NEET Exam 2021 Result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ; ಕರ್ನಾಟಕದ ಇಬ್ಬರಿಗೆ 5ನೇ ರ್ಯಾಂಕ್

| Updated By: ಆಯೇಷಾ ಬಾನು

Updated on: Nov 02, 2021 | 8:36 AM

ನೀಟ್ ಪರೀಕ್ಷೆಯಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ರಾಜ್ಯದ ಇಬ್ಬರಿಗೆ ನೀಟ್ ನಲ್ಲಿ 5ನೇ ರ್ಯಾಂಕ್ ಸಿಕ್ಕಿದೆ. ಈ ಹಿಂದೆ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಟಾಪರ್ ಆಗಿದ್ದ ಮೈಸೂರು ಮೂಲದ ಮೇಘನ್ ಹೆಚ್ ಕೆ ನೀಟ್ ಪರೀಕ್ಷೆಯಲ್ಲಿ 5ನೇ ಸ್ಥಾನಗಳಿಸಿದ್ದು, ಒಟ್ಟು 720 ಅಂಕಗಳಿಗೆ 715 ಅಂಕಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ.

NEET Exam 2021 Result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ; ಕರ್ನಾಟಕದ ಇಬ್ಬರಿಗೆ 5ನೇ ರ್ಯಾಂಕ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸೆ.12ರಂದು ನಡೆದಿದ್ದ2020-21ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವೈದ್ಯಕೀಯ ಕೋರ್ಸ್ಗೆ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ನೀಟ್ ಪರೀಕ್ಷೆಯಲ್ಲಿ ಕರ್ನಾಟಕದ ಇಬ್ಬರು 5ನೇ ರ್ಯಾಂಕ್ ಪಡೆದಿದ್ದಾರೆ.

NTA ವೆಬ್ ಸೈಟ್ www.neet.nta.nic.in ರಿಸಲ್ಟ್ ಲಭ್ಯವಾಗಿದ್ದು ತೆಲಂಗಾಣದ ಮೃಣಾಲ್ ಕುಟ್ಟೇರಿ, ದೆಹಲಿಯ ತನ್ಮಯ ಗುಪ್ತಾ ಹಾಗೂ ಮಹಾರಾಷ್ಟ್ರದ ಕಾರ್ತಿಕ್ ಜಿ. ನಾಯರ್ಗೆ ಟಾಪ್ ಶ್ರೇಣಿ ಲಭ್ಯವಾಗಿದೆ. ಮೂವರು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ವೇಳೆ ಟೈ ಬ್ರೇಕಿಂಗ್ ಫಾರ್ಮುಲಾ ಬಳಸಬೇಕು ಎಂದು ಎನ್ಟಿಎ ಹೇಳಿದೆ. ಈಗ ಮೊದಲ ಶ್ರೇಣಿಯನ್ನು ಮೂವರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ನೀಟ್ ಯುಜಿಸಿ 2021 ಪರೀಕ್ಷೆಯಲ್ಲಿ ಒಟ್ಟು 15,44,275 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ 8,70,074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕರ್ನಾಟಕದ ಇಬ್ಬರಿಗೆ 5ನೇ ರ್ಯಾಂಕ್
ನೀಟ್ ಪರೀಕ್ಷೆಯಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ರಾಜ್ಯದ ಇಬ್ಬರಿಗೆ ನೀಟ್ ನಲ್ಲಿ 5ನೇ ರ್ಯಾಂಕ್ ಸಿಕ್ಕಿದೆ. ಈ ಹಿಂದೆ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಟಾಪರ್ ಆಗಿದ್ದ ಮೈಸೂರು ಮೂಲದ ಮೇಘನ್ ಹೆಚ್ ಕೆ ನೀಟ್ ಪರೀಕ್ಷೆಯಲ್ಲಿ 5ನೇ ಸ್ಥಾನಗಳಿಸಿದ್ದು, ಒಟ್ಟು 720 ಅಂಕಗಳಿಗೆ 715 ಅಂಕಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಹಾಗೂ ಮಂಗಳೂರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಲ್ಲಿ ವ್ಯಾಸಾಂಗ ಮಾಡ್ತಿದ್ದ ಜಶನ್ ಛಾಬ್ರಾ ಗೂ 720 ಅಂಕಗಳಿಗೆ 715 ಅಂಕ ಸಿಕ್ಕಿದೆ. ಜೊತೆಗೆ ಚಿತ್ರದುರ್ಗದ ಎಸ್ಆರ್ಎಸ್ ಪದವಿಪೂರ್ವ ಕಾಲೇಜಿನ ಎಲ್ ಎನ್ ನಿಹಾರಿಕಾ, ಆರ್ ಶ್ರೇಯಸ್ ಎಂಬ ವಿದ್ಯಾರ್ಥಿಗಳು 720 ಅಂಕಗಳಿಗೆ 620 ಅಂಕಗಳಿಸಿದ್ದಾರೆ.

ಇದನ್ನೂ ಓದಿ: NEET 2021 Results: ನೀಟ್ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ಅನುಮತಿ; ರಿಸಲ್ಟ್ ನೋಡಲು ಹೀಗೆ ಮಾಡಿ

Published On - 8:36 am, Tue, 2 November 21