ನಾನು ಮಾಡಿದ ತ್ಯಾಗಕ್ಕೆ ಬೆಲೆಯಿಲ್ಲದಂತಾಯಿತು, ಜೆಡಿಎಸ್ ವರಿಷ್ಠರ ಧೋರಣೆಯಿಂದ ಬಹಳ ಬೇಸರವಾಗಿದೆ: ಸುಮಲತಾ ಅಂಬರೀಶ್
ಈಗ ಜೆಡಿಎಸ್ ವರ್ತನೆ ನೋಡಿ ಅವರೆಲ್ಲ ಮತ್ತೇ ತನಗೆ ಫೋನ್ ಮಾಡಿ ತನ್ನ ನಿರ್ಧಾರದ ಬಗ್ಗೆ ಕೇಳುತ್ತಿದ್ದಾರೆ, ತಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ, ಕುಮಾರಸ್ವಾಮಿಯವರು ಮನೆಗೆ ಬಂದು ಹೋದ ಮೇಲೆ ಒಂದೇ ಒಂದು ಸಲ ತನಗೆ ಫೋನ್ ಮಾಡಿಲ್ಲ ಎಂದು ಸುಮಲತಾ ಬೇಸರದಿಂದ ಹೇಳಿದರು.
ಮಂಡ್ಯ: ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಪರ ತಾವು ಪ್ರಚಾರ ಮಾಡದ್ದಕ್ಕೆ ಸುಮಲತಾ ಅಂಬರೀಶ್ (Sumalatha Ambareesh) ಕಾರಣಗಳನ್ನು ತಿಳಿಸಿದರು. ನಗರದಲ್ಲಿ ಇಂದಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುಮಲತಾ ಅವರು, ಜಿಡಿಎಸ್ ನಾಯಕರು (JDS leaders) ತನ್ನನ್ನು ದೂರವಿಟ್ಟರು, ಅವರ ನಡೆಸಿದ ಸಭೆಗೆ ನನ್ನನ್ನು ಕರೆಯಲಿಲ್ಲ, ನಾನಿಲ್ಲದೆಯೂ ಚುನಾವಣೆ ಗೆಲ್ಲುತ್ತೇವೆ ಎಂಬ ಭಾವನೆ ಅವರಲ್ಲಿ ಮೂಡಿರಬೇಕು, ಈ ಮಾತನ್ನು ಆ ಪಕ್ಷದ ಕೆಲ ವರಿಷ್ಠರು ಹೇಳಿರುವುದು ನನ್ನ ಗಮನಕ್ಕೆ ಬಂದಿದೆ, ಅವರ ವರ್ತನೆ ಮತ್ತು ಧೋರಣಗಳಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದರು. ತಾವು ಸ್ಪರ್ಧಿಸುವುದಿಲ್ಲ ಅಂತ ಹೇಳಿದಾಗ ತಮ್ಮ ಬೆಂಬಲಿಗರು ಬಹಳ ಬೇಜಾರು ಮಾಡಿಕೊಂಡಿದ್ದರು ತನ್ನನ್ನು ಸ್ಪರ್ಧಿಸುವಂತೆ ಕೊನೇವರೆಗೂ ಒತ್ತಡ ಹೇರುತ್ತಿದ್ದರು, ಅದಕ್ಕೆ ತಾನು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡುವುದು ತಮ್ಮೆಲ್ಲರ ಗುರಿಯಾಗಿರಬೇಕು ಎಂದು ಹೇಳಿದ್ದೆ ಎಂದರು. ಈಗ ಜೆಡಿಎಸ್ ವರ್ತನೆ ನೋಡಿ ಅವರೆಲ್ಲ ಮತ್ತೇ ತನಗೆ ಫೋನ್ ಮಾಡಿ ತನ್ನ ನಿರ್ಧಾರದ ಬಗ್ಗೆ ಕೇಳುತ್ತಿದ್ದಾರೆ, ತಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ, ಕುಮಾರಸ್ವಾಮಿಯವರು ಮನೆಗೆ ಬಂದು ಹೋದ ಮೇಲೆ ಒಂದೇ ಒಂದು ಸಲ ತನಗೆ ಫೋನ್ ಮಾಡಿಲ್ಲ ಎಂದು ಸುಮಲತಾ ಬೇಸರದಿಂದ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೂ ಸುಮಲತಾ ಅಂಬರೀಶ್ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ: ಹನಕೆರೆ ಶಶಿಕುಮಾರ್