ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ: ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 10:03 PM

ಯೋಜನೆ ಅನುಷ್ಠಾನ ಸಂಬಂಧ ಸರ್ಕಾರ ಟೆಂಡರ್​ ಕರೆದಿತ್ತು. ಟೆಂಡರ್​ ಪ್ರಕ್ರಿಯೆ ಮಾಹಿತಿಯು ಸೋರಿಕೆ ಆಗಿತ್ತು. ಈಗ ಇದರ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ.

ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ: ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ ಸರ್ಕಾರ
ಇಂದು ಮೈಸೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ
Follow us on

ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಈ ಬಗ್ಗೆ ಟಿವಿ9 ಈ ಬಗ್ಗೆ ನಿರಂತರ ವರದಿ ಕೂಡ ಮಾಡಿತ್ತು. ಈ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯಪಾಲರ ಆದೇಶಾನುಸರ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಗೆ ಸೂಚಿಸಿದೆ. .

ಯೋಜನೆ ಅನುಷ್ಠಾನ ಸಂಬಂಧ ಸರ್ಕಾರ ಟೆಂಡರ್​ ಕರೆದಿತ್ತು. ಟೆಂಡರ್​ ಪ್ರಕ್ರಿಯೆ ಮಾಹಿತಿಯು ಸೋರಿಕೆ ಆಗಿತ್ತು. ಈಗ ಇದರ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ಸರ್ಕಾರ ರಚಿಸಿದೆ. ಉನ್ನತ ಮಟ್ಟದ ಈ ತನಿಖಾ ಸಮಿತಿಗೆ ತನಿಖಾಧಿಕಾರಿಯಾಗಿ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್ ಪಂತ್​ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.

ಏನಿದು ಪ್ರಕರಣ?

ಬೆಂಗಳೂರು ಸುರಕ್ಷಿತ ನಗರ ಕಾರ್ಯಕ್ರಮದ ಅಡಿ ಸಿಸಿಟಿವಿ ಅಳವಡಿಸಲು ಗುತ್ತಿಗೆ ಕರೆಯಲಾಗಿತ್ತು. ಇದರಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಲಾರ್ಸೆನ್ ಆಂಡ್ ಟೂಬ್ರೋ, ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್ ಕಂಪೆನಿಗಳು ಟೆಂಡರ್​ನಲ್ಲಿ ಭಾಗವಹಿಸಿದ್ದವು. ಬಿಇಎಲ್​ ಕೊಟ್ಟ ದೂರಿನನ್ವಯ ಮ್ಯಾಟ್ರಿಕ್ಸ್ ಸೆಕ್ಯುರಿಟಿ & ಸರ್ವೇಲೆನ್ಸ್ ಲಿಮಿಟೆಡ್ ಮತ್ತು ಎನ್​ಸಿಸಿ ಲಿಮಿಟೆಡ್​ ಕಂಪೆನಿಯಲ್ಲಿ ನಿರ್ದೇಶಕರು ಒಬ್ಬರೇ ವ್ಯಕ್ತಿಯಾಗಿದ್ದರಿಂದ, conflict of interest ಇರುವುದು ಕಂಡಿದೆ. ಈ ಎರಡೂ ಕಂಪೆನಿಗಳು ಒಳಒಪ್ಪಂದ ಮಾಡಿಕೊಂಡಿರುವುದು ಕಾಣುತ್ತಿದೆ. ಹಾಗಾಗಿ ಅವರ ಗುತ್ತಿಗೆ ಕರಡು ನಿಯಮಕ್ಕೆ (Contract Document) ವಿರುದ್ಧವಾಗಿದೆ.

ಮ್ಯಾಟ್ರಿಕ್ಸ್ ಕಂಪೆನಿ ಚೀನಾದ ವಸ್ತು ಬಳಕೆ ಮಾಡುವ ಕುರಿತು ಹೇಳಿದ್ದು ಇದು ನಮ್ಮ ಭದ್ರತೆಗೆ ಹೊಡೆತ ಕೊಡಬಹುದು. ಆದ್ದರಿಂದ ಈ ಎರಡೂ ಕಂಪೆನಿಯನ್ನು ಗುತ್ತಿಗೆ ಪ್ರಕ್ರಿಯೆಯಿಂದ ಹೊರಗಿಡಬೇಕೆಂದು ಬಿಇಎಲ್​, ತನ್ನ ಪತ್ರದಲ್ಲಿ ಕೇಳಿಕೊಂಡಿತ್ತು. ಇದೇ ಪತ್ರದ ಆಧಾರದ ಮೇಲೆ ಭ್ರಷ್ಟಾಚಾರ ವಿರೋಧಿ ಸಂಘದ ಶರದ್ ಆಜಾದ್ ಕೂಡ ಕಳೆದ ಮಾರ್ಚ್ 13 ರಂದು ಪತ್ರ ಬರೆದಿದ್ದರು.

ಈ ಆಧಾರವಿಟ್ಟುಕೊಂಡು ಪ್ರಧಾನಿ ಕಾರ್ಯಾಲಯವು ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಕೇಳಿತ್ತು. ತಪ್ಪಾಗಿ ಗುತ್ತಿಗೆ ಕರಡನ್ನು ತಯಾರಿಸಿದ್ದ ಖಾಸಗಿ ಸಂಸ್ಥೆ ಅರ್ನಸ್ಟ್ ಅಂಡ್ ಯಂಗ್ ಕಂಪೆನಿಯ ಮುಖ್ಯಸ್ಥರನ್ನು ಮುಖ್ಯ ಕಾರ್ಯದರ್ಶಿ ನಿರ್ದೇಶನದಂತೆ ಗೃಹ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ, ಸರಕಾರದ ನಿರ್ದೇಶನದಂತೆ ಈ ಗುತ್ತಿಗೆ ಪ್ರಕ್ರಿಯೆಯನ್ನು ವಜಾ ಮಾಡಲಾಗಿತ್ತು.

ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆ: ಗೃಹ ಕಾರ್ಯದರ್ಶಿ ರೂಪಾ ಅವರಿಂದ ದಾಖಲೆ ಬಿಡುಗಡೆ, ವಿವಾದಕ್ಕೆ ಹೊಸ ಆಯಾಮ

TV9 Exclusive: ಕೋಟಿ ಕೋಟಿ ಮೌಲ್ಯದ ಪ್ರಾಜೆಕ್ಟ್ ಮೇಲೆ ಘಟಾನುಘಟಿಗಳ ಕಣ್ಣು; ಆಪ್ತರಿಗೆ ಟೆಂಡರ್​ ಕೊಡಿಸಲು ಮಹಿಳಾ IPS ಅಧಿಕಾರಿ ಹೆಸರು ದುರ್ಬಳಕೆ?

 

Published On - 9:59 pm, Fri, 25 December 20