Shocking News: ಮನಬಂದಂತೆ ನಂಬರ್ ಪ್ಲೇಟ್​ನಲ್ಲಿ ಹೆಸರು ಹಾಕುವಂತಿಲ್ಲ, ಹೊಸ ನಿಯಮ ಜಾರಿ

ನಂಬರ್​ ಪ್ಲೇಟ್​ನಲ್ಲಿ ಮನಬಂದಂತೆ ಹೆಸರು ಹಾಕಬಾರದು, ಸರ್ಕಾರಿ ಲಾಂಛನವನ್ನೂ ಬಳಸಬಾರದು ಎಂದು ಸಾರಿಗೆ ಇಲಾಖೆ ಆದೇಶಿಸಿದೆ. ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ ಆಯುಕ್ತರು, ದುರ್ಬಳಕೆ ಕಂಡುಬಂದಲ್ಲಿ 9449863459 ಹೆಲ್ಪ್​ಲೈನ್​ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

Shocking News: ಮನಬಂದಂತೆ ನಂಬರ್ ಪ್ಲೇಟ್​ನಲ್ಲಿ ಹೆಸರು ಹಾಕುವಂತಿಲ್ಲ, ಹೊಸ ನಿಯಮ ಜಾರಿ
ಸಾಂದರ್ಭಿಕ ಚಿತ್ರ
Edited By:

Updated on: Jun 02, 2022 | 6:58 PM

ಬೆಂಗಳೂರು: ಸಾರಿಗೆ ಇಲಾಖೆ (Transport Department) ಕೆಲವೊಂದು ಕಟ್ಟುನಿಟ್ಟಿನ ನಿಯಮ (Rules)ಗಳನ್ನು ಜಾರಿ ಮಾಡುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿದೆ. ನಂಬರ್​ ಪ್ಲೇಟ್​ನಲ್ಲಿ ಮನಬಂದಂತೆ ಹೆಸರು ಹಾಕಬಾರದು, ಸರ್ಕಾರಿ ಲಾಂಛನವನ್ನೂ ಬಳಸಬಾರದು ಎಂದು ಸೂಚಿಸಿದ ಇಲಾಖೆ, ದುರ್ಬಳಕೆ ತಪ್ಪಿಸುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಿದೆ.

ಇದನ್ನೂ ಓದಿ: ಬೆಂಗಳೂರು ವಿವಿ ಸಂಘರ್ಷ: 28 ಕೋಟಿ ಬಿಡುಗಡೆಗೆ ವಿವಿ ಅಧಿಕಾರಿಗಳಿಗೆ ಕುಲಪತಿ ಒತ್ತಡ, ಮತ್ತೊಂದು ಆದೇಶ

ಸಾರಿಗೆ ಇಲಾಖೆಯಲ್ಲಿ ಜಾರಿ ಮಾಡಲಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಸಾರಿಗೆ ಇಲಾಖೆ ಆಯುಕ್ತ ಟಿ.ಎಂ.ಎಚ್.ಕುಮಾರ್, ಇನ್ನು ಮುಂದಕ್ಕೆ ಕಾರನ ನಂಬರ್​ ಪ್ಲೇಟ್​ ಮೇಲೆ ಮನಸೋ ಇಚ್ಚೆ ಹೆಸರು ಹಾಕುವಂತಿಲ್ಲ. ಒಂದು ವೇಳೆ ವಾಹನದ ನಂಬರ್ ಪ್ಲೇಟ್ ಮೇಲೆ ಹೆಸರು ಹಾಕಬೇಕಾದರೆ ಕೇಂದ್ರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಯಮ ಮೀರಿ ಹೆಸರು ಹಾಕಿದರೆ ಅಂಥ ವಾಹನಗಳ‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಇನ್ನೆರಡು ದಿನ ಭಾರೀ ಮಳೆ; ಹಳದಿ ಅಲರ್ಟ್​ ಘೋಷಣೆ

ಕಾರಿನ ನಂಬರ್ ಪ್ಲೇಟ್ ಮೇಲೆ ಸಂಘ ಸಂಸ್ಥೆ ಹೆಸರು, ನಿಗಮ ಮಂಡಳಿ ಹೆಸರು ಹಾಕುವಂತಿಲ್ಲ, ಸರ್ಕಾರಿ ಲಾಂಛನವನ್ನೂ ಬಳಸಬಾರದು ಎಂದ ಆಯುಕ್ತರು, ಈಗಾಗಲೇ ಹೆಸರು ಹಾಕಿದ್ದರೆ ಅದರ ತೆರವಿಗೆ ವಾಹನಗಳ ಮಾಲೀಕರಿಗೆ ಹತ್ತು ದಿನಗಳ ಕಾಲಾವಕಾಶ ನೀಡಿದರು. ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂದರೆ ಅಥವಾ ನಿಯಮಗಳ ದುರ್ಬಳಕೆ ಆಗಬಾರದು ಎಂಬ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಸಹಾಯವಾಣಿ ಆರಂಭಿಸಿದ್ದು, ನಿಯಮ ದುರ್ಬಳಕೆ ಕಂಡುಬಂದಲ್ಲಿ ವಾಟ್ಸ್​ ಆಪ್ ನಂಬರ್ 9449863459ಕ್ಕೆ ಮಾಹಿತಿ ನೀಡಬಹುದು. ಅವುಗಳನ್ನು ಆಧರಿಸಿ ತಪ್ಪಿತಸ್ಥ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತರು ಹೇಳಿಕೆ ನೀಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Thu, 2 June 22