ಕಲ್ಯಾಣಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದ ನವವಿವಾಹಿತರು ಸೋಂಬೇರಿ ಟೆಕ್ಕಿಗಳಿಗೆ ಮಾದರಿ
ನಗರ ಪ್ರದೇಶಗಳ ಸಾಫ್ಟ್ವೇರ್ ಕಂಪನಿಗಳಲ್ಲಿ ಆರಂಕಿ ಸಂಬಳ ಪಡೆಯುವ ಜನ ಮತದಾನ ಮಾಡದೆ ವೀಕೆಂಡ್ ಅಂತ ರೆಸಾರ್ಟ್, ಪಿಕ್ನಿಕ್, ಸಿನಿಮಾ, ಮಾಲ್ ಅಂತ ಸುತ್ತುತ್ತಾರೆ, ಆದರೆ ಸರ್ಕಾರ ರಚನೆಯಾದ ಮೇಲೆ ಟೀಕಿಸುವುದನ್ನು ಬಿಡಲಾರರು. ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗಿಯಾಗದ ಜನರಿಗೆ ಸರ್ಕಾರ ಮತ್ತು ಅದರ ಪ್ರತಿನಿಧಿಗಳನ್ನು ಟೀಕಿಸುವ ಹಕ್ಕು ಖಂಡಿತ ಇಲ್ಲ.
ಮೈಸೂರು: ದೇಶ ಮತ್ತು ಸಂವಿಧಾನ (The Constitution) ನಮಗೆ ನೀಡುವ ಹಕ್ಕು ಮತ್ತು ಕರ್ತವ್ಯಗಳೆಡೆ ಬದ್ಧತೆ ಅಂದರೆ ಇದು ಮಾರಾಯ್ರೆ! ಈ ಯುವ ಜೋಡಿಯನ್ನು ನೋಡಿ, ಇವರ ಹೆಸರು ದಿನೇಶ್ (Dinesh) ಮತ್ತು ರುಚಿತಾ (Ruchita). ನಗರದ ಕಲ್ಯಾಣ ಮಂಟಪವೊಂದರಲ್ಲಿ ಇವರಿಬ್ಬರು ಗುರು ಹಿರಿಯರ ಸಮ್ಮುಖದಲ್ಲಿ, ತಮ್ಮ ಸಮುದಾಯದ ಸಂಪ್ರದಾಯ ಮತ್ತು ವಾಡಿಕೆಗಳಿಗೆ ಅನುಗುಣವಾಗಿ ಸತಪತಿಗಳಾಗಿ ನೇರವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಟಿಕೆ ಬಡಾವಣೆಯಲ್ಲಿನ ಮತಗಟ್ಟೆಗೆ ಬಂದಿದ್ದಾರೆ. ದಿನೇಶ್ ವೋಟು ಇದೇ ಮತಗಟ್ಟೆಯಲ್ಲಿತ್ತೋ ಅಥವಾ ಬೇರೆ ಕಡೆಯೋ ಅಂತ ಗೊತ್ತಾಗಿಲ್ಲ. ಅದರೆ ರುಚಿತಾ ಒಂಟಿಯಾಗಿ ಮತಕೇಂದ್ರದೊಳಗೆ ಹೋಗಿ ಮತ ಚಲಾಯಿಸುತ್ತಿರುವುದನ್ನು ನೋಡುಬಹುದು. ನಮ್ಮ ರಾಜ್ಯದ ಲಕ್ಷಾಂತರ ಸೋಂಬೇರಿ ಮತ್ತ ಹೊಣೆಗೇಡಿ ಜನರಿಗೆ ನವವಿವಾಹಿತರು ಮಾದರಿಯಾಗಿದ್ದಾರೆ.
ನಗರ ಪ್ರದೇಶಗಳ ಸಾಫ್ಟ್ವೇರ್ ಕಂಪನಿಗಳಲ್ಲಿ ಆರಂಕಿ ಸಂಬಳ ಪಡೆಯುವ ಜನ ಮತದಾನ ಮಾಡದೆ ವೀಕೆಂಡ್ ಅಂತ ರೆಸಾರ್ಟ್, ಪಿಕ್ನಿಕ್, ಸಿನಿಮಾ, ಮಾಲ್ ಅಂತ ಸುತ್ತುತ್ತಾರೆ, ಆದರೆ ಸರ್ಕಾರ ರಚನೆಯಾದ ಮೇಲೆ ಟೀಕಿಸುವುದನ್ನು ಬಿಡಲಾರರು. ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗಿಯಾಗದ ಜನರಿಗೆ ಸರ್ಕಾರ ಮತ್ತು ಅದರ ಪ್ರತಿನಿಧಿಗಳನ್ನು ಟೀಕಿಸುವ ಹಕ್ಕು ಖಂಡಿತ ಇಲ್ಲ. ದಿನೇಶ್ ಮತ್ತು ರುಚಿತಾ ಮತ ಚಲಾಯಿಸಲು ಬಾರದೇ ಹೋಗಿದ್ದರೆ ಯಾರೂ ಅವರನ್ನು ಪ್ರಶ್ನಿಸುತ್ತಿರಲಿಲ್ಲ. ಆದರೂ ಅವರು ತಮ್ಮ ಕರ್ತವ್ಯವನ್ನು ಜವಾಬ್ದಾರಿ ಅರಿತು ನಿಭಾಯಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ: ಡಾ ಸಿಎನ್ ಅಶ್ವಥ್ ನಾರಾಯಣ, ಶಾಸಕ