಾಮದ ರೈತ ಸಹೋದರರಾದ ವೆಂಕಟೇಶ ಹಾಗೂ ಮಂಜುನಾಥ್, ತಮ್ಮ ಎರಡೂವರೆ ಎಕರೆ ತೋಟದಲ್ಲಿ ಸುಮಾರು ಹತ್ತು ಲಕ್ಷ ಖರ್ಚು ಮಾಡಿ ರೆಡ್ ಗ್ಲೋಬ್ ಎಂಬ ಆಸ್ಟ್ರೇಲಿಯನ್ ಬ್ರೀಡ್ ದ್ರಾಕ್ಷಿ ಬೆಳೆದಿದ್ದಾರೆ. ಒಂದು ಕೆಜಿ ರೆಡ್ ಗ್ಲೋಬ್ ದ್ರಾಕ್ಷಿಯ ಬೆಲೆ ಬರೊಬ್ಬರಿ ನೂರ ಇಪ್ಪತ್ತರಿಂದ ನೂರೈವತ್ತು ರೂಪಾಯಿವರೆಗೂ ಮಾರಾಟವಾಗುತ್ತಿದೆ. ಆದ್ರೆ, ಈಗ ಬಿಸಿಲಿನಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದೆ ಒಂದು ಸಾಹಸವಾಗಿದೆ.

ಇದನ್ನೂ ಓದಿ:ವಿಜಯಪುರ: ಒಣದ್ರಾಕ್ಷಿ ಬೆಳೆದ ರೈತನಿಗೆ ಬೆಲೆ ಕುಸಿತದ ಬರೆ; ಬೆಂಬಲ ಬೆಲೆ ನಿಗದಿ ಮಾಡಲು ಸರ್ಕಾರಕ್ಕೆ ಮನವಿ

ಒಟ್ಟಿನಲ್ಲಿ ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತಿನ ಹಾಗೆ ವರ್ಷಾನುಗಟ್ಟಲೇ ಬೆವರು ಸುರಿಸಿ ಬೆಳೆದ ದ್ರಾಕ್ಷಿ ಬೆಳೆಯನ್ನು ರಣ ಬಿಸಿಲು ಕೆಲವೇ ದಿನಗಳಲ್ಲಿ ನಾಶವಾಗುವಂತೆ ಮಾಡುತ್ತಿದೆ. ಇದರಿಂದ ಬಿಸಿಲಿಗೆ ಸವಾಲ್ ಹಾಕಿರುವ ರೈತರು, ಬೂಮರ್ ಯಂತ್ರದ ಮೂಲಕ ವಾಟರ್ ಸ್ಪ್ರೇ ಮಾಡಿ ರಕ್ಷಣೆಗೆ ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ