AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudep: ವೋಟ್ ಮಾಡದೆ ಮನೆಯಲ್ಲಿ ಕುಳಿತವರ ಬಗ್ಗೆ ಕಿಚ್ಚ ಸುದೀಪ್ ಅಸಮಾಧಾನ

Kichcha Sudep: ವೋಟ್ ಮಾಡದೆ ಮನೆಯಲ್ಲಿ ಕುಳಿತವರ ಬಗ್ಗೆ ಕಿಚ್ಚ ಸುದೀಪ್ ಅಸಮಾಧಾನ

ರಾಜೇಶ್ ದುಗ್ಗುಮನೆ
|

Updated on: Apr 26, 2024 | 1:29 PM

Share

ಬೆಂಗಳೂರಿನ ಪುಟ್ಟೇನಹಳ್ಳಿಯ ಆಕ್ಸ್​ಫರ್ಡ್ ಶಾಲೆಯಲ್ಲಿ ಕಿಚ್ಚ ಸುದೀಪ್ ಮತದಾನ ಮಾಡಿದ್ದಾರೆ. ಕುಟುಂಬದ ಜೊತೆ ಆಗಮಿಸಿದ ಅವರು ಮತ ಹಾಕಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಯಾರು ಬಂದು ಮತ ಹಾಕುತ್ತಾರೆ ಅವರಿಗೆ ಗೌರವ ಕೊಡೋಣ’ ಎಂದಿದ್ದಾರೆ ಅವರು.

ಕಿಚ್ಚ ಸುದೀಪ್ (Kichcha Sudep) ಅವರು ಬೆಂಗಳೂರಿನ ಪುಟ್ಟೇನಹಳ್ಳಿಯ ಆಕ್ಸ್​ಫರ್ಡ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಕುಟುಂಬದ ಜೊತೆ ಆಗಮಿಸಿದ ಅವರು ಮತ ಹಾಕಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ದೇಶದ ಮೇಲೆ ಪ್ರೀತಿ ಇರುವ ಎಲ್ಲರೂ ಮತ ಹಾಕಬೇಕು. ಕೆಲವರು ಎಷ್ಟೇ ಹೇಳಿದ್ರೂ ಬಂದು ಮತ ಹಾಕುವುದಿಲ್ಲ. ಅಂತವರಿಗೆ ನಾವು ಏನು‌ಮಾಡೋಕೆ ಆಗುತ್ತೆ? ವೋಟ್ ಹಾಕಿದವ್ರಿಗೂ ಒಳ್ಳೆಯದಾಗುತ್ತಿದೆ, ವೋಟ್ ಹಾಕದೆ ಇರುವವರಿಗೂ ಒಳ್ಳೆಯದಾಗುತ್ತಿದೆ. ಯಾರು ಬಂದು ಮತ ಹಾಕುತ್ತಾರೆ ಅವರಿಗೆ ಗೌರವ ಕೊಡೋಣ. ಎಲ್ಲರೂ ಕಡ್ಡಾಯವಾಗಿ ಮತಹಾಕಬೇಕು’ ಎಂದು ಸುದೀಪ್ ಅವರು ಮನವಿ ಮಾಡಿಕೊಂಡಿದ್ದಾರೆ. ಸುದೀಪ್ ಅವರನ್ನು ನೋಡಲು ಮತಗಟ್ಟೆಯ ಹೊರಗೆ ಅಭಿಮಾನಿಗಳು ನೆರೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More