Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಈವರೆಗಿನ ಕೆಲಸ ತೃಪ್ತಿ ನೀಡಿದೆಯಾ? ಮತಗಟ್ಟೆಯಲ್ಲೇ ಉತ್ತರ ನೀಡಿದ ಯಶ್​

ಸರ್ಕಾರದ ಈವರೆಗಿನ ಕೆಲಸ ತೃಪ್ತಿ ನೀಡಿದೆಯಾ? ಮತಗಟ್ಟೆಯಲ್ಲೇ ಉತ್ತರ ನೀಡಿದ ಯಶ್​

ಮದನ್​ ಕುಮಾರ್​
|

Updated on: Apr 26, 2024 | 2:50 PM

ಎಲ್ಲರೂ ಬಂದು ಮತ ಹಾಕಬೇಕು ಎಂದು ನಟ ಯಶ್​ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಯಶ್​ ಮತ ಹಾಕಿದ್ದಾರೆ. ಸದ್ಯ ಅವರು ‘ಟಾಕ್ಸಿಕ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್​ ನೀಡಿ ಅವರು ಮತದಾನ ಮಾಡಲು ಬಂದಿದ್ದಾರೆ. ಮತ ಹಾಕಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿ ತಮ್ಮ ಅನಿಸಿಕೆ ತಿಳಿಸಿದರು.

‘ರಾಕಿಂಗ್​ ಸ್ಟಾರ್​’ ಯಶ್​ (Yash) ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ. ‘ಎಲ್ಲರೂ ಓಟ್​ ಮಾಡಲೇಬೇಕು. ಅದು ನಮ್ಮ ಕರ್ತವ್ಯ ಮತ್ತು ಹಕ್ಕು. ಮತದಾನಕ್ಕೆ ಅವಕಾಶ ಸಿಕ್ಕ ನಂತರ ನಿಮ್ಮ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕು. ಎಲ್ಲವನ್ನೂ ಗಮನಿಸಿ ಕಲಿಯಬೇಕು. ಓಟಿಂಗ್​ ಜಾಸ್ತಿ ಆದರೆ ಜಾಗೃತಿ ಜಾಸ್ತಿ ಆಗಿದೆ ಅಂತ ಅರ್ಥ. ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇರಬೇಕು. ಕೆಲವೊಮ್ಮೆ ಸ್ವಲ್ಪ ಜನರು ಮಾತ್ರ ಮತದಾನ ಮಾಡಿರುತ್ತಾರೆ. ಮಿಕ್ಕಿದವರ ಅಭಿಪ್ರಾಯ ಏನಿರುತ್ತೆ ಎಂಬುದು ನಮಗೆ ಗೊತ್ತಾಗುವುದೇ ಇಲ್ಲ. ಸಂಜೆ ವೇಳೆಗೆ ಎಷ್ಟು ಮತದಾನ (Voting) ಆಗುತ್ತೆ ಎಂಬುದು ನೋಡಬೇಕು. ಸರ್ಕಾರ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಜನರಿಗೆ ಅವರ ಕೆಲಸವನ್ನು ಮಾಡಲು ಬಿಡಬೇಕು. ಸರ್ಕಾರದ ಇಷ್ಟು ದಿನಗಳ ಕೆಲಸಗಳ ಪೈಕಿ ಕೆಲವು ವಿಭಾಗಗಳಲ್ಲಿ ನನಗೆ ತೃಪ್ತಿ ಇರಬಹುದು. ಕೆಲವು ವಿಭಾಗಗಳಲ್ಲಿ ತೃಪ್ತಿ ಇಲ್ಲ. ಭಾರತಕ್ಕೆ ಈಗ ಅವಕಾಶ ಇದೆ. ಯುವಕರ ಸಂಖ್ಯೆ ನೋಡಿದರೆ ಇದು ಒಳ್ಳೆಯ ಸಮಯ ಎನಿಸುತ್ತದೆ. ಇದನ್ನು ಉಪಯೋಗಿಸಿಕೊಂಡು ಮುಂದಕ್ಕೆ ಹೋಗಬೇಕು’ ಎಂದು ಯಶ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.