ಮದ್ಯದ ದೊರೆ ವಿಜಯ್ಮಲ್ಯ ಜೀವನಾಧಾರಿತ ಬಯೋಪಿಕ್ ಚಿತ್ರೀಕರಣ ಶೀಘ್ರದಲ್ಲೇ ಆರಂಭ
ದಿ ವಿಜಯ್ ಮಲ್ಯ ಲೈಫ್ ಸ್ಟೋರಿ ಎನ್ನುವ ಪುಸ್ತಕದ ಆಧಾರದ ಮೇಲೆ ಅದರಲ್ಲಿರುವ ಅಂಶಗಳನ್ನು ಇಟ್ಟುಕೊಂಡು ವೆಬ್ ಸೀರೀಸ್ ಮಾಡಲಾಗುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ
ಮದ್ಯಲೋಕದ ದೊರೆ ವಿಜಯ್ ಮಲ್ಯ ಜೀವನದ ಕಥೆ ವೆಬ್ ಸೀರೀಸ್ ಆಗುತ್ತಿದೆ. ಸಾವಿರಾರು ಕೋಟಿ ವಂಚಿಸಿ ಇಂಗ್ಲೆಂಡ್ಗೆ ಪರಾರಿಯಾದ ಮಲ್ಯ ಜೀವನಾಧಾರಿತ ಬಯೋಪಿಕ್ ತಯಾರಾಗುತ್ತಿದೆ. ದಿ ವಿಜಯ್ ಮಲ್ಯ ಲೈಫ್ ಸ್ಟೋರಿ ಎನ್ನುವ ಪುಸ್ತಕದ ಆಧಾರದ ಮೇಲೆ ಅದರಲ್ಲಿರುವ ಅಂಶಗಳನ್ನು ಇಟ್ಟುಕೊಂಡು ವೆಬ್ ಸೀರೀಸ್ ಮಾಡಲಾಗುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ. ಆಲ್ಮೈಟಿ ಮೋಷನ್ ಪಿಕ್ಚರ್ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಬ್ಲಿನ್ ಕೌರ್ ಅವರು pz ಪಿಕ್ಚರ್ ಸಂಸ್ಥೆಯು ಜಂಟಿಯಾಗಿ ವೆಬ್ ಸೀರೀಸ್ ನಿರ್ಮಾಣ ಮಾಡುತ್ತಿದ್ದಾರೆ. ಖ್ಯಾತ ಪತ್ರಕರ್ತ, ಬರಹಗಾರ ಕೆ ಗಿರೀಶ್ ಅವರು ವಿಜಯ್ ಮಲ್ಯ ಜೀವನದ ಸೋಲು, ಗೆಲುವಿನ ಕುರಿತು ದಿ ವಿಜಯ್ ಮಲ್ಯ ಲೈಫ್ ಸ್ಟೋರಿ ಪುಸ್ತಕದಲ್ಲಿ ಬರೆದಿದ್ದಾರೆ. ಇದರ ಪ್ರಮುಖ ಅಂಶಗಳನ್ನು ಇಟ್ಟುಕೊಂಡು ವೆಬ್ ಸೀರೀಸ್ನಲ್ಲಿ ವಿಜಯ್ ಮಲ್ಯ ಅವರ ಬಾಲ್ಯ, ಅವರ ಯಶಸ್ಸು, ಸೋಲಿನ ಕತೆಗಳನ್ನು ತರಲಾಗುತ್ತಿದೆ ಎಂದು ಹೇಳಲಾಗಿದೆ.
ಎಮ್ ಎಕ್ಸ್ ಪ್ಲೇಯರ್ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು ಸದ್ಯದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ. ವಿಜಯ್ ಮಲ್ಯ ಪಾತ್ರದಲ್ಲಿ ಬಾಲಿವುಡ್ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಎಮ್ ಎಕ್ಸ್ ಪ್ಲೇಯರ್ ಒಟಿಟಿ ಮೂಲಕ ವೆಬ್ ಸೀರೀಸ್ ಅನ್ನು ಬಿಡುಗಡೆಗೊಳಿಸಲಿದೆ. ಈಗಾಗಲೇ ಎಮ್ ಎಕ್ಸ್ ಪ್ಲೇಯರ್ಆಶ್ರಮ್, ಕ್ವೀನ್ನಂತಹ ವೆಬ್ ಸೀರೀಸ್ಗಳನ್ನು ಸ್ಟ್ರೀಮಿಂಗ್ ಮಾಡಿದೆ. ಹೀಗಾಗಿ ವಿಜಯ್ ಮಲ್ಯ ಅವರ ಜೀವನದ ಸಂಪೂರ್ಣ ಚಿತ್ರಣವನ್ನು ಪಡೆಯಲು ವೀಕ್ಷಕರೂ ಕೂಡ ಕಾತುರದಿಂದ ಕಾಯುತ್ತಿದ್ದಾರೆ.
ಉನೈಟೆಡ್ ಸ್ಪಿರಿಟ್ಸ್ , ಕಿಂಗ್ಪಿಷರ್ನಂತಹ ಮದ್ಯದ ಕಂಪನಿಗಳನ್ನು ಹೊಂದಿದ್ದ ವಿಜಯ್ ಮಲ್ಯ ಭಾರತ ಮಾತ್ರವಲ್ಲದೆ ವಿದೇಶಿ ಬ್ಯಾಂಕ್ಗಳಲ್ಲೂ ಕೋಟಿಗಟ್ಟಲೇ ವೆಚ್ಚದಲ್ಲಿ ಸಾಲ ಮಾಡಿಕೊಂಡಿದ್ದರು ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ಇಂಗ್ಲೆಂಡಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದರು.