ಯುಪಿ+ಯೋಗಿ=ಉಪಯೋಗಿ; ಗಂಗಾ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿ ಯೋಗಿ ಸರ್ಕಾರವನ್ನು ಹೊಗಳಿದ ಪ್ರಧಾನಿ ಮೋದಿ, ವಿರೋಧಿಗಳಿಗೆ ತಿರುಗೇಟು

ಯುಪಿ+ಯೋಗಿ=ಉಪಯೋಗಿ; ಗಂಗಾ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿ ಯೋಗಿ ಸರ್ಕಾರವನ್ನು ಹೊಗಳಿದ ಪ್ರಧಾನಿ ಮೋದಿ, ವಿರೋಧಿಗಳಿಗೆ ತಿರುಗೇಟು
ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ

Uttar Pradesh Assembly Election 2022: ಅಖಿಲೇಶ್​ ಯಾದವ್ ವಿರುದ್ಧ ಪರೋಕ್ಷವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಇಲ್ಲಿನ ಜನರ ಹಣ ಹೇಗೆ ಬಳಕೆಯಾಗುತ್ತಿತ್ತುಎಂಬುದು ಎಲ್ಲರಿಗೂ ಗೊತ್ತಿತ್ತು ಎಂದಿದ್ದಾರೆ.

TV9kannada Web Team

| Edited By: Lakshmi Hegde

Dec 18, 2021 | 4:37 PM

ಲಖನೌ: ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಇಂದು ಉತ್ತರಪ್ರದೇಶದ ಶಾಹಜಂಪುರದಲ್ಲಿ ಗಂಗಾ ಎಕ್ಸ್​ಪ್ರೆಸ್​ ವೇ (Ganga Expressway) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 36,230 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, ಉತ್ತರಪ್ರದೇಶದ ಅಭಿವೃದ್ಧಿ ಯೋಜನೆಗಳಲ್ಲಿ ಇದೂ ಒಂದಾಗಿದೆ. ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು​ ಅವರನ್ನು ಹೊಗಳಿದರು. ಉತ್ತರಪ್ರದೇಶಗಳಲ್ಲಿ ಈಗ ಮಾಫಿಯಾಗಳು ಬುಲ್ಡೋಜರ್​ ಅಡಿಗೆ ಆಗಿವೆ. ಈ ಬುಲ್ಡೋಜರ್​​ಗಳ ಬ್ಲೇಡ್​ಗಳು ಅಕ್ರಮ ನಿರ್ಮಾಣಗಳನ್ನೆಲ್ಲ ಬುಡಸಮೇತ ಕಿತ್ತು ಒಗೆಯುತ್ತಿವೆ. ಅದನ್ನು ಬೆಳೆಸಿದವರೆಲ್ಲ ಒಂದೇ ಸಮ ಅಳುತ್ತಿದ್ದಾರೆ. ಈಗ ಇಲ್ಲಿನ ಜನರ ಬಾಯಲ್ಲಿ ಯುಪಿ+ಯೋಗಿ=ಉಪಯೋಗಿ (ಅಂದರೆ ಉತ್ತರಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ತುಂಬ ಉಪಯೋಗ, ಅನುಕೂಲ ಮಾಡಿದೆ) ಎಂದು ಹೇಳುತ್ತಿದ್ದಾರೆ.

ಉತ್ತರಪ್ರದೇಶದಲ್ಲಿ ಬರುವ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇದೇ ಬೆನ್ನಲ್ಲೇ ಅಲ್ಲಿ ಸಾಲುಸಾಲು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೋಗಿ ಮಾಡುತ್ತಿದ್ದಾರೆ. ಇದನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿ ಇನ್ನಿತರರು ಟೀಕಿಸಿದ್ದಾರೆ.  ಇಷ್ಟರ ಮಧ್ಯೆ ಇಂದು ಅಖಿಲೇಶ್ ಯಾದವ್​ ಆಪ್ತರೆನಿಸಿಕೊಂಡಿದ್ದವರ ಮೇಲೆ ಐಟಿ ದಾಳಿಯಾಗಿದೆ. ಹೀಗೆ ದಾಳಿಯಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಅಖಿಲೇಶ್ ಯಾದವ್​, ಬಿಜೆಪಿ ಕೇಂದ್ರ ತನಿಖಾ ದಳಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.  ಚುನಾವಣೆ ಬರುತ್ತಿದ್ದಂತೆ ಟ್ಯಾಕ್ಸ್ ಡಿಪಾರ್ಟ್​ಮೆಂಟ್​ಗಳು, ಜಾರಿ ನಿರ್ದೇಶನಾಲಯ, ಸಿಬಿಐಗಳೆಲ್ಲ ಕಾರ್ಯಪ್ರವೃತ್ತವಾಗುತ್ತಿವೆ. ಆದರೆ ಸೈಕಲ್​ (ಸಮಾಜವಾದಿ ಪಕ್ಷ) ನಿಲ್ಲುವುದಿಲ್ಲ ಎಂದು ಹೇಳಿದ್ದರು.

ಅದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಅಖಿಲೇಶ್​ ಯಾದವ್ ವಿರುದ್ಧ ಪರೋಕ್ಷವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಇಲ್ಲಿನ ಜನರ ಹಣ ಹೇಗೆ ಬಳಕೆಯಾಗುತ್ತಿತ್ತುಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಈಗ ಹಾಗಿಲ್ಲ. ಜನಸಾಮಾನ್ಯರ ಹಣ ಉತ್ತರಪ್ರದೇಶದ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ಹೇಳಿದರು. ಹಾಗೇ, ಕೆಲವು ಪಕ್ಷಗಳಿಗೆ ನಮ್ಮ ದೇಶದ ಪರಂಪರೆಗಳೇ ಸಮಸ್ಯೆಯಾಗಿದೆ. ಅವರಿಗೆ ಕಾಶಿ ವಿಶ್ವನಾಥ ಧಾಮ, ಅಯೋಧ್ಯೆ ರಾಮಮಂದಿರಗಳೆಲ್ಲವೂ ದೊಡ್ಡ ಸಮಸ್ಯೆಯೇ ಆಗಿದೆ. ಇವರು ಸೇನೆ, ಮೇಕ್​ ಇನ್​ ಇಂಡಿಯಾ ಯೋಜನೆಗಳು, ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿ ಎಲ್ಲವನ್ನೂ ಪ್ರಶ್ನಿಸುತ್ತಾರೆ ಎಂದು ಪಿಎಂ ಮೋದಿ ಹೇಳಿದರು.

ಇದನ್ನೂ ಓದಿ:  Ganga Expressway: ಉತ್ತರ ಪ್ರದೇಶ ಅತ್ಯಂತ ಆಧುನಿಕ ರಾಜ್ಯವಾಗಿ ಗುರುತಿಸಲ್ಪಡುವ ದಿನ ದೂರವಿಲ್ಲ; ಗಂಗಾ ಎಕ್ಸ್​​ಪ್ರೆಸ್​ವೇ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು

Follow us on

Related Stories

Most Read Stories

Click on your DTH Provider to Add TV9 Kannada