International Arbitration Center: ದೇಶದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಉದ್ಘಾಟಿಸಿದ ಸಿಜೆಐ ರಮಣ; ತೆಲಂಗಾಣ ಸಿಎಂ ಭಾಗಿ

International Arbitration Center: ದೇಶದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಉದ್ಘಾಟಿಸಿದ ಸಿಜೆಐ ರಮಣ; ತೆಲಂಗಾಣ ಸಿಎಂ ಭಾಗಿ
ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಉದ್ಘಾಟಿಸಿದ ಸಿಜೆಐ ಎನ್​.ವಿ.ರಮಣ ಮತ್ತು ಮುಖ್ಯಮಂತ್ರಿ ಕೆಸಿಆರ್​

1926ರಲ್ಲಿ ವಿಶ್ವದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸ್ಥಾಪಿತವಾಯಿತು. ಆದರೆ ಅಂತಾರಾಷ್ಟ್ರೀಯ ವ್ಯಾಜ್ಯಗಳ ಪರಿಹಾರಕ್ಕಾಗಿ ದುಬೈ, ಸಿಂಗಪೂರ್​ಗಳಿಗೆ ಹೋಗಬೇಕಾಗಿತ್ತು. ಇದೀಗ ಹೈದರಾಬಾದ್​ಗೂ ಬರಬಹುದಾಗಿದೆ ಎಂದು ಎನ್​.ವಿ.ರಮಣ ಹೇಳಿದರು.

TV9kannada Web Team

| Edited By: Lakshmi Hegde

Dec 18, 2021 | 3:42 PM

ದೇಶದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ(International Arbitration Center)ವನ್ನು ಇಂದು ಹೈದರಾಬಾದ್​ನಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮುರ್ತಿ ಎನ್​.ವಿ.ರಮಣ (CJI N V Ramana) ಉದ್ಘಾಟಿಸಿದರು. ಈ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್​, ನ್ಯಾಯಮೂರ್ತಿ ಎಲ್​.ನಾಗೇಶ್ವರ್​ರಾವ್ ಕೂಡ ಇದ್ದರು. ಈ ಅಂತರಾಷ್ಟ್ರೀಯ ಪಂಚಾಯಿತಿ ಮತ್ತು ಮಧ್ಯಸ್ಥಿಕೆ ಕೇಂದ್ರವನ್ನು ನಾನಕ್ ರಾಮ್ ಗುಡಾದ ವಿ.ಕೆ.ಟವರ್ಸ್​​ನಲ್ಲಿ ನಿರ್ಮಿಸಲಾಗಿದೆ. ಸದ್ಯ ಅಲ್ಲಿ ಒಂದು ತಾತ್ಕಾಲಿಕ ಕಟ್ಟಡದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದ್ದು, ಶೀಘ್ರದಲ್ಲೇ ಶಾಶ್ವತ ಕಟ್ಟಡ ನಿರ್ಮಾಣವಾಗಲಿದೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ, ಈ ಮಧ್ಯಸ್ಥಿಕೆ ಕೇಂದ್ರಗಳು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಆಸರೆಯಾಗುತ್ತವೆ. ಅದೆಷ್ಟೋ ವಿವಾದಗಳೆಲ್ಲ ಕೋರ್ಟ್​ ಮೆಟ್ಟಿಲೇರುವುದು ತಪ್ಪುತ್ತದೆ ಎಂದು ಹೇಳಿದರು. 

ಭಾರತದಲ್ಲಿ ಇಂಥ ರಾಜಿ ಪಂಚಾಯಿತಿ ಕೇಂದ್ರಗಳಿಗೆ ಪುರಾತನಕಾಲದ ಇತಿಹಾಸವಿದೆ. ಈಗೀಗ ಇಂಥ ಕೇಂದ್ರಗಳನ್ನು ಜಗತ್ತಿನ ಹಲವು ದೇಶಗಳಲ್ಲಿ ಸ್ಥಾಪಿಸಲಾಗಿದ್ದು, ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿವೆ ಎಂದು ಹೇಳಿದ ಸಿಜೆಐ ಎನ್​.ವಿ.ರಮಣ,  ನಾನು ಇಂಥ ಮಧ್ಯಸ್ಥಿಕೆ ಕೇಂದ್ರಗಳಿಗೆ ಬೆಂಬಲ ಘೋಷಿಸುತ್ತೇನೆ. ಅದೆಷ್ಟೋ ವಿಚಾರಗಳೆಲ್ಲ ನ್ಯಾಯಾಲಯದ ಮೆಟ್ಟಿಲು ಹತ್ತುವುದು ತಪ್ಪುತ್ತದೆ. ಹಾಗಾಗಿ ಸಾಮಾನ್ಯ ಜನರೂ ಕೂಡ ಇಂಥ ಮಧ್ಯಸ್ಥಿಕೆ ಕೇಂದ್ರಗಳಿಗೆ ಮೊದಲ ಆದ್ಯತೆ ನೋಡಿ, ಕೊನೇ ಆಯ್ಕೆಯಾಗಿ ಕೋರ್ಟ್​ಗಳನ್ನು ಆರಿಸಿಕೊಳ್ಳಬೇಕು ಎಂದು ಹೇಳಿದರು. ಹಾಗೇ, ಜನರು ವಿವಾದ ಪರ್ಯಾಯ ಪರಿಹಾರದಂಥ ಇಂಥ ವಿಧಾನಗಳಿಗೆ ತೆರೆದುಕೊಳ್ಳುವುದರಿಂದ ಇದರ ವ್ಯಾಪ್ತಿಯೂ ವಿಸ್ತಾರವಾಗುತ್ತ ಹೋಗುತ್ತದೆ.  ಈಗಾಗಲೇ ಮುಂಬೈ ಮತ್ತು ದೆಹಲಿಯಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಇವೆ. ಇದೀಗ ಹೈದರಾಬಾದ್​ನಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆಯಾಗಿದ್ದರಿಂದ ವಿದೇಶಿ ಕಕ್ಷಿದಾರರಿಗೂ ತಮ್ಮ ವ್ಯಾಜ್ಯ, ವಿವಾದ ಪರಿಹರಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

1926ರಲ್ಲಿ ವಿಶ್ವದ ಮೊದಲ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸ್ಥಾಪಿತವಾಯಿತು. ಆದರೆ ಅಂತಾರಾಷ್ಟ್ರೀಯ ವ್ಯಾಜ್ಯಗಳ ಪರಿಹಾರಕ್ಕಾಗಿ ದುಬೈ, ಸಿಂಗಪೂರ್​ಗಳಿಗೆ ಹೋಗಬೇಕಾಗಿತ್ತು. ಇದೀಗ ಹೈದರಾಬಾದ್​ಗೂ ಬರಬಹುದಾಗಿದೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗಾರರು ಇಲ್ಲಿಗೂ ಬರುತ್ತಾರೆ ಎಂದು ಹೇಳಿದ ಸಿಜೆಐ ಎನ್​.ವಿ.ರಮಣ, ಈ ಕೇಂದ್ರಕ್ಕೆ ಸಂಬಂಧಪಟ್ಟ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ನಾಗೇಶ್ವರ್​ ರಾವ್​ಗೆ ತಿಳಿಸಿದರು. ಇದೇ ವೇಳೆ ಪಿ.ವಿ.ನರಸಿಂಹ ರಾವ್​ ಅವರು, ಮಧ್ಯಸ್ಥಿಕೆ ಕೇಂದ್ರಗಳಿಗೆ ಎಷ್ಟು ಒತ್ತು ಕೊಡುತ್ತಿದ್ದರು ಎಂಬುದನ್ನು ತಿಳಿಸಿದ ಅವರು,  ಆರ್ಬಿಟ್ರೇಷನ್ ಕಾಯ್ದೆಗೆ ಒಂದು ರೂಪುರೇಷೆ ಸಿಕ್ಕಿದ್ದು ಪಿ.ವಿ.ನರಸಿಂಹ ರಾವ್​ ಆಡಳಿತದಲ್ಲಿಯೇ ಎಂದು ಹೇಳಿದರು.

ಇದನ್ನೂ ಓದಿ: IPL 2022: ಯಾವ ತಂಡದ ಪರ ಆಡುತ್ತೀರಿ? ಸುಳಿವು ನೀಡಿದ ಅಶ್ವಿನ್

Follow us on

Related Stories

Most Read Stories

Click on your DTH Provider to Add TV9 Kannada