ಹಾವುಗಳು ಸಾಮಾನ್ಯವಾಗಿ ಆಹಾರ ಅರಸುತ್ತಾ ಮನೆಗಳಿಗೆ ಬರುತ್ತವೆ. ಇದು ಸಹಜ. ಇಲಿ ಕಣ್ಣಿಗೆ ಬಿದ್ದರೆ ಸಾಕು ಅದನ್ನ ಹಿಂಬಾಲಿಸುತ್ತಾ ಮನೆಗಳಿಗೂ ನುಗ್ಗುತ್ತವೆ. ಆದರೆ ಮನೆಯವರಿಗೆ ಹಾವು ನುಗ್ಗಿರುವ ಬಗ್ಗೆ ಅರಿವು ಇರಲ್ಲ. ಅದೃಷ್ಟ ಕೆಟ್ಟರೆ ಹಾವು ಜೀವವನ್ನೇ ತೆಗೆಯುವ ಸಾಧ್ಯತೆ ಇರುತ್ತದೆ. ಬೆಂಗಳೂರು ಉತ್ತರ ತಾಲೂಕಿನ ನಾಗಸಂದ್ರದ ಮನೆಯೊಂದರ ಸಜ್ಜೆ ಮೇಲೆ ಬುಸ್ ಬುಸ್ ನಾಗ ಪ್ರತ್ಯಕ್ಷವಾಗಿದೆ. ರಾಮಕೃಷ್ಣಪ್ಪ ಎಂಬುವವರ ಮನೆಯಲ್ಲಿ ಸುಮಾರು 6 ಅಡಿ ನಾಗರಹಾವು ಕಂಡು ಕುಟುಂಬಸ್ಥರು ಭಯಭೀತರಾಗಿದ್ದರು. ಯಾರು ಇಲ್ಲದ ವೇಳೆಯಲ್ಲಿ ನಾಗರಹಾವು ಕಿಟಕಿ ಮುಖಾಂತರ ಸಜ್ಜೆ ಸೇರಿದೆ ಎಂದು ಹೇಳಲಾಗುತ್ತಿದೆ. ವಸ್ತುವೊಂದನ್ನ ತೆಗೆದು ಕೊಳ್ಳುವಾಗ ಹಾವು ಶಬ್ದ ಮಾಡಿದೆ. ಕೂಡಲೇ ಹಾವು ರಕ್ಷಕ ನಾಗೇಂದ್ರ ಅವರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ನಾಗರಹಾವನ್ನು ರಕ್ಷಿಸಿದ ನಾಗೇಂದ್ರ ಹೆಸರಘಟ್ಟ ಅರಣ್ಯ ಪ್ರದೇಶದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ