ಹೇಳದೆ ಹೊರಟ ರಾಹುಲ್ ಗಾಂಧಿಯನ್ನು ವಾಪಸ್ಸು ವೇದಿಕೆಗೆ ಕರೆತಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾರ್ಯಕ್ರಮದ ನಿರೂಪಕ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾತಾಡಲಿದ್ದಾರೆ ಅಂತ ಅನೌನ್ಸ್ ಮಾಡುತ್ತಿದ್ದಂತೆ ಸಿದ್ದರಾಮಯ್ಯ ಕಾಣಿಸುತ್ತಾರಾದರೂ ರಾಹುಲ್ ಗಾಂಧಿ ತಮಗೆ ಹೇಳದೆ ನಿರ್ಗಮಿಸಿದ್ದು ಅವರಲ್ಲಿ ಬೇಸರ ಮೂಡಿಸುತ್ತದೆ. ಅದರೆ ಅವರು ಅವಸರದಲ್ಲಿ ವೇದಿಕೆಯಿಂದ ಇಳಿದು ಛಲಬಿಡದ ತ್ರಿವಿಕ್ರಮನ ಹಾಗೆ ವಯನಾಡ್ ಸಂಸದನನ್ನು ವಾಸ್ಸು ಕರೆತರುತ್ತಾರೆ.

ಹೇಳದೆ ಹೊರಟ ರಾಹುಲ್ ಗಾಂಧಿಯನ್ನು ವಾಪಸ್ಸು ವೇದಿಕೆಗೆ ಕರೆತಂದ ಮುಖ್ಯಮಂತ್ರಿ ಸಿದ್ದರಾಮಯ್ಯ
|

Updated on: Apr 26, 2024 | 5:18 PM

ವಿಜಯಪುರ: ನಗರದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಒಂದು ಅಪರೂಪದ ಸನ್ನಿವೇಶ ಸೃಷ್ಟಿಯಾಯಿತು. ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರು ಪರ ರಾಹುಲ್ ಗಾಂಧಿಯವರು (Rahul Gandhi) ಮತ ಯಾಚಿಸಿದ ಬಳಿಕ ತಡಮಾಡದೆ ಅಲ್ಲಿಂದ ಹೊರಡಲಣಿಯಾದರು. ದೃಶ್ಯಗಳಲ್ಲಿ ನೀವು ನೋಡುತ್ತಿರುವ ಹಾಗೆ ವೇದಿಕೆ ಮೇಲಿದ್ದವರ ಜೊತೆ ಮಾತಾಡಿ, ಜನರತ್ತ ಕೈ ಬೀಸಿ, ರಂದೀಪ್ ಸುರ್ಜೆವಾಲಾ (Randeep Surjewala) ಅವರ ಕಡೆ ನೋಡಿ ಹೊರಡೋದಾ? ಅಂತ ಕೇಳುತ್ತಾ ಎಂಬಿ ಪಾಟೀಲ್ (MB Patil) ಜೊತೆ ವೇದಿಕೆಯಿಂದ ಅವಸರದಲ್ಲಿ ಕೆಳಗಿಳಿಯುತ್ತಾರೆ. ಕಾರ್ಯಕ್ರಮದ ನಿರೂಪಕ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾತಾಡಲಿದ್ದಾರೆ ಅಂತ ಅನೌನ್ಸ್ ಮಾಡುತ್ತಿದ್ದಂತೆ ಸಿದ್ದರಾಮಯ್ಯ ಕಾಣಿಸುತ್ತಾರಾದರೂ ರಾಹುಲ್ ಗಾಂಧಿ ತಮಗೆ ಹೇಳದೆ ನಿರ್ಗಮಿಸಿದ್ದು ಅವರಲ್ಲಿ ಬೇಸರ ಮೂಡಿಸುತ್ತದೆ. ಅದರೆ ಅವರು ಅವಸರದಲ್ಲಿ ವೇದಿಕೆಯಿಂದ ಇಳಿದು ಛಲಬಿಡದ ತ್ರಿವಿಕ್ರಮನ ಹಾಗೆ ವಯನಾಡ್ ಸಂಸದನನ್ನು ವಾಸ್ಸು ಕರೆತರುತ್ತಾರೆ. ಸಿದ್ದರಾಮಯ್ಯ ಜೊತೆ ವೇದಿಕೆ ಮೇಲೆ ಬರುವಷ್ಟರಲ್ಲಿ ರಾಹುಲ್ ಗೆ ತಮ್ಮ ತಪ್ಪಿನ ಆರಿವಾಗಿರುತ್ತದೆ. ಅವರು ಪುನಃ ಜನರತ್ತ ಕೈ ಬೀಸಿ ಜರುಗಿದ ಪ್ರಮಾದಕ್ಕೆ ಪ್ರಾಯಶ್ಚಿತವೆನ್ನುವ ಹಾಗೆ ಸಿದ್ದರಾಮಯ್ಯರನ್ನು ತಬ್ಬಿಕೊಂಡು ಮತ್ತೊಮ್ಮೆ ಜನರ ವಿದಾಯ ಕೋರಿ ಅಲ್ಲಿಂದ ಹೊರಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿ ಗಣತಿ: ರಾಹುಲ್ ಗಾಂಧಿ ಭರವಸೆ  

Follow us