ಬಿಎಂಟಿಸಿ ಬಸ್‌ ಬಳಕೆ ಉತ್ತೇಜಿಸಲು ‘ನಿಮ್ಮ ಬಸ್‌ ಯಾತ್ರೆ’

ಬೆಂಗಳೂರು: ಬಿಎಂಟಿಸಿ ಬಸ್‌ ಬಳಕೆ ಉತ್ತೇಜಿಸಲು ನಿಮ್ಮ ಬಸ್‌ ಯಾತ್ರೆ ಎಂಬ ವಿಶೇಷ ಅಭಿಯಾನವನ್ನ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಬೆಳ್ಳಂದೂರುವರೆಗೆ ಬಸ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಭಿಯಾನದಲ್ಲಿ ಬಿಎಂಟಿಸಿ ಎಂಡಿ.ಸಿ.ಶಿಖಾ, ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ್ ರಾವ್, ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್, ನಟ ಚೇತನ್ ಭಾಗಿಯಾಗಿದ್ದಾರೆ. ಅಧಿಕಾರಿಗಳು ಸ್ವತಃ ಸಾರ್ವಜನಿಕ ಬಸ್ ನಲ್ಲಿ ಸಂಚಾರಿಸುವ ಮೂಲಕ ಬಸ್ ಲೈನ್ ಬಗ್ಗೆ ಜಾಗೃತಿ ಮೂಡಿಸಿದರು. ಟ್ರಾಫಿಕ್ ಸಮಸ್ಯೆ […]

ಬಿಎಂಟಿಸಿ ಬಸ್‌ ಬಳಕೆ ಉತ್ತೇಜಿಸಲು ‘ನಿಮ್ಮ ಬಸ್‌ ಯಾತ್ರೆ’

Updated on: Dec 11, 2019 | 11:04 AM

ಬೆಂಗಳೂರು: ಬಿಎಂಟಿಸಿ ಬಸ್‌ ಬಳಕೆ ಉತ್ತೇಜಿಸಲು ನಿಮ್ಮ ಬಸ್‌ ಯಾತ್ರೆ ಎಂಬ ವಿಶೇಷ ಅಭಿಯಾನವನ್ನ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಬೆಳ್ಳಂದೂರುವರೆಗೆ ಬಸ್ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಅಭಿಯಾನದಲ್ಲಿ ಬಿಎಂಟಿಸಿ ಎಂಡಿ.ಸಿ.ಶಿಖಾ, ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ್ ರಾವ್, ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್, ನಟ ಚೇತನ್ ಭಾಗಿಯಾಗಿದ್ದಾರೆ. ಅಧಿಕಾರಿಗಳು ಸ್ವತಃ ಸಾರ್ವಜನಿಕ ಬಸ್ ನಲ್ಲಿ ಸಂಚಾರಿಸುವ ಮೂಲಕ ಬಸ್ ಲೈನ್ ಬಗ್ಗೆ ಜಾಗೃತಿ ಮೂಡಿಸಿದರು.

ಟ್ರಾಫಿಕ್ ಸಮಸ್ಯೆ ತಡೆಯುವ ದೃಷ್ಟಿಯಿಂದ ಬಸ್​ಗಾಗಿ ಪ್ರತ್ಯೇಕ ಬಿಎಂಟಿಸಿ ಲೈನ್ ಮಾಡಿದ್ದು, ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸಂಸ್ಥೆಗಳ ಜೊತೆ ಕೈಜೋಡಿಸಿ ಎಂದು ಹೇಳಿದ್ದಾರೆ. ಈಗಾಗಲೇ ಬಿಬಿಎಂಪಿ 15 ‌ಕೋಟಿ ವೆಚ್ಚದಲ್ಲಿ ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರಂ ವರೆಗೆ ಪ್ರತ್ಯೇಕ ಬಸ್ ಮಾರ್ಗ ವ್ಯವಸ್ಥೆ ಮಾಡಿದೆ.

Published On - 11:03 am, Wed, 11 December 19