ಬಳ್ಳಾರಿಯ ಪಾದ್ರಿ ಜೈಲುಪಾಲು.. ಮದುವೆಯಾಗ್ತೀನಿ ಅಂತ ಹಲವರಿಗೆ ಕೈಕೊಟ್ಟ ಭೂಪನನ್ನು ಕೊನೆಗೂ ಬಂಧಿಸಿದ ಪೊಲೀಸರು
54 ವರ್ಷದ ಪಾದ್ರಿ ಚರ್ಚ್ಗೆ ಬರ್ತಿದ್ದ 24 ವರ್ಷದ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದ. ಯುವತಿ ಪೋಷಕರ ವಿರೋಧದ ನಡುವೆ ಮದುವೆ ಕೂಡ ಆಗಿದ್ದ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಫಾಸ್ಟರ್ ಹಲವು ಯುವತಿಯರಿಗೆ ನಂಬಿಸಿ ಮೋಸ ಮಾಡಿದ್ದಾನೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿತ್ತು. ಮೋಸ ಹೋದ ಯುವತಿಯರು ನೀಡಿದ ದೂರಿನ ಮೇರೆಗೆ ಫಾಸ್ಟರ್ ಜೈಲು ಸೇರಿದ್ದಾನೆ. ಅದ್ರ ಡಿಟೇಲ್ಸ್ ಇಲ್ಲಿದೆ.
ಬಳ್ಳಾರಿ: ಜಿಲ್ಲೆಯ ವಿದ್ಯಾನಗರ ಭತ್ರಿ ರಸ್ತೆಯ ಚರ್ಚ್ನಲ್ಲಿ ಫಾಸ್ಟರ್ ಆಗಿದ್ದ ರವಿಕುಮಾರ್ಗೆ ಈಗಾಗಲೇ ಮದುವೆಯಾಗಿತ್ತು. ಆದ್ರೆ ಚರ್ಚ್ಗೆ ಬರುತ್ತಿದ್ದ ಯುವತಿಯರ ಮೇಲೆ ಕಣ್ಣು ಹಾಕುತ್ತಿದ್ದ ಫಾಸ್ಟರ್ ರವಿಕುಮಾರ್ ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದಾನೆ. ಹೀಗೆ ಚರ್ಚ್ಗೆ ಬರುತ್ತಿದ್ದ 24 ವರ್ಷದ ಇಂಜಿನಿಯರ್ ಪದವೀಧರೆ ಯುವತಿಯನ್ನ ಪ್ರೀತಿಸಿ ಇತ್ತೀಚಿಗೆ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದ.
ಈ ಬಗ್ಗೆ ಯುವತಿಯ ಪೋಷಕರು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದ್ರೆ, ಯುವತಿಯೇ ವಿಡಿಯೋ ಮಾಡಿ ನಾನೇ ಫಾಸ್ಟರ್ ಜೊತೆ ಮದುವೆಯಾಗಿದ್ದೇನೆ ಅಂತಾ ಹೇಳಿಕೆ ನೀಡಿದ್ದಳು. ಇದರ ನಡುವೆ ಇನ್ನೂ ಇಬ್ಬರು ಯುವತಿಯರು ಮದುವೆಯಾಗುವುದಾಗಿ ನಂಬಿಸಿ ಫಾಸ್ಟರ್ ರವಿಕುಮಾರ್ ನಮಗೆ ವಂಚಿಸಿದ್ದಾನೆ ಅಂತಾ ಆರೋಪಿಸಿ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ, ಪಾದ್ರಿ ರವಿಕುಮಾರ್ನನ್ನ ಬಂಧಿಸಿದ್ದಾರೆ.
ರವಿಕುಮಾರ್ ವಿರುದ್ಧ ಮೋಸದ ಆರೋಪ ಬೆಂಗಳೂರಿನಲ್ಲಿದ್ದ ಫಾಸ್ಟರ್ ರವಿಕುಮಾರ್ನನ್ನ ಬಂಧಿಸಿದ ಬಳ್ಳಾರಿ ಪೊಲೀಸರು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದ್ದರಿಂದ ಫಾಸ್ಟರ್ ರವಿಕುಮಾರ್ ಈಗ ಬಳ್ಳಾರಿಯ ಕೇಂದ್ರ ಕಾರಗೃಹ ಸೇರಬೇಕಾಗಿದೆ. ರವಿಕುಮಾರ್ ವಿರುದ್ಧ ಮೋಸ ಹೋದ ಯುವತಿಯರು ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರು ಮೋಸ ಹೋದ ಯುವತಿಯರ ಆರೋಪದ ಹಿನ್ನಲೆಯಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ. ಚರ್ಚ್ಗೆ ಬರುತ್ತಿದ್ದ ಹಲವು ಯುವತಿಯರಿಗೆ ರವಿಕುಮಾರ್ ಮೋಸ ಮಾಡಿದ್ದಾನೆ ಅನ್ನೋ ಆರೋಪ ಕೇಳಿಬರುತ್ತಿವೆ. ಆರೆಸ್ಟ್ ಆಗಿರೋ ಪಾದ್ರಿ ಮಾತ್ರ ನಾನು ಯಾವುದೇ ತಪ್ಪು ಮಾಡಿಲ್ಲ, ದುರುದ್ದೇಶದಿಂದ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ನನಗೆ ಇದ್ರಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ ಅಂತಾ ಹೇಳ್ತಾನೆ.
ಚರ್ಚ್ನಲ್ಲಿ ಧರ್ಮ ಸಂದೇಶ ಸಾರಿ, ಭಕ್ತರ ಗೌರವಕ್ಕೆ ಪಾತ್ರರಾಗಿದ್ದಿದ್ರೆ ರವಿಕುಮಾರ್ಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದ್ರೆ ಅದನ್ನ ಬಿಟ್ಟು ಮಾಡಬಾರದ ಕೆಲ್ಸ ಮಾಡಿ ಬಳ್ಳಾರಿ ಜೈಲು ಸೇರಬೇಕಾಗಿದ್ದು, ವಿಪರ್ಯಾಸವೇ ಸರಿ.
ಚರ್ಚ್ ಪಾದ್ರಿಯ ಜೊತೆ ಯುವತಿ ನಾಪತ್ತೆ : ವಿಡಿಯೋ ಮೂಲಕ ಸಿಕ್ತು ಬಿಗ್ ಟ್ವಿಸ್ಟ್
Published On - 6:57 am, Sun, 3 January 21