ನೂತನ ಗ್ರಾಮ ಪಂಚಾಯತಿ ಸದಸ್ಯನ ಅಪಹರಣ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಕೃತ್ಯವೆಸಗಿರುವ ಶಂಕೆ

| Updated By: ganapathi bhat

Updated on: Apr 06, 2022 | 9:15 PM

ಗ್ರಾಮ ಪಂಚಾಯತಿ ನೂತನ ಸದಸ್ಯನ ಅಪಹರಣವಾದ ಘಟನೆ ವಿಜಯಪುರ ‌ಜಿಲ್ಲೆ ಆಲಮೇಲ‌ ತಾಲೂಕಿನ ನಾಗರಹಳ್ಳಿ ಎಂಬಲ್ಲಿ ಸಂಭವಿಸಿದೆ. ಗ್ರಾಮ ಪಂಚಾಯತಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ನೂತನ ಸದಸ್ಯ ಶರಣಪ್ಪ ದೊಡ್ಡಮನಿ ಎಂಬವರ ಅಪಹರಣವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ನೂತನ ಗ್ರಾಮ ಪಂಚಾಯತಿ ಸದಸ್ಯನ ಅಪಹರಣ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಕೃತ್ಯವೆಸಗಿರುವ ಶಂಕೆ
ಆಲಮೇಲ ಪೊಲೀಸ್ ಠಾಣೆ (ಎಡ), ಅಪಹರಣಗೊಂಡ ಶರಣಪ್ಪ (ಬಲ)
Follow us on

ವಿಜಯಪುರ: ಗ್ರಾಮ ಪಂಚಾಯತಿ ನೂತನ ಸದಸ್ಯನ ಅಪಹರಣವಾದ ಘಟನೆ ವಿಜಯಪುರ ‌ಜಿಲ್ಲೆ ಆಲಮೇಲ‌ ತಾಲೂಕಿನ ನಾಗರಹಳ್ಳಿ ಎಂಬಲ್ಲಿ ಸಂಭವಿಸಿದೆ. ಗ್ರಾಮ ಪಂಚಾಯತಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ನೂತನ ಸದಸ್ಯ ಶರಣಪ್ಪ ದೊಡ್ಡಮನಿ ಎಂಬವರ ಅಪಹರಣವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ, ಗ್ರಾಮ‌ ಪಂಚಾಯತಿ ಸದಸ್ಯ ಶರಣಪ್ಪ ಪುತ್ರ, ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶರಣಪ್ಪ ಪುತ್ರ ಬಾಗಪ್ಪ ದೊಡ್ಡಮನಿಯಿಂದ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಮನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಹಾಂತೇಶ ಮಾಡ್ಯಾಳ ಎಂಬವರು ಅಪಹರಣ ಮಾಡಿದ್ದಾಗಿ ದೂರು ದಾಖಲಾಗಿದೆ. ತಂದೆಯನ್ನು‌ ಕೂಡಲೇ‌ ಪತ್ತೆ ಹಚ್ಚಿ ಕರೆತರಬೇಕೆಂದು ಒತ್ತಾಯಿಸಿ ದೂರು ಸಲ್ಲಿಸಲಾಗಿದೆ.

ಆಲಮೇಲ ಪೊಲೀಸ್ ಠಾಣೆ

ಶರಣಪ್ಪ ಪುತ್ರ ಬಾಗಪ್ಪ (ಎಡ) ಹಾಗೂ ಶರಣಪ್ಪ (ಬಲ)

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಕ್ಕೆ ಬೆಂಕಿಯ ಪ್ರತಿಕಾರ

Published On - 2:27 pm, Sun, 10 January 21