ಸಿಎಂ ಸಿದ್ದರಾಮಯ್ಯ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದ್ದನ್ನು ಸ್ವಾಗತಿಸಿದ ನಿರಂಜನ ಹಿರೇಮಠ

|

Updated on: Apr 22, 2024 | 4:01 PM

ಉನ್ನತ ಮಟ್ಟದ ತನಿಖೆಯಾಗಬೇಕು ಅಂತ ತಮ್ಮ ಸಮುದಾಯ, ಅನೇಕ ಸಂಘಸಂಸ್ಥೆಗಳು ಮತ್ತು ನಾಡಿನ ಜನ ಆಗ್ರಹಸಿದ್ದರು, ಆ ಬೇಡಿಕೆಗೆ ಮನ್ನಣೆ ನೀಡಿರುವ ಮುಖ್ಯಮಂತ್ರಿಯವರಿಗೆ ತಮ್ಮ ಕುಟುಂಬ, ಸಮುದಾಯ ಮತ್ತು ನೇಹಾಗೆ ನ್ಯಾಯ ಸಿಗಬೇಕು ಅಂತ ಹೋರಾಡುತ್ತಿರುವ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ನಿರಂಜನ ಹಿರೇಮಠ ಹೇಳಿದರು.

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣದ (Neha Hiremath murder case) ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೊರಡಿಸಿರುವ ಆದೇಶವನ್ನು ಯುವತಿಯ ತಂದೆ ನಿರಂಜನ ಹಿರೇಮಠ (Niranjan Hiremath) ಸ್ವಾಗತಿಸಿದ್ದಾರೆ. ಉನ್ನತ ಮಟ್ಟದ ತನಿಖೆಯಾಗಬೇಕು ಅಂತ ತಮ್ಮ ಸಮುದಾಯ, ಅನೇಕ ಸಂಘಸಂಸ್ಥೆಗಳು ಮತ್ತು ನಾಡಿನ ಜನ ಆಗ್ರಹಸಿದ್ದರು, ಆ ಬೇಡಿಕೆಗೆ ಮನ್ನಣೆ ನೀಡಿರುವ ಮುಖ್ಯಮಂತ್ರಿಯವರಿಗೆ ತಮ್ಮ ಕುಟುಂಬ, ಸಮುದಾಯ ಮತ್ತು ನೇಹಾಗೆ ನ್ಯಾಯ ಸಿಗಬೇಕು ಅಂತ ಹೋರಾಡುತ್ತಿರುವ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ನಿರಂಜನ ಹಿರೇಮಠ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ವಕೀಲರೂ ಆಗಿರುವುದರಿಂದ ಪ್ರಕರಣದ ಆಳವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ, ಹಾಗಾಗೇ ಕೇಸನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ ಎಂದು ನಿರಂಜನ ಹೇಳಿದರು. ಸಿಐಡಿ ತನಿಖೆಯಿಂದ ತಮ್ಮ ಮಗಳ ಸಾವಿಗೆ ನ್ಯಾಯ ಸಿಗುವ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ ಅವರು, ಎಲ್ಲವೂ ತನಿಖಾಧಿಕಾರಿಗಳ ಮುಂದಿದೆ, ಘಟನೆಯ ಸಿಸಿಟಿವಿ ಫುಟೇಜ್ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಎಷ್ಟು ದಿನಗಳಿಂದ ಷಡ್ಯಂತ್ರ ನಡೆಯುತಿತ್ತು, ಮತ್ತ್ತು ಇದರಲ್ಲಿ ಇನ್ನೂ ಯಾರೆಲ್ಲ ಶಾಮೀಲಾಗಿದ್ದಾರೆ, ಹತ್ಯೆಗೆ ಕುಮ್ಮಕ್ಕು ನೀಡಿದ್ದು ಯಾರು ಅನ್ನೋದನ್ನು ಪತ್ತೆ ಮಾಡಬೇಕಿದೆ ಎಂದು ನಿರಂಜನ ಹಿರೇಮಠ ಹೇಳಿದರು,

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ