ಜಿಹಾದಿಗಳಿಗೆ, ಕೊಲೆಪಾತಕಿಗಳಿಗೆ ಭಯವಿಲ್ಲ, ಸಿಎಂ, ಗೃಹ ಸಚಿವರು ಬಳೆ ತೊಟ್ಟಿದ್ದಾರೆಯೇ: ವಿಜಯೇಂದ್ರ ಪ್ರಶ್ನೆ

ಹಿಂದೂಗಳ ಹತ್ಯೆಯಾಗ್ತಿದೆ. ಸರ್ಕಾರ ಏನೂ ಮಾಡದ ಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರ ಮೊದಲು ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಿಸಬೇಕು. ಜಿಹಾದಿಗಳಿಗೆ, ಕೊಲೆ ಮಾಡುವ ಪುಂಡರಿಗೆ ಭಯವೇ ಇಲ್ಲದಂತೆ ಆಗಿದೆ. ಈ ಕೊಲೆಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂಬುದು ಗೊತ್ತಾಗುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಜಿಹಾದಿಗಳಿಗೆ, ಕೊಲೆಪಾತಕಿಗಳಿಗೆ ಭಯವಿಲ್ಲ, ಸಿಎಂ, ಗೃಹ ಸಚಿವರು ಬಳೆ ತೊಟ್ಟಿದ್ದಾರೆಯೇ: ವಿಜಯೇಂದ್ರ ಪ್ರಶ್ನೆ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
Follow us
ರಾಮ್​, ಮೈಸೂರು
| Updated By: Ganapathi Sharma

Updated on: Apr 22, 2024 | 4:27 PM

ಮೈಸೂರು, ಏಪ್ರಿಲ್ 22: ಯಾದಗಿರಿಯ ಶಗಾಪುರಪೇಟೆ ಬಡಾವಣೆಯಲ್ಲಿ ಮುಸ್ಲಿಂ ಯುವಕನೊಬ್ಬ (Mulsim Youth) ದಲಿತ ಯುವಕನ (Dalit Youth) ಹತ್ಯೆ ಮಾಡಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ (Mysuru) ಟಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿ ಮಾತನಾಡಿದ ಅವರು, ಮೇಲಿಂದ ಮೇಲೆ ಹಿಂದೂಗಳ ಹತ್ಯೆಯಾಗ್ತಿದ್ದರೂ ಸರ್ಕಾರ ಏನು ಮಾಡದ ಸ್ಥಿತಿಯಲ್ಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಏನು ಬಳೆ ತೊಟ್ಟುಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಹಿಂದೂಗಳ ಹತ್ಯೆಯಾಗ್ತಿದೆ. ಸರ್ಕಾರ ಏನೂ ಮಾಡದ ಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರ ಮೊದಲು ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಿಸಬೇಕು. ಜಿಹಾದಿಗಳಿಗೆ, ಕೊಲೆ ಮಾಡುವ ಪುಂಡರಿಗೆ ಭಯವೇ ಇಲ್ಲದಂತೆ ಆಗಿದೆ. ಈ ಕೊಲೆಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂಬುದು ಗೊತ್ತಾಗುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಸಿಎಂಗೆ ಒಳ್ಳೆಯ ಬುದ್ಧಿ ಕೊಡು ಅಂತಾ ಚಾಮುಂಡಿ ತಾಯಿಗೆ ಬೇಡಿಕೊಳ್ತೇನೆ. ಹಿಂದುಗಳ ಹತ್ಯೆ ನಿಲ್ಲಿಸುವ ಮನಸ್ಸು ಕೊಡು ಎಂದು ಬೇಡುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ನೇಹಾ ಹತ್ಯೆ ಕಹಿ ನೆನಪು ಮಾಸುವ ಮುನ್ನವೇ ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ದಲಿತ ಯುವಕನ ಹತ್ಯೆ

ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ವಿಜಯೇಂದ್ರ ಕೂಡ ಮೈಸೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಬೆಳವಣಿಗೆಯ ಸಂದರ್ಭದಲ್ಲೇ ಯಾದಗಿರಿಯಲ್ಲಿ ದಲಿತ ಯುವಕನ ಹತ್ಯೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ