AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganga Expressway: ಉತ್ತರ ಪ್ರದೇಶ ಅತ್ಯಂತ ಆಧುನಿಕ ರಾಜ್ಯವಾಗಿ ಗುರುತಿಸಲ್ಪಡುವ ದಿನ ದೂರವಿಲ್ಲ; ಗಂಗಾ ಎಕ್ಸ್​​ಪ್ರೆಸ್​ವೇ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು

PM Narendra Modi: ಉತ್ತರ ಪ್ರದೇಶದ ಶಹಜಾನ್​ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ₹ 36,230 ಕೋಟಿ ವೆಚ್ಚದ ಗಂಗಾ ಎಕ್ಸ್​​ಪ್ರೆಸ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

Ganga Expressway: ಉತ್ತರ ಪ್ರದೇಶ ಅತ್ಯಂತ ಆಧುನಿಕ ರಾಜ್ಯವಾಗಿ ಗುರುತಿಸಲ್ಪಡುವ ದಿನ ದೂರವಿಲ್ಲ; ಗಂಗಾ ಎಕ್ಸ್​​ಪ್ರೆಸ್​ವೇ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು
ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಮೋದಿ ಭಾಷಣ
TV9 Web
| Updated By: shivaprasad.hs|

Updated on:Dec 18, 2021 | 2:47 PM

Share

ಶಹಜಾನ್​​ಪುರ: ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರ ಜಿಲ್ಲೆಯಲ್ಲಿ (Shajanpura) 594 ಕಿಮೀ ಉದ್ದದ ಸುಮಾರು ₹ 36,230 ಕೋಟಿ ರೂ ವೆಚ್ಚದ ಗಂಗಾ ಎಕ್ಸ್‌ಪ್ರೆಸ್‌ವೇಗೆ (Ganga Expressway) ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಡಿಸೆಂಬರ್ 18) ಶಿಲಾನ್ಯಾಸ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗಂಗಾ ಎಕ್ಸ್​ಪ್ರೆಸ್​ ಹೈವೇ ಉತ್ತರ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯುವಕರಿಗೆ ಉದ್ಯೋಗ ಪಡೆಯಲು ಇದು ಸಹಕಾರಿಯಾಗಿದೆ. ಜತೆಗೆ ಗಂಗಾ ಎಕ್ಸ್​ಪ್ರೆಸ್​ ಹೈವೇ ಕೆಲಸ ಇಂದಿನಿಂದಲೇ ಪ್ರಾರಂಭವಾಗಲಿದೆ ಎಂದು ಹೇಳಿದರು. ಎಕ್ಸ್​ಪ್ರೆಸ್​​ ವೇ ಕುರಿತು ಮಾತನಾಡಿದ ಪ್ರಧಾನಿ, ‘‘ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನ್‌ಪುರ್, ಹರ್ದೋಯಿ, ಉನ್ನಾವೋ, ರಾಯ್‌ಬರೇಲಿ, ಪ್ರತಾಪ್‌ಗಢ್ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ. ಸುಮಾರು 600 ಕಿಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇಗೆ 36,000 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ. ಗಂಗಾ ಎಕ್ಸ್‌ಪ್ರೆಸ್‌ವೇ ಈ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳನ್ನು ತರುತ್ತದೆ’’ ಎಂದಿದ್ದಾರೆ.

ಎಕ್ಸ್‌ಪ್ರೆಸ್‌ವೇ ಸಾವಿರಾರು ಯುವಕರಿಗೆ ಹಲವಾರು ಉದ್ಯೋಗಗಳು ಮತ್ತು ಹಲವಾರು ಹೊಸ ಅವಕಾಶಗಳನ್ನು ತರುತ್ತದೆ. ಮುಂದಿನ ಪೀಳಿಗೆಯಲ್ಲಿ ಮೂಲಸೌಕರ್ಯಗಳನ್ನು ಹೊಂದಿರುವ ಅತ್ಯಂತ ಆಧುನಿಕ ರಾಜ್ಯವಾಗಿ ಉತ್ತರ ಪ್ರದೇಶ ಗುರುತಿಸಲ್ಪಡುವ ದಿನ ದೂರವಿಲ್ಲ. ಯುಪಿಯಲ್ಲಿ ಹೆದ್ದಾರಿಗಳ ಸಮೂಹ, ನಿರ್ಮಿಸಲಾಗುತ್ತಿರುವ ಹೊಸ ವಿಮಾನ ನಿಲ್ದಾಣಗಳು, ಹೊಸ ರೈಲು ಮಾರ್ಗಗಳು ಮುಂದೆ ಜನರಿಗೆ ಏಕಕಾಲದಲ್ಲಿ ಹಲವಾರು ಉಪಯೋಗಗಳನ್ನು ಒದಗಿಸಲಿವೆ ಎಂದು ಮೋದಿ ನುಡಿದಿದ್ದಾರೆ.

‘‘ಇಂದು ಉತ್ತರ ಪ್ರದೇಶದಲ್ಲಿ ಆಧುನಿಕ ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದು ಕಾಣಸಿಗುತ್ತದೆ. ಈ ಹಿಂದೆ ಸಾರ್ವಜನಿಕರ ಹಣವನ್ನು ಹೇಗೆ ಬಳಸಲಾಗಿದೆ ಎಂಬುದನ್ನು ನೀವು ನೋಡಿದ್ದೀರಿ. ಆದರೆ ಇಂದು ಉತ್ತರ ಪ್ರದೇಶದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಈ ಹಿಂದೆ ತಮ್ಮ ಖಜಾನೆಯನ್ನು ತಾವೇ ತುಂಬಿಸಿಕೊಳ್ಳಲು ದೊಡ್ಡ ದೊಡ್ಡ ಯೋಜನೆಗಳನ್ನು ಕಾಗದದಲ್ಲಿ ಆರಂಭಿಸಲಾಗುತ್ತಿತ್ತು’’ ಎಂದು ಪ್ರಧಾನಿ ವಿಪಕ್ಷಗಳನ್ನು ಕುಟುಕಿದ್ದಾರೆ. ಪ್ರಸ್ತುತ ಜನರ ಹಣವನ್ನು ಯೋಜನೆಗಳಿಗೆ ಬಳಸಲಾಗುತ್ತಿದೆ. ಇದರ ಹಣ ಜನರಲ್ಲೇ ಉಳಿಯಲಿದೆ ಎಂದು ಮೋದಿ ನುಡಿದಿದ್ದಾರೆ.

ಏನಿದು ಗಂಗಾ ಎಕ್ಸ್​ಪ್ರೆಸ್​ವೇ? ಉತ್ತರಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗವನ್ನು ಸಂಪರ್ಕಿಸುವ ‘ಗಂಗಾ ಎಕ್ಸ್​ಪ್ರೆಸ್ ವೇ’, ದೆಹಲಿ, ಹರ್ಯಾಣ ಮತ್ತು ಬಿಹಾರಕ್ಕೆ ಉತ್ತರಪ್ರದೇಶವನ್ನು ಇನ್ನಷ್ಟು ಸಮೀಪ ಮಾಡಲಿದೆ. ಗಂಗಾ ಎಕ್ಸ್​ಪ್ರೆಸ್​ ವೇ 594 ಕಿಮೀ ಉದ್ದ ಇರಲಿದ್ದು, 2020ರ ನವೆಂಬರ್​ 26ರಂದು ಯೋಗಿ ಆದಿತ್ಯನಾಥ್​ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಸುಮಾರು ₹ 36,000 ಕೋಟಿ ಅನುದಾನದಲ್ಲಿ ಈ ಯೋಜನೆ ನಿರ್ಮಾಣವಾಗುತ್ತಿದೆ.

ಗಂಗಾ ಎಕ್ಸ್​ಪ್ರೆಸ್​ ವೇ ಮೀರತ್​​ನಿಂದ ಪ್ರಾರಂಭವಾಗಲಿದ್ದು, ಹಾಪುರ, ಬುಲಂದ್​ಶಹರ್​, ಅಮ್ರೋಹಾ, ಸಂಭಲ್​, ಬಾದೌನ್​, ಶಹಜಹಾನ್‌ಪುರ, ಹರ್ದೋಯಿ, ಉನ್ನಾವೋ, ರಾಯ್ ಬರೇಲಿ ಮತ್ತು ಪ್ರತಾಪ್‌ಗಢಗಳ ಮೂಲಕ ಹಾದುಹೋಗಲಿದೆ. ರಾಜ್ಯದಲ್ಲಿರುವ ಉಳಿದ ಎಕ್ಸ್​ಪ್ರೆಸ್​​ವೇಗಳಂತೆ ಈ ಎಕ್ಸ್​ಪ್ರೆಸ್​ ವೇ ಕೂಡ ಏರ್​ಸ್ಟ್ರಿಪ್​ ಹೊಂದಿರಲಿದ್ದು, ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅವಕಾಶ ಇರಲಿದೆ.

ಯೋಜನೆಯ ವಿನ್ಯಾಸದ ಪ್ರಕಾರ ಎಕ್ಸ್​ಪ್ರೇಸ್​ ವೇಗೆ ಘರ್​ಮುಕ್ತೇಶ್ವರ್​​ನಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದು ಹಾಪುರ ಮತ್ತು ಬುಲಂದ್​ಶಹರ್​ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅದರ ಹೊರತಾಗಿ ಗಂಗಾ ಎಕ್ಸ್​ಪ್ರೆಸ್​ ವೇ ಮಧ್ಯೆ, 9 ಸಾರ್ವಜನಿಕ ಅನುಕೂಲ ಕೇಂದ್ರಗಳು, 7 ರೈಲ್ವೆ ಮೇಲ್ಸೇತುವೆಗಳು, 14 ದೊಡ್ಡ ಸೇತುವೆಗಳು, 126 ಚಿಕ್ಕ ಸೇತುವೆಗಳು, 381 ಅಂಡರ್​ಪಾಸ್​ಗಳು ನಿರ್ಮಾಣವಾಗಲಿವೆ.

ಇದನ್ನೂ ಓದಿ:

ಭಾರತದಲ್ಲಿ ಬೂಸ್ಟರ್​ ಡೋಸ್​ ಆಗಿ ಕೊವಾವ್ಯಾಕ್ಸ್​ ಲಸಿಕೆ ನೀಡುವುದು ಉತ್ತಮ, ಕೊವಿಶೀಲ್ಡ್ ಬೇಡ ಎಂದ ಅನುರಾಗ್ ಅಗರ್​ವಾಲ್​

ಮದ್ಯದ ದೊರೆ ವಿಜಯ್​ಮಲ್ಯ ಜೀವನಾಧಾರಿತ ಬಯೋಪಿಕ್​ ಚಿತ್ರೀಕರಣ ಶೀಘ್ರದಲ್ಲೇ ಆರಂಭ

Published On - 2:32 pm, Sat, 18 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ