ದೇವನಹಳ್ಳಿ ತಾಲ್ಲೂಕು ಆಸ್ಪತ್ರೆ ಅವ್ಯವಸ್ಥೆಗಳ ಆಗರ, ಆರೋಗ್ಯ ಸಚಿವರು ಒಮ್ಮೆ ಭೇಟಿ ನೀಡಲಿ!

ದೇವನಹಳ್ಳಿ ತಾಲ್ಲೂಕು ಆಸ್ಪತ್ರೆ ಅವ್ಯವಸ್ಥೆಗಳ ಆಗರ, ಆರೋಗ್ಯ ಸಚಿವರು ಒಮ್ಮೆ ಭೇಟಿ ನೀಡಲಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 21, 2024 | 11:47 AM

ಇನ್ ಪೇಶೆಂಟ್ ಗಳು ಕತ್ತಲೆಯಲ್ಲಿ ಸೊಳ್ಳೆಗಳ ಜತೆ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯುಪಿಎಸ್ ಹಾಕಿಸುವ ಯೋಗ್ಯತೆಯೂ ನಿಮ್ಮ ಇಲಾಖೆಗಿಲ್ಲವೇ? ನಾಲ್ಕು ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿರುವ ಪೂಜಾ ಹೆಸರಿನ ಒಬ್ಬ ಒಳರೋಗಿ ನಮ್ಮ ವರದಿಗಾರನೊಂದಿಗೆ ಮಾತಾಡಿ ತನ್ನ ಅತಂಕ ಮತ್ತು ಭೀತಿಯನ್ನು ಹೇಳಿಕೊಂಡಿದ್ದಾರೆ. ಬಾತ್ ರೂಮ್ ಗಳಲ್ಲಿ ನೀರಿನ ವ್ಯವಸ್ಥೆ ಸರಿಯಿಲ್ಲದ ಕಾರಣ ಒಳರೋಗಿಗಳಾಗಿ ಅಡ್ಮಿಟ್ ಅದವರೂ ವಾಪಸ್ಸು ಮನೆಗಳಿಗೆ ಹೋಗುತ್ತಿದ್ದಾರಂತೆ.

ದೇವನಹಳ್ಳಿ: ಮಾನ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾಯರೇ (health minister Dinesh Gundu Rao), ಲೋಕಸಭಾ ಚುನಾವಣೆಯ ಬಳಿಕ ಬಿಡುವಾಗಿದ್ದರೆ ಕೊಂಚ ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಕಡೆ ಗಮನ ಹರಿಸಿ. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಏರ್ಪೋರ್ಟ್ (KIA) ಇದೆ ಅಂತ ಹೇಳಿಕೊಳ್ಳೋದೊಂದೇ ಹೆಗ್ಗಳಿಕೆಯಾಗಿದೆ. ಇಲ್ಲಿನ ತಾಲ್ಲೂಕು ಆಸ್ಪತ್ರೆಯ (Devanahalli taluk hospital) ಸ್ಥಿತಿ ನೋಡಿ. ಚಿಕಿತ್ಸೆಗೆಂದು ಬರುವ ರೋಗಿಗಳ ಹೇಳುವ ಪ್ರಕಾರ ಆಸ್ಪತ್ರೆಯ ಜನರೇಟರ್ ಕೆಟ್ಟುಹೋಗಿದೆ ಮತ್ತು ವಿದ್ಯುತ್ ಪೂರೈಕೆಯಲ್ಲಿ ಸತತವಾಗಿ ವ್ಯತ್ಯಯ ಉಂಟಾಗುತ್ತಿದೆ. ಇನ್ ಪೇಶೆಂಟ್ ಗಳು ಕತ್ತಲೆಯಲ್ಲಿ ಸೊಳ್ಳೆಗಳ ಜತೆ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯುಪಿಎಸ್ ಹಾಕಿಸುವ ಯೋಗ್ಯತೆಯೂ ನಿಮ್ಮ ಇಲಾಖೆಗಿಲ್ಲವೇ? ನಾಲ್ಕು ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿರುವ ಪೂಜಾ ಹೆಸರಿನ ಒಬ್ಬ ಒಳರೋಗಿ ನಮ್ಮ ವರದಿಗಾರನೊಂದಿಗೆ ಮಾತಾಡಿ ತನ್ನ ಅತಂಕ ಮತ್ತು ಭೀತಿಯನ್ನು ಹೇಳಿಕೊಂಡಿದ್ದಾರೆ. ಬಾತ್ ರೂಮ್ ಗಳಲ್ಲಿ ನೀರಿನ ವ್ಯವಸ್ಥೆ ಸರಿಯಿಲ್ಲದ ಕಾರಣ ಒಳರೋಗಿಗಳಾಗಿ ಅಡ್ಮಿಟ್ ಅದವರೂ ವಾಪಸ್ಸು ಮನೆಗಳಿಗೆ ಹೋಗುತ್ತಿದ್ದಾರಂತೆ.

ಶೌಚಾಲಯಗಳಲ್ಲಿ ನೀರಿಲ್ಲ ಅಂದ್ರೆ ಹೇಗೆ ಸ್ವಾಮಿ? ನಿಮ್ಮ ಇಲಾಖೆಯ ಅಧಿಕಾರಿಗಳು ಯಾವುದಾದರೂ ಘನಂದಾರಿ ಕೆಲಸದಲ್ಲಿ ತೊಡಗಿದ್ದಾರೆಯೇ? ಆಸ್ಪತ್ರೆಯ ಸಿಬ್ಬಂದಿಯ ಬಗ್ಗೆ ರೋಗಿಗಳ ತಕಾರಾರೇನೂ ಇಲ್ಲ, ಆದರೆ ಒಂದು ತಾಲ್ಲೂಕು ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳಿಲ್ಲದಿದ್ದರೆ ಹೇಗೆ? ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಾಕ್ಷಣ ನಿಮ್ಮ ಜವಾಬ್ದಾರಿಗಳು ಪೂರ್ತಿಯಾಗಲಾರವು ಸಾಹೇಬರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅನಗತ್ಯವಾಗಿ ಮುಷ್ಕರಕ್ಕೆ ಮುಂದಾದ್ರೆ ಪರ್ಯಾಯ ವ್ಯವಸ್ಥೆಗೂ ಸರ್ಕಾರ ಸಿದ್ಧ: 108 ಸಿಬ್ಬಂದಿಗೆ ದಿನೇಶ್ ಗುಂಡೂರಾವ್ ಎಚ್ಚರಿಕೆ