ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ಜೂನ್ 7ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಆದ್ರೆ ಜೂನ್ 7ರಂದು ಪ್ರಮಾಣ ವಚನ ಸ್ವೀಕರಿಸಲು ಅಡ್ಡಿಯಾಗಿದೆ. ಇದರ ಹಿಂದೆ ರಾಜಕೀಯ ಹುನ್ನಾರ ಇರುವುದು ಸ್ಪಷ್ಟವಾಗಿದೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೂನ್ 7ರಂದು ಪ್ರಮಾಣ ವಚನ ಸ್ವೀಕರಿಸಲು ಅನುಮತಿಗಾಗಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಪೊಲೀಸರಿಗೂ ಮನವಿ ಮಾಡಿದ್ದೆ. ಆದ್ರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಜೂನ್ 8ರವರೆಗೂ ಯಾವುದಕ್ಕೂ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಜೂನ್ 7ರಂದು ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದಿದ್ದಾರೆ. KPCC ಅಧ್ಯಕ್ಷರಾಗಿ ಪದಗ್ರಹಣಕ್ಕೆ ಸರ್ಕಾರ ಉದ್ದೇಶ ಪೂರ್ವಕವಾಗಿ ಅಡ್ಡಿ ಮಾಡುತ್ತಿದೆ ಎಂದು ಡಿಕೆಶಿ ಆರೋಪಿಸಿದರು.
ನಮ್ಮ ಕಾರ್ಯಕರ್ತರು ಜೂನ್ 7 ರಂದು ತಯಾರಿ ಮಾಡಿಕೊಂಡಿದ್ದಾರೆ. ಅಂದು ನಾವು ಕಾರ್ಯಕ್ರಮ ಮಾಡಿಕೊಳ್ಳಲು ಅಗಾದೆ ಇರಬಹುದು. ಜೂನ್ 8 ರಂದು ಲಾಕ್ಡೌನ್ ಮುಗಿದ ಮೇಲು ಆಗಬಹುದು. ಕಾರ್ಯಕ್ರಮದಲ್ಲಿ 150 ಜನ ಸೇರೋಕು ನಮಗೆ ಅವಕಾಶ ಇಲ್ಲ. ಕಾನೂನು ವಿರುದ್ಧವಾಗಿ ನಾವು ಯಾವುದೇ ಕೆಲಸಗಳನ್ನ ಮಾಡುವುದಿಲ್ಲ.
ನಾನು ಅಧ್ಯಕ್ಷನಾದ್ರೂ ನಾನು ಕಾರ್ಯಕರ್ತ. ಸಿಎಂ ಹಾಗೂ ಗೃಹ ಸಚಿವರ ಬಳಿ ನಾನು ಕೇಳುತ್ತೇನೆ. ಅಲ್ಲಿಯವರೆಗೂ ನಿಮ್ಮ ನಿಮ್ಮ ಕೆಲಸಗಳನ್ನ ನೀವು ಮಾಡಿಕೊಂಡು ಹೋಗಿ. ಸರ್ಕಾರ ಅನುಮತಿ ಕೊಟ್ಟ ನಂತರ ದಿನಾಂಕವನ್ನ ಹೇಳುತ್ತೇವೆ. ನಮ್ಮ ಪಕ್ಷ ಜವಾಬ್ದಾರಿಯುತ ಪಕ್ಷವಾಗಿದೆ ಎಂದರು.
Published On - 2:28 pm, Mon, 1 June 20