AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲೂನ್​​ಗೆ ಬಂದಿದ್ದವರಿಗಾಗಿ ಮೈಕ್​ ಹಿಡಿದು ಅಧಿಕಾರಿಗಳು ಜಾಲಾಡಿದ್ರು! ಏಕೆ?

ಕೋಲಾರ: ಇಷ್ಟು ದಿನ ಚೆನ್ನೈ ಮಾರುಕಟ್ಟೆಯಿಂದ ಸಾಕಷ್ಟು ಆತಂಕ ಎದುರಿಸಿದ್ದ ಕೋಲಾರಕ್ಕೆ ಈಗ ಸಲೂನ್ ಶಾಪ್​ನಿಂದ ಕೊರೊನಾ ಆತಂಕ ಎದುರಾಗಿದೆ. ಮಲೇಷಿಯಾದಿಂದ ಬಂದ ವ್ಯಕ್ತಿಯೊಬ್ಬನ ಕ್ವಾರಂಟೈನ್​ ಉಲ್ಲಂಘನೆ ಹಾಗೂ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೋಲಾರದಲ್ಲಿ ಢವ ಢವ ಶುರುವಾಗಿದೆ. ಅಧಿಕಾರಿಗಳು ಮಾಡಿದ ಎಡವಟ್ಟು ಏನು? ಕೊರೊನಾ ಸೋಂಕಿನಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್​ ಆಗಿತ್ತು. ವಿದೇಶದಲ್ಲಿ ಸಿಕ್ಕಿಕೊಂಡಿದ್ದ ಸಾವಿರಾರು ಜನ ಭಾರತೀಯರನ್ನು ತಮ್ಮ ತಾಯ್ನಾಡಿಗೆ ಕರೆದುಕೊಂಡು ಬರಬೇಕೆಂದು ನಿರ್ಧರಿಸಿದ ಸರ್ಕಾರ ಇದೇ ಮೇ […]

ಸಲೂನ್​​ಗೆ ಬಂದಿದ್ದವರಿಗಾಗಿ ಮೈಕ್​ ಹಿಡಿದು ಅಧಿಕಾರಿಗಳು ಜಾಲಾಡಿದ್ರು! ಏಕೆ?
ಸಾಧು ಶ್ರೀನಾಥ್​
| Edited By: |

Updated on: Jun 01, 2020 | 5:43 PM

Share

ಕೋಲಾರ: ಇಷ್ಟು ದಿನ ಚೆನ್ನೈ ಮಾರುಕಟ್ಟೆಯಿಂದ ಸಾಕಷ್ಟು ಆತಂಕ ಎದುರಿಸಿದ್ದ ಕೋಲಾರಕ್ಕೆ ಈಗ ಸಲೂನ್ ಶಾಪ್​ನಿಂದ ಕೊರೊನಾ ಆತಂಕ ಎದುರಾಗಿದೆ. ಮಲೇಷಿಯಾದಿಂದ ಬಂದ ವ್ಯಕ್ತಿಯೊಬ್ಬನ ಕ್ವಾರಂಟೈನ್​ ಉಲ್ಲಂಘನೆ ಹಾಗೂ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೋಲಾರದಲ್ಲಿ ಢವ ಢವ ಶುರುವಾಗಿದೆ.

ಅಧಿಕಾರಿಗಳು ಮಾಡಿದ ಎಡವಟ್ಟು ಏನು? ಕೊರೊನಾ ಸೋಂಕಿನಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್​ ಆಗಿತ್ತು. ವಿದೇಶದಲ್ಲಿ ಸಿಕ್ಕಿಕೊಂಡಿದ್ದ ಸಾವಿರಾರು ಜನ ಭಾರತೀಯರನ್ನು ತಮ್ಮ ತಾಯ್ನಾಡಿಗೆ ಕರೆದುಕೊಂಡು ಬರಬೇಕೆಂದು ನಿರ್ಧರಿಸಿದ ಸರ್ಕಾರ ಇದೇ ಮೇ 22 ರಂದು ಹೊರ ದೇಶದಲ್ಲಿದ್ದವರನ್ನು ಕರೆತಂದಿತ್ತು. ಆ ಪೈಕಿ ಮಲೇಷಿಯಾದಿಂದ ಬಂದಿದ್ದ ಬಂಗಾರಪೇಟೆ ಮೂಲದ ಟೆಕ್ಕಿ ಪಿ 3186 ಕೂಡಾ ಒಬ್ಬ.

ಮೇ 22 ರಂದು ಭಾರತಕ್ಕೆ ಬಂದವನನ್ನು ಬೆಂಗಳೂರಿನ ಹೋಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಮೇ 27 ರಂದು ಆ ವ್ಯಕ್ತಿಯ ಗಂಟಲು ದ್ರವದ ಮಾದರಿ ಹಾಗೂ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ನಂತರ ವರದಿ ಬರುವ ಮುನ್ನವೇ ಮೇ 29 ರಂದು ಟೆಕ್ಕಿಯನ್ನು ಹೋಂ ಕ್ವಾರಂಟೈನ್​ನಲ್ಲಿರಲು ಸೂಚನೆ ನೀಡಿ ಕಳುಹಿಸಲಾಗಿತ್ತು. ಈ ಟೆಕ್ಕಿಯ ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿ ಇಲ್ಲಿ ಬೆಂಗಳೂರಿನ ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದ ಈಗ ಬಂಗಾರಪೇಟೆ ಪಟ್ಟಣದಲ್ಲಿ ಬಹುದೊಡ್ಡ ಆತಂಕವೊಂದು ಶುರುವಾಗಿದೆ.

ಮೇ 29 ರಂದು ಬಂಗಾರಪೇಟೆಗೆ ಬಂದಿದ್ದ ವ್ಯಕ್ತಿ ತನ್ನ ವಯಸ್ಸಾದ ತಂದೆ-ತಾಯಿಯ ಜೊತೆಗೆದ್ದ. ಅಷ್ಟೇ ಅಲ್ಲದೆ ಮೇ 31 ರಂದು ಬೆಳಗ್ಗೆ ಅಲ್ಲೇ ಅವರ ಮನೆ ಬಳಿ ಇದ್ದಂತ ಸಲೂನ್​ನಲ್ಲಿ ಹೋಗಿ ಹೇರ್​ ಕಟ್​ ಮಾಡಿಸಿಕೊಂಡಿದ್ದ. ಆದ್ರೆ ಮಧ್ಯಾಹ್ನದ ಹೊತ್ತಿಗೆ ಈ ಟೆಕ್ಕಿಯ ವರದಿಯಲ್ಲಿ ಕೊರೊನಾ ಪಾಸಿಟಿವ್​ ಬಂದಿದೆ. ಇದು ಸದ್ಯ ಆತಂಕಕ್ಕೆ ಕಾರಣವಾಗಿದೆ.

ಸಲೂನ್​​ಗೆ ಬಂದಿದ್ದವರಿಗಾಗಿ ಮೈಕ್​ ಹಿಡಿದು ಜಾಲಾಡಿದ್ರು! ಇನ್ನು ಆತನ ಟ್ರಾವೆಲ್​ ಹಿಸ್ಟರಿ ಪರೀಕ್ಷೆ ಮಾಡಿದಾಗಲೇ ಒಂದು ಕ್ಷಣ ಅವರಿಗೆ ಶಾಕ್​ ಆಗಿತ್ತು. ಕಾರಣ ಆತ ಭಾನುವಾರ ಬೆಳಗ್ಗೆ ಅಲ್ಲೇ ಮನೆ ಬಳಿ ಇದ್ದ ಸಲೂನ್​ ಶಾಪ್​ನಲ್ಲಿ ಕಟಿಂಗ್​ ಮಾಡಿಸಿಕೊಂಡಿದ್ದ. ತಕ್ಷಣ ಸಲೂನ್​ ಶಾಪ್ ​ಮಾಲೀಕನನ್ನು ಕ್ವಾರಂಟೈನ್ ಮಾಡಿ, ಸೋಂಕಿತ ಟೆಕ್ಕಿ ಬಂದು ಹೋದ ನಂತರ ಯಾರ್ಯಾರು ಶಾಪ್​ಗೆ ಬಂದು ಹೋದರು ಅನ್ನೋದನ್ನು ಹುಡುಕಾಟ ಶುರು ಮಾಡಿದ್ರು. ಅಲ್ಲಿ ಹತ್ತಕ್ಕೂ ಹೆಚ್ಚು ಜನ ಬಂದು ಹೋಗಿರುವ ಮಾಹಿತಿ ಪಡೆದ ಅಧಿಕಾರಿಗಳು ಬೇರೆ ದಾರಿ ಕಾಣದೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಮೈಕ್​ ಹಿಡಿದು ಅನೌನ್ಸ್​ ಮಾಡೋದಕ್ಕೆ ಆರಂಭ ಮಾಡಿದ್ರು.

ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ರಣಕೇಕೆ ಜೋರಾಗಿದ್ದು, ಇಷ್ಟು ದಿನ ಹೊರ ರಾಜ್ಯಕ್ಕೆ ಹೋಗಿ ಬಂದವರಿಂದ ಸೋಂಕು ಹರಡಿ ಕಂಗಾಲಾಗಿದ್ದ ಜಿಲ್ಲೆಯ ಜನರಲ್ಲಿ, ಇನ್ಮುಂದೆ ವಿದೇಶಗಳಿಗೆ ಹೋಗಿ ಬಂದವರಿಂದ ಸೋಂಕು ಹರಡುವ ಭೀತಿ ಶುರುವಾಗಿದೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ