ಭಾರತದಲ್ಲಿ ಬೂಸ್ಟರ್​ ಡೋಸ್​ ಆಗಿ ಕೊವಾವ್ಯಾಕ್ಸ್​ ನೀಡುವುದು ಉತ್ತಮ, ಕೊವಿಶೀಲ್ಡ್ ಬೇಡ ಎಂದ ಅನುರಾಗ್ ಅಗರ್​ವಾಲ್​

ಈ ಕೊವಾವ್ಯಾಕ್ಸ್​ ಲಸಿಕೆ ಒಮಿಕ್ರಾನ್​ ರೂಪಾಂತರದ ವಿರುದ್ಧ ಎಷ್ಟು ಪರಿಣಾಮಕಾರಿ ಎಂಬುದನ್ನು ಸ್ಪಷ್ಟವಾಗಿ ಅರಿಯಲು ಇನ್ನೂ ಕ್ಲಿನಿಕಲ್ ಅಧ್ಯಯನಗಳು ಅಗತ್ಯ ಇವೆ ಎಂದು ಅನುರಾಗ್​ ಅಗರ್​ವಾಲ್​ ತಿಳಿಸಿದ್ದಾರೆ.

ಭಾರತದಲ್ಲಿ ಬೂಸ್ಟರ್​ ಡೋಸ್​ ಆಗಿ ಕೊವಾವ್ಯಾಕ್ಸ್​ ನೀಡುವುದು ಉತ್ತಮ, ಕೊವಿಶೀಲ್ಡ್ ಬೇಡ ಎಂದ ಅನುರಾಗ್ ಅಗರ್​ವಾಲ್​
ಕೊವಾವ್ಯಾಕ್ಸ್​
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Dec 18, 2021 | 3:25 PM

ಸೀರಮ್​ ಸಂಸ್ಥೆ ಉತ್ಪಾದಿಸುವ ಕೊವಾವ್ಯಾಕ್ಸ್​ ಲಸಿಕೆಯ ತುರ್ತು ಬಳಕೆಗೆ ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮೋದನೆ ನೀಡಿದೆ. ಅದರ ಬೆನ್ನಲ್ಲೇ ಭಾರತ ಸರ್ಕಾರದ ಉನ್ನತ ವಿಜ್ಞಾನಿಯೊಬ್ಬರು, ಈ ಕೊವಾವ್ಯಾಕ್ಸ್​ನ್ನು ಭಾರತದಲ್ಲಿ ಬೂಸ್ಟರ್​ ಡೋಸ್​ ಆಗಿ ಬಳಸುವಂತೆ ಶಿಫಾರಸ್ಸು ಮಾಡಿದ್ದಾರೆ. ಇದೀಗ ಕೊವಿಡ್ 19 ಸೋಂಕಿನ ಹೊಸ ರೂಪಾಂತರವಾದ ಒಮಿಕ್ರಾನ್​ ದೇಶಕ್ಕೂ ಕಾಲಿಟ್ಟಿದ್ದು, ಈ ಹೊತ್ತಲ್ಲಿ ಕೊರೊನಾ ಲಸಿಕೆ ಇನ್ನೊಂದು ಡೋಸ್ ಅಗತ್ಯವಿದೆಯಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಸೂಚನೆ ಹೊರಬಿದ್ದಿಲ್ಲ. ಹೀಗಿರುವಾಗ ಸರ್ಕಾರದ ಜಿನೋಮ್ ಸಿಕ್ವೆನ್ಸಿಂಗ್​ ಮೇಲ್ವಿಚಾರಣೆ ಏಜೆನ್ಸಿಯ ಉನ್ನತ ನಿರ್ದೇಶಕ ಅನುರಾಗ್​ ಅಗರ್​ವಾಲ್​ ಹೀಗೊಂದು ಶಿಫಾರಸ್ಸು ಮಾಡಿದ್ದಾರೆ. ಕೊವಾವ್ಯಾಕ್ಸ್ ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಒಳಗೊಂಡಿದೆ ಮತ್ತು ಅತ್ಯುತ್ತಮ ಸುರಕ್ಷತಾ ಅಂಶವನ್ನು ಹೊಂದಿದೆ ಎಂದು ಹೇಳಿದ್ದಾರೆ.  

ಅಮೆರಿಕನ್​ ಬಯೋಟೆಕ್ನಾಲಜಿ ಸಂಸ್ಥೆ ನೊವಾವ್ಯಾಕ್ಸ್ ಅಭಿವೃದ್ಧಿ ಪಡಿಸಿರುವ ಕೊವಿಡ್ 19 ವ್ಯಾಕ್ಸಿನ್​​ನ್ನು ಭಾರತದಲ್ಲಿ ಕೊವಾವ್ಯಾಕ್ಸ್​ ಎಂದು ಕರೆಯಲಾಗಿದ್ದು, ಇದನ್ನು ಉತ್ಪಾದನೆ ಮಾಡಲು ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಪರವಾನಗಿ ಪಡೆದಿದೆ. ಇದೊಂದು ಮರುಸಂಯೋಜಿತ ಲಸಿಕೆಯಾಗಿದೆ. ಕೊರೊನಾ ವೈರಸ್​ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸ್ಪೈಕ್​ ಪ್ರೋಟಿನ್​​ನ್ನು ಬಳಸಿ, ಈ ವ್ಯಾಕ್ಸಿನ್​ ಅಭಿವೃದ್ಧಿಪಡಿಸಲಾಗಿದೆ. ಈ ಕೊವಾವ್ಯಾಕ್ಸ್​​ನ್ನು ಭಾರತದಲ್ಲಿ ಬೂಸ್ಟರ್ ಡೋಸ್​​ಗೆ ಬಳಸಬಹುದು. ಬೂಸ್ಟರ್ ಡೋಸ್​ ಆಗಿ ಕೊವಿಶೀಲ್ಡ್​ ಲಸಿಕೆ ನೀಡುವುದಕ್ಕಿಂತಲೂ  ಕೊವಾವ್ಯಾಕ್ಸ್​ ಹೆಚ್ಚಿನ ಪರಿಣಾಮಕಾರಿ ಎಂದು ಅನುರಾಗ್​ ಅಗರ್​ವಾಲ್​ ತಿಳಿಸಿದ್ದಾರೆ.

ಆದರೆ ಇನ್ನೊಂದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೇನೋ ಈ ಕೊವಾವ್ಯಾಕ್ಸ್ ಹೆಚ್ಚಿಸುತ್ತದೆ. ಆದರೆ ಈ ಲಸಿಕೆ ಒಮಿಕ್ರಾನ್​ ರೂಪಾಂತರದ ವಿರುದ್ಧ ಎಷ್ಟು ಪರಿಣಾಮಕಾರಿ ಎಂಬುದನ್ನು ಸ್ಪಷ್ಟವಾಗಿ ಅರಿಯಲು ಇನ್ನೂ ಕ್ಲಿನಿಕಲ್ ಅಧ್ಯಯನಗಳು ಅಗತ್ಯ ಇವೆ. ಕೊವಾವ್ಯಾಕ್ಸ್ ಬೇಟಾ ವಿರುದ್ಧ ಶೇ.50ರಷ್ಟು ಪರಿಣಾಮಕಾರಿ. ಹಾಗೇ, ಒಮಿಕ್ರಾನ್​ ವಿರುದ್ಧವೂ ತುಂಬ ಪ್ರಭಾವ ಕೊಡುತ್ತದೆ ಎಂದು ನಾನು ಹೇಳುವುದಿಲ್ಲ. ಹಾಗಿದ್ದಾಗ್ಯೂ ಕೂಡ ಭಾರತದಲ್ಲಿ ಮೂರನೇ ಡೋಸ್​ ಕೊಡುವುದೇ ಆದರೆ, ಕೊವಾವ್ಯಾಕ್ಸ್ ಲಸಿಕೆ ನೀಡುವುದು ಒಳಿತು ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.

ಕೊವಾವ್ಯಾಕ್ಸ್​ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದು, ಭಾರತದ ಪಾಲಿಗೆ ಒಳ್ಳೆಯ ಸುದ್ದಿ ಎಂದು ಸೀರಮ್​ ಇನ್​ಸ್ಟಿಟ್ಯೂಟ್​​ನ ಸಿಇಒ ಆದರ್​ ಪೂನಾವಾಲಾ ತಿಳಿಸಿದ್ದಾರೆ. ಈ ಕೊವಾವ್ಯಾಕ್ಸ್​ನ್ನು ಭಾರತ ಹೊರತುಪಡಿಸಿ ಇನ್ನೆಲ್ಲ ರಾಷ್ಟ್ರಗಳಲ್ಲೂ ನೊವಾವ್ಯಾಕ್ಸ್ ಎಂದೇ ಕರೆಯಲಾಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಒಟ್ಟು 29,960 ಜನರ ಮೇಲೆ ಕ್ಲಿನಿಕಲ್​ ಟ್ರಯಲ್​ ನಡೆಸಲಾಗಿತ್ತು. ಆಗ ಈ ಲಸಿಕೆ ಕೊರೊನಾ ವಿರುದ್ಧ ಶೇ.90.4ರಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಹಾಗೇ, ಯುಕೆಯಲ್ಲಿ ನಡೆಸಲಾದ ಕ್ಲಿನಿಕಲ್​ ಟ್ರಯಲ್​ನಲ್ಲಿ ಇದು ಶೇ.96ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಚ್ಚಿದಾನಂದ ಆಶ್ರಮದಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಾಲಯ ಉದ್ಘಾಟನೆ ಮಾಡಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

Published On - 2:14 pm, Sat, 18 December 21

ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ