Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಾಸವಿರುವ ಕಾರಣಕ್ಕೆ ಸುಮಲತಾ ಬೆಂಗಳೂರಿಂದ ಮಂಡ್ಯ ಬಂದು ನನಗೆ ವೋಟು ನೀಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ವಿಶ್ವಾಸವಿರುವ ಕಾರಣಕ್ಕೆ ಸುಮಲತಾ ಬೆಂಗಳೂರಿಂದ ಮಂಡ್ಯ ಬಂದು ನನಗೆ ವೋಟು ನೀಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 26, 2024 | 3:57 PM

ದೇವೇಗೌಡರು ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ, ಅವರಿಗೆ ಮಾಹಿತಿ ಕೊರತೆ ಇರಬಹುದು, ಸುಮಲತಾ ಅವರ ಸಹಕಾರ ಕೇಳಲೆಂದೇ ತಾನು ಅವರ ಮನೆಗೆ ಹೋಗಿದ್ದೆ, ಪ್ರಧಾನ ಮಂತ್ರಿಯವರ ಮೈಸೂರು ಸಭೆಯಲ್ಲಿ ತಾನು ಮತ್ತು ಅವರು ವೇದಿಕೆಯ ಮೇಲಿದ್ದೆವು ಮತ್ತು ಅಲ್ಲೇ ಅವರಿಗೆ ಒಂದೆರಡು ದಿನಗಳ ಮಟ್ಟಿಗೆ ಪ್ರಚಾರಕ್ಕೆ ಬನ್ನಿ ಎಂದು ಮನವಿ ಮಾಡಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

ಮಂಡ್ಯ: ಬೆಳಗ್ಗೆ ರಾಮನಗರದಲ್ಲಿದ್ದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಂತರ ಮಂಡ್ಯಗೆ ತೆರಳಿ ಅಲ್ಲಿ ನಡೆಯುತ್ತಿದ್ದ ಮತದಾನ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮಂಡ್ಯದಲ್ಲಿ ತನಗೆ ಈ ಸಲ ಅಭೂತಪೂರ್ವ ಬೆಂಬಲ ಸಿಕ್ಕಿದೆ, ಎಲ್ಲ ಧರ್ಮ, ಸುಮುದಾಯಗಳ (all communities) ಜನ ತನ್ನ ಪರ ವೋಟು ಮಾಡುತ್ತಿದ್ದಾರೆ, ಕೆಲ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಸಹ ತನಗೆ ಫೋನ್ ಮಾಡಿ ಬೆಂಬಲ ಸೂಚಿಸಿದ್ದಾರೆ ಮತ್ತು ಮತ ನೀಡುವ ಭರವಸೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ನಾಯಕರು ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ದೇವೇಗೌಡರು ತನ್ನ ಅವಶ್ಯಕತೆ ಇಲ್ಲ ಅನ್ನುವ ಹಾಗೆ ಮಾತಾಡಿದರು ಎಂದ ಸುಮಲತಾ ಅಂಬರೀಶ್ (Sumalatha Ambareesh) ಹೇಳಿರುವುದನ್ನು ಕುಮಾರಸ್ವಾಮಿ ಗಮನಕ್ಕೆ ತಂದಾಗ ಉತ್ತರಿಸಲು ತಡವರಿಸಿದರು.

ದೇವೇಗೌಡರು ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ, ಅವರಿಗೆ ಮಾಹಿತಿ ಕೊರತೆ ಇರಬಹುದು, ಸುಮಲತಾ ಅವರ ಸಹಕಾರ ಕೇಳಲೆಂದೇ ತಾನು ಅವರ ಮನೆಗೆ ಹೋಗಿದ್ದೆ, ಪ್ರಧಾನ ಮಂತ್ರಿಯವರ ಮೈಸೂರು ಸಭೆಯಲ್ಲಿ ತಾನು ಮತ್ತು ಅವರು ವೇದಿಕೆಯ ಮೇಲಿದ್ದೆವು ಮತ್ತು ಅಲ್ಲೇ ಅವರಿಗೆ ಒಂದೆರಡು ದಿನಗಳ ಮಟ್ಟಿಗೆ ಪ್ರಚಾರಕ್ಕೆ ಬನ್ನಿ ಎಂದು ಮನವಿ ಮಾಡಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

ಮುಂದುವರಿದು ಅವರು ಹೇಳಿದ ಮಾತು ಸಾಮಾನ್ಯ ಗ್ರಹಿಕೆಗೆ ದೂರವಾಗಿತ್ತು. ಅವರಿಗೆ ತನ್ನ ಮೇಲೆ ವಿಶ್ವಾಸವಿರುವ ಕಾರಣಕ್ಕೆ ಬೆಂಗಳೂರಿಂದ ಮಂಡ್ಯಗೆ ಬಂದು ಮತ ಚಲಾಯಿಸಿದ್ದಾರೆ, ಅವರು ಖಂಡಿತವಾಗಿಯೂ ತನಗೆ ವೋಟು ನೀಡಿರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಂಡ್ಯ ಜಿಲ್ಲೆಗೆ ತನ್ನ ಕೊಡುಗೆ ಏನು ಎಂದು ಕೇಳಿದ ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡಿದ ಹೆಚ್ ಡಿ ಕುಮಾರಸ್ವಾಮಿ