ಅಬ್ಬಬ್ಬಾ! ಮೈ ಝುಂ ಎನ್ನುತ್ತೆ ನೆಲಮಂಗಲದಲ್ಲಿ ನಡೆದ ಈ ಭೀಕರ ಅಪಘಾತದ ದೃಶ್ಯಾವಳಿ

| Updated By: Rakesh Nayak Manchi

Updated on: Dec 18, 2022 | 9:51 AM

ನೆಲಮಂಗಲದಲ್ಲಿ ಹಿಟ್ ಅಂಡ್ ರನ್ ವೇಳೆ ಕಾರು ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿದ್ದು, ಇದರ ದೃಶ್ಯಾವಳಿ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ಅಬ್ಬಬ್ಬಾ! ಮೈ ಝುಂ ಎನ್ನುತ್ತೆ ನೆಲಮಂಗಲದಲ್ಲಿ ನಡೆದ ಈ ಭೀಕರ ಅಪಘಾತದ ದೃಶ್ಯಾವಳಿ
ಪಾದಚಾರಿಗೆ ಡಿಕ್ಕಿ ಹೊಡೆದ ಕಾರು
Follow us on

ನೆಲಮಂಗಲ: ಹಿಟ್ ಆ್ಯಂಡ್ ರನ್​ ಪ್ರಕರಣ (Hit And Run Case)ಗಳು ಹೆಚ್ಚುತ್ತಿದ್ದು, ಅಲ್ಲೊಂದು ಇಲ್ಲೊಂದು ಅವಘಡಗಳು ಸಂಭವಿಸುತ್ತಿವೆ. ಇದೀಗ ನೆಲಮಂಗಕ ತಾಲೂಕಿನ ಬಿಲ್ಲಿನಕೋಟೆ ಬಳಿ ಹಿಟ್ ಆ್ಯಂಡ್ ರನ್ ವೇಳೆ ಕಾರು ಡಿಕ್ಕಿಯಾಗಿ ಪಾದಚಾರಿ (Car hits pedestrian) ಸಾವನ್ನಪ್ಪಿದ ಘಟನೆಯೊಂದು ನಡೆದಿದ್ದು, ಭೀಕರ ಅಪಘಾತದ ದೃಶ್ಯಾವಳಿ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಲ್ಲಿನಕೋಟೆ ನಿವಾಸಿ ಸಾಬು ಲಾಲ್​​(26) ಮೃತ ದುರ್ದೈವಿಯಾಗಿದ್ದಾರೆ. ಸಾಬು ಅವರು ರಸ್ತೆ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ತುಮಕೂರಿನ ಕಡೆಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಂತರ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಈಜಿಪ್ಟ್: ಬಾಕಿಯಿದ್ದ ಹಣ ನೀಡಲು ಮಹಿಳೆ ತಡಮಾಡಿದ್ದಕ್ಕೆ ಕಿರಾಣಿ ಅಂಗಡಿ ಮಾಲೀಕ ಆಕೆಯ 5-ವರ್ಷದ ಮಗಳನ್ನು ಸಾಯಿಸಿದ!

ಇದನ್ನೂ ಓದಿ: ಬೆಂಗಳೂರು: ಅನ್ನ ಹಾಕಿದ ಕಂಪನಿಗೆ ಕನ್ನ ಹಾಕಿದ ಭೂಪ

ಜಿಂಕೆ ಬೇಟೆಯಾಡಿ ಮರಕ್ಕೆ‌ ನೇತು ಹಾಕಿದ ದುಷ್ಕರ್ಮಿಗಳು

ಮೈಸೂರು: ಜಿಂಕೆ ಬೇಟೆಯಾಡಿ ಮರಕ್ಕೆ‌ ನೇತು ಹಾಕಿದ್ದ ದುಷ್ಕರ್ಮಿಗಳು ಗ್ರಾಮಸ್ಥರ ಕಂಡು ಪರಾರಿಯಾದ ಘಟನೆ ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಿಂಕೆ ಕೊಂದು ಮರಕ್ಕೆ ನೇತು ಹಾಕಿ ಮಾಂಸ ಕತ್ತರಿಸುತ್ತಿದ್ದಾಗ ಗ್ರಾಮಸ್ಥರನ್ನು ನೋಡಿದ ಬೇಟೆಗಾರರು ಜಿಂಕೆ ಮಾಂಸ ಬಿಟ್ಟು ಜೀಪ್​ನಲ್ಲಿ ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ಜೀಪ್ ಪಲ್ಟಿಯಾಗಿದೆ. ಅಷ್ಟಾಗಿಯೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರ ದೂರಿನ ಅನ್ವಯ ಸ್ಥಳಕ್ಕೆ ಬಂದ ಕವಲಂದೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ‌ ಪರಿಶೀಲನೆ ನಡೆಸಿದ್ದು, ಜಿಂಕೆ ಮಾಂಸ ಮತ್ತು ಜೀಪ್ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ