ದೇವನಹಳ್ಳಿಯಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿದ್ದ ದ್ರಾಕ್ಷಿ ಬೆಳೆ ನಾಶ! ಕಿಡಿಗೇಡಿಗಳ ಕೃತ್ಯಕ್ಕೆ ರೈತ ಕಂಗಾಲು
ರೈತ ಕೆಂಪೇಗೌಡ ಮೂರು ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದಿದ್ದಾರೆ. ಆದರೆ ಕಿಡಿಗೇಡಿಗಳು ಒಂದೂವರೆ ಎಕರೆಯಷ್ಟು ದ್ರಾಕ್ಷಿ ಗಿಡಗಳನ್ನ ಕತ್ತರಿಸಿ ಪರಾರಿಯಾಗಿದ್ದಾರೆ. ಇಂದು ದ್ರಾಕ್ಷಿ ಗಿಡಗಳಿಗೆ ನೀರು ಹಾಯಿಸಲು ತೋಟದ ಬಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪಿ.ರಂಗನಾಥಪುರದಲ್ಲಿ ಕಿಡಿಗೇಡಿಗಳು ದ್ರಾಕ್ಷಿ ಬೆಳೆ ನಾಶ ಮಾಡಿದ್ದಾರೆ. ದುಷ್ಕರ್ಮಿಗಳು ರೈತ ಕೆಂಪೇಗೌಡ ಎಂಬುವವರಿಗೆ ಸೇರಿದ ಸುಮಾರು 3 ಎಕರೆ ಪ್ರದೇಶದಲ್ಲಿ ಒಂದೂವರೆ ಎಕರೆ ದ್ರಾಕ್ಷಿ ಗಿಡಗಳನ್ನು ಕತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಲ ಮಾಡಿ ದ್ರಾಕ್ಷಿ ಗಿಡ ಬೆಳೆದಿದ್ದ ರೈತ ಕಂಗಾಲಾಗಿದ್ದಾರೆ.
ರೈತ ಕೆಂಪೇಗೌಡ ಮೂರು ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದಿದ್ದಾರೆ. ಆದರೆ ಕಿಡಿಗೇಡಿಗಳು ಒಂದೂವರೆ ಎಕರೆಯಷ್ಟು ದ್ರಾಕ್ಷಿ ಗಿಡಗಳನ್ನ ಕತ್ತರಿಸಿ ಪರಾರಿಯಾಗಿದ್ದಾರೆ. ಇಂದು ದ್ರಾಕ್ಷಿ ಗಿಡಗಳಿಗೆ ನೀರು ಹಾಯಿಸಲು ತೋಟದ ಬಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ರೈತ ಸಾಲ ಮಾಡಿ ದ್ರಾಕ್ಷಿ ಗಿಡ ಬೆಳೆದಿದ್ದರು. ದ್ರಾಕ್ಷಿ ಗಿಡಗಳ ನಾಶದಿಂದಾಗಿ ರೈತ ಕಂಗಾಲಾಗಿದ್ದಾರೆ.
ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಬೆಳೆ ಸಂಪೂರ್ಣ ನೀರು ಪಾಲಾಗಿತ್ತು. ಬದುಕು ನಡೆಸುವುದು ಹೇಗೆ ಅಂತ ರೈತರು ಕಂಗಾಲಾಗಿದ್ದರು. ಈ ನಡುವೆ ಕಿಡಿಗೇಡಿಗಳು ಅಮಾನವೀಯತೆ ಮೆರೆದು ದ್ರಾಕ್ಷಿ ಬೆಳೆ ನಾಶಪಡಿಸಿದ್ದಾರೆ.
ಕಬ್ಬು ಬೆಂಕಿಗಾಹುತಿ ಹುಬ್ಬಳ್ಳಿಯಲ್ಲಿ ಆಕಸ್ಮಿಕವಾಗಿ ತಗುಲಿ 50ಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾದ ಘಟನೆ ನಿನ್ನೆ ನಡೆದಿದೆ. ಸುಮಾರು 10ಕ್ಕೂ ಅಧಿಕ ರೈತರ ಕಬ್ಬು ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ. ತೋಟದ ಮಧ್ಯದಲ್ಲಿ ಹಾದು ಹೋದ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ ಸಂಭವಿಸಿದ್ದು, ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಆದರೂ 50ಕ್ಕೂ ಹೆಚ್ಚು ಎಕರೆ ಕಬ್ಬಿನ ಬೆಳೆ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ
ಒಮಿಕ್ರಾನ್ ಬರದಂತೆ ಔಷಧಿ ಕೊಡುತ್ತೇನೆ ಎಂದು ವಂಚನೆ; ನಕಲಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ
Alappuzha Murder: ಕೇರಳದಲ್ಲಿ 12 ಗಂಟೆಯಲ್ಲಿ ಇಬ್ಬರು ರಾಜಕೀಯ ನಾಯಕರ ಹತ್ಯೆ; ಅಲಪ್ಪುಳದಲ್ಲಿ ನಿಷೇಧಾಜ್ಞೆ ಜಾರಿ
Published On - 3:29 pm, Sun, 19 December 21