ಸುಬ್ರಹ್ಮಣ್ಯನಗರ: 2 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಪ್ರತಿಷ್ಠಿತ ಕಂಪನಿಯ ಉದ್ಯೋಗಿ ನೇಣಿಗೆ ಶರಣು

2 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯನಗರದಲ್ಲಿ ನಡೆದಿದೆ. 27 ವರ್ಷದ ನವವಿವಾಹಿತೆ ಭುವನಾ ನೇಣಿಗೆ ಶರಣಾಗಿದ್ದಾಳೆ.

ಸುಬ್ರಹ್ಮಣ್ಯನಗರ: 2 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಪ್ರತಿಷ್ಠಿತ ಕಂಪನಿಯ ಉದ್ಯೋಗಿ ನೇಣಿಗೆ ಶರಣು
ಅತ್ತೆ ಸೊಸೆ ಕಿತ್ತಾಟ: ಸೊಸೆಗೆ ಚಾಕುವಿನಿಂದ ಚುಚ್ಚಿದ್ದ ಅತ್ತೆ, ಸೊಸೆ ಸತ್ತಳೆಂದು ಅಂಜಿ ನೇಣಿಗೆ ಶರಣು

Updated on: Jan 02, 2021 | 11:34 PM

ಬೆಂಗಳೂರು: 2 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯನಗರದಲ್ಲಿ ನಡೆದಿದೆ. 27 ವರ್ಷದ ನವವಿವಾಹಿತೆ ಭುವನಾ ನೇಣಿಗೆ ಶರಣಾಗಿದ್ದಾಳೆ.

ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭುವನಾ ಚಾಲಕನಾಗಿದ್ದ ಸಾಗರ್​ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು ಎಂದು ಹೇಳಲಾಗಿದೆ. ಆದರೆ, ಇತ್ತೀಚೆಗೆ ಉಂಟಾಗಿದ್ದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ನಡುವೆ ವಿರಸ ಮೂಡಿತ್ತು.

ಹಾಗಾಗಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಭುವನಾ ನೇಣಿಗೆ ಶರಣಾಗಿದ್ದಾಳೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಹಾಸನ: ಪಟ್ಲ ಬೆಟ್ಟದ ಕಾಡಂಚಿನಲ್ಲಿ ಹೆಣ್ಣಾನೆ ಅನುಮಾನಾಸ್ಪದ ಸಾವು