
ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಎಡನೀರು ಮಠದ ನೂತನ ಮಠಾಧೀಶರಾಗಿ ಶ್ರೀಸಚ್ಚಿದಾನಂದ ಭಾರತಿಶ್ರೀ ಪೀಠಾರೋಹಣ ಮಾಡಿದರು.
ನಿನ್ನೆ ಕಾಸರಗೋಡಿನ ಎಡಮಂಗಲ ಪುರಪ್ರವೇಶಿಸಿದ್ದ ನೂತನ ಶ್ರೀಗಳಾದ ಸಚ್ಚಿದಾನಂದಶ್ರೀ ಇಂದು ಮಠದಲ್ಲಿ ವಿಧಿವಿಧಾನಗಳಂತೆ ಪೀಠಾರೋಹಣ ಮಾಡಿದರು. ಕೇರಳ ಸಂಸದ ರಾಜಮೋಹನ ಉಣ್ಣಿತ್ತಾನ್, ವೈದಿಕರು ಭಾಗಿಯಾಗಿದ್ದರು.
ನೂತನ ಶ್ರೀಗಳಿಗೆ ಮುಜರಾಯಿ ಖಾತೆ ಸಚಿವ ಶ್ರೀನಿವಾಸ ಪೂಜಾರಿ ಗೌರವ ಅರ್ಪಣೆ ಮಾಡಿದರು. ಎಡನೀರು ಮಠಕ್ಕೆ ಭೇಟಿ ನೀಡಿ ಸಚಿವ ಶ್ರೀನಿವಾಸ ಪೂಜಾರಿ ಅಶೀರ್ವಾದ ಪಡೆದರು.