ಸುಮಲತಾ ಸಂಸದೆಯಾಗಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ

| Updated By: ಸಾಧು ಶ್ರೀನಾಥ್​

Updated on: Jul 07, 2021 | 5:43 PM

nikhil kumaraswamy: ಅಯ್ಯೋ ಪಾಪ ಏನೋ ವೀಕ್ಷಣೆ ಮಾಡಲು ಇವತ್ತು ಹೋಗಿದ್ದಾರೆ. ಒಳ್ಳೇಯದು ಆಗಲಿ ಅವರಿಗೆ. ಡ್ಯಾಂ ಗೆ ಒಂದು ಇತಿಹಾಸ ಇದೆ. ವೈಯಕ್ತಿಕ ದ್ವೇಷ ಸಾಧಿಸಲು ಈ ಮನಸ್ಥಿತಿ ಇಟ್ಟುಕೊಂಡು ಮಾತನಾಡುವುದು ಇವರಿಗೆ ಶೋಭೆ ತರಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್​ ಅವರ ನಡೆಯ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಸುಮಲತಾ ಸಂಸದೆಯಾಗಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ (ಸಂಗ್ರಹ ಚಿತ್ರ)
Follow us on

ರಾಮನಗರ: ಸಂಸದೆಯಾಗಿ ಸುಮಲತಾ ಅಂಬರೀಷ್​ ಅವರು ಮಂಡ್ಯ ಜನತೆಯಲ್ಲಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಕೆಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿ ಮಂಡ್ಯ ಜನರಲ್ಲಿ ಗೊಂದಲ ವುಂಟುಮಾಡುತ್ತಿದ್ದಾರೆ. ಸಂಸದೆಯಾಗಿ ಗೊಂದಲ ಸೃಷ್ಟಿಮಾಡುವುದು ಒಳ್ಳೆಯದು ಅಲ್ಲ. ಬಿರುಕು ಬಿಟ್ಟಿರುವ ಬಗ್ಗೆ ಟೆಕ್ನಿಕಲ್ ಟೀಂ ಮತ್ತು ಸರ್ಕಾರ ಹೇಳಬೇಕು ಎಂದು JDS ಯುವಘಟಕದ ಅಧ್ಯಕ್ಷ ನಿಖಿಲ್‌ ಹೇಳಿದ್ದಾರೆ.

ಆಕ್ರಮ ಗಣಿಗಾರಿಕೆ ಯಾರೇ ಮಾಡುತ್ತಿದ್ದರು ನಾವು ಕೈ ಜೋಡಿಸುವುದಿಲ್ಲ: ನಿಖಿಲ್‌
2018 ರಲ್ಲಿ ಏಳಕ್ಕೆ ಏಳು ಕ್ಷೇತ್ರವನ್ನ ಜೆಡಿಎಸ್ ಗೆದ್ದಿದೆ. ಏಳು ಕ್ಷೇತ್ರದಲ್ಲೂ ಜನರು ಆರ್ಶಿವಾದ ಮಾಡಿದ್ದಾರೆ. ಹಾಗಾಗಿ, ಮಂಡ್ಯದ ಜನರ ಪರ ನಿಲ್ಲುವುದು ನಮ್ಮ ಧರ್ಮ. ಆಕ್ರಮ ಗಣಿಗಾರಿಕೆ ನಡೆಯುತ್ತಿದೆ ಅಂತಾದರೆ ರಾಜ್ಯ ಸರ್ಕಾರ ಯಾವ ರೀತಿ ಬೇಕಾದರೂ ಕ್ರಮ ತೆಗೆದುಕೊಳ್ಳಲಿ. ಆಕ್ರಮ ಗಣಿಗಾರಿಕೆ ಯಾರೇ ಮಾಡುತ್ತಿದ್ದರೂ ನಾವು ಕೈ ಜೋಡಿಸುವುದಿಲ್ಲ. ನಮ್ಮ ಪಕ್ಷದವರೇ ಇದ್ದರೂ ಸಪೋರ್ಟ್ ಮಾಡುವುದಿಲ್ಲ ಎಂದು JDS ಯುವಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಅಯ್ಯೋ ಪಾಪ ಏನೋ ವೀಕ್ಷಣೆ ಮಾಡಲು ಇವತ್ತು ಹೋಗಿದ್ದಾರೆ. ಒಳ್ಳೇಯದು ಆಗಲಿ ಅವರಿಗೆ. ಡ್ಯಾಂ ಗೆ ಒಂದು ಇತಿಹಾಸ ಇದೆ. ವೈಯಕ್ತಿಕ ದ್ವೇಷ ಸಾಧಿಸಲು ಈ ಮನಸ್ಥಿತಿ ಇಟ್ಟುಕೊಂಡು ಮಾತನಾಡುವುದು ಇವರಿಗೆ ಶೋಭೆ ತರಲ್ಲ. ನಮ್ಮ ಸಂಸ್ಕೃತಿ ಏನು ಎಂಬುದು ಇಡೀ ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಈ ರೀತಿಯ ಹೇಳಿಕೆಗಳನ್ನ ಕೊಟ್ಟು, ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಸ್ವರ್ಧಿಸುವ ಮನಸ್ಥಿತಿಗೆ ಬಂದಂತೆ ಇದೆ, ಮೊದಲು ಸಂಸದರಾಗಿ ಜನರ ಋಣ ತೀರಿಸಲಿ ಎಂದು ಸಂಸದೆ ಸುಮಲತಾ ಅಂಬರೀಷ್​ ಅವರ ನಡೆಯ ಬಗ್ಗೆ ನಿಖಿಲ್‌ ಕುಮಾರಸ್ವಾಮಿ ವ್ಯಂಗ್ಯವಾಡಿದರು.

(nikhil kumaraswamy on mandya mp sumalatha ambareesh visit to illegal mining in krs dam area)