ಕೇರಳ ಗಡಿಯಲ್ಲಿ ಎನ್​ಸಿಬಿ ಭರ್ಜರಿ ಬೇಟೆ.. 300 ಕೋಟಿ ಮೌಲ್ಯದ ಹೆರಾಯಿನ್, ಎಕೆ 47 ರೈಫಲ್, ಬುಲೆಟ್ ಜಪ್ತಿ

|

Updated on: Mar 31, 2021 | 7:11 AM

ಇದೇ ಮಾರ್ಚ್‌ 25ರಂದು ಕೇರಳ ಗಡಿಯಲ್ಲಿ ಶ್ರೀಲಂಕಾ ಮೀನುಗಾರಿಕಾ ಬೋಟ್ ಮೇಲೆ ದಾಳಿ ನಡೆಸಿದ NCB ಅಧಿಕಾರಿಗಳಿಂದ ಮಹತ್ವದ ಕಾರ್ಯಾಚರಣೆ ನಡೆದಿದೆ. 300 ಕೆ.ಜಿ ಹೆರಾಯಿನ್, 1 ಎಕೆ 47 ರೈಫಲ್, 1,000 ಬುಲೆಟ್‌ಗಳು ಜಪ್ತಿಯಾಗಿವೆ.

ಕೇರಳ ಗಡಿಯಲ್ಲಿ ಎನ್​ಸಿಬಿ ಭರ್ಜರಿ ಬೇಟೆ.. 300 ಕೋಟಿ ಮೌಲ್ಯದ ಹೆರಾಯಿನ್, ಎಕೆ 47 ರೈಫಲ್, ಬುಲೆಟ್ ಜಪ್ತಿ
ಶ್ರೀಲಂಕಾ ಮೀನುಗಾರಿಕಾ ಬೋಟ್ ಮೇಲೆ NCB ಅಧಿಕಾರಿಗಳ ದಾಳಿ
Follow us on

ಕೇರಳ: ಎನ್​ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೇರಳ ಗಡಿಯಲ್ಲಿ ಬರೋಬ್ಬರಿ 3 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ ಮಾಡಿದ್ದಾರೆ. ಜೊತೆಗೆ 1 ಎಕೆ 47 ರೈಫಲ್, 1000 ಬುಲೆಟ್‌ಗಳು ಜಪ್ತಿಯಾಗಿವೆ. ಈ ಸಂಬಂಧ ಎನ್​ಸಿಬಿ ಅಧಿಕಾರಿಗಳು ಶ್ರೀಲಂಕಾದ 6 ಪ್ರಜೆಗಳನ್ನು ಬಂಧಿಸಿದ್ದಾರೆ.

ಇದೇ ಮಾರ್ಚ್‌ 25ರಂದು ಕೇರಳ ಗಡಿಯಲ್ಲಿ ಶ್ರೀಲಂಕಾ ಮೀನುಗಾರಿಕಾ ಬೋಟ್ ಮೇಲೆ ದಾಳಿ ನಡೆಸಿದ NCB ಅಧಿಕಾರಿಗಳಿಂದ ಮಹತ್ವದ ಕಾರ್ಯಾಚರಣೆ ನಡೆದಿದೆ. 300 ಕೆ.ಜಿ ಹೆರಾಯಿನ್, 1 ಎಕೆ 47 ರೈಫಲ್, 1,000 ಬುಲೆಟ್‌ಗಳು ಜಪ್ತಿಯಾಗಿವೆ. ಕೇರಳ ಸಮೀಪದ Vizhinam ಎಂಬಲ್ಲಿ ಸಮುದ್ರದ ಮಾರ್ಗವಾಗಿ ರವಿಹನ್ಸಿ ಅನ್ನೋ ಬೋಟ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಸದ್ಯ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಎಲ್ಲಾ ಹೆರಾಯಿನ್ ಪ್ಯಾಕೆಟ್‌ಗಳ ಮೇಲೆ ಹಾರುವ ಕುದುರೆಯ ಚಿತ್ರ ಕಂಡುಬಂದಿದೆ, ಇದು ಮಾದಕವಸ್ತು, ಕಳ್ಳಸಾಗಣೆ ಸಿಂಡಿಕೇಟ್‌ಗಳು ತಮ್ಮ ಔಷಧಿಗಳನ್ನು ಬ್ರಾಂಡ್ ಮಾಡಲು ಮಾಡಿಕೊಂಡಿರುವ ಸಾಮಾನ್ಯ ಅಭ್ಯಾಸವಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬೋಟ್‌ನ ನೀರಿನ ಟ್ಯಾಂಕ್ ಒಳಗೆ ಹೆರಾಯಿನ್ ಇಡಲಾಗಿತ್ತು. 301 ಪ್ಯಾಕೆಟ್‌ಗಳಲ್ಲಿ ಇಟ್ಟಿದ್ದ 300 ಕೆ.ಜಿ ಹೆರಾಯಿನ್ ಜಪ್ತಿ ಮಾಡಲಾಗಿದೆ. ಅಂದಾಜು ಸುಮಾರು 3 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಎಂದು ಊಹಿಸಲಾಗಿದೆ. ಇನ್ನು ಈ ಪ್ರಕರಣ ಸಂಬಂಧ ಶ್ರೀಲಂಕಾದ 6 ಪ್ರಜೆಗಳನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ.

301 ಪ್ಯಾಕೆಟ್‌ಗಳಲ್ಲಿ ಇಟ್ಟಿದ್ದ 300 ಕೆ.ಜಿ ಹೆರಾಯಿನ್ ಜಪ್ತಿ

1 ಎಕೆ 47 ರೈಫಲ್

1 ಎಕೆ 47 ರೈಫಲ್ ಮತ್ತು 1,000 ಬುಲೆಟ್‌ಗಳು ಜಪ್ತಿ

ಇದನ್ನೂ ಓದಿ: ಮೂರರಲ್ಲಿ ಎರಡು ಭಾಗದಷ್ಟು ಮನೆಯ ಒಬ್ಬ ಸದಸ್ಯ ಹೆರಾಯಿನ್ ವ್ಯಸನಿಯಾಗಿದ್ದಾರೆ.