AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​ನಲ್ಲಿ ಈ 3 ನಿಯಮ ಬದಲಿಸಿ: ಸಚಿನ್ ತೆಂಡೂಲ್ಕರ್ ಸಲಹೆ!

ಟಿ20 ಕ್ರಿಕೆಟ್​ನಲ್ಲಿ ಸಮತೋಲನ ತಪ್ಪಿದೆ. ಇದಕ್ಕೆ ಸಾಕ್ಷಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 . ಈ ಬಾರಿಯ ಐಪಿಎಲ್​ನಲ್ಲಿ ಬ್ಯಾಟರ್​ಗಳ ಅಬ್ಬರದೊಂದಿಗೆ ರನ್ ಪ್ರವಾಹವೇ ಹರಿದಿದೆ. ಅದರಲ್ಲೂ ಈ ಬಾರಿಯ ಐಪಿಎಲ್​ನಲ್ಲಿ ಆಡಲಾದ 73 ಪಂದ್ಯಗಳಲ್ಲಿ ಬರೋಬ್ಬರಿ 61 ಬಾರಿ 200+ ಸ್ಕೋರ್ ದಾಖಲಾಗಿದೆ. ಹೀಗಾಗಿಯೇ ಇದೀಗ ಐಪಿಎಲ್​ ಕೇವಲ ಬ್ಯಾಟರ್​ಗಳ ಆಟವಾಗಿ ಮಾರ್ಪಟ್ಟಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಐಪಿಎಲ್​ನಲ್ಲಿ ಈ 3 ನಿಯಮ ಬದಲಿಸಿ: ಸಚಿನ್ ತೆಂಡೂಲ್ಕರ್ ಸಲಹೆ!
Sachin TendulkarImage Credit source: IPL/RCB
ಝಾಹಿರ್ ಯೂಸುಫ್
|

Updated on: May 31, 2026 | 10:36 AM

Share

ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಟಿ20 ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಬ್ಯಾಟರ್​ಗಳ ಆಟವಾಗಿ ಬದಲಾಗಿದೆ. ಈ ಬದಲಾವಣೆಯೊಂದಿಗೆ ಬೌಲರ್​ಗಳು ಕೇವಲ ರನ್ ನೀಡಲು ಸೀಮತವಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಈ ಅಸಮತೋಲನವನ್ನು ಸರಿಪಡಿಸಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೂರು ನಿಯಮಗಳ ಬದಲಾವಣೆಗೆ ಸಲಹೆ ನೀಡಿದ್ದಾರೆ. ಆ ನಿಯಮಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  1. ಇಂಪ್ಯಾಕ್ಟ್ ಪ್ಲೇಯರ್ ನಿಯಮ: ಐಪಿಎಲ್​ನಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆದು ಹಾಕಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ. ಈ ನಿಯಮದಿಂದಾಗಿ ಎಲ್ಲಾ ತಂಡಗಳು 8 ಅಥವಾ 9ನೇ ಕ್ರಮಾಂಕದವರೆಗೆ ಬ್ಯಾಟರ್​ಗಳನ್ನು ಕಣಕ್ಕಿಳಿಸುತ್ತಿದೆ. ಇದರಿಂದ ಆಲ್​ರೌಂಡರ್​ಗಳ ಪ್ರಾಮುಖ್ಯತೆ ಕುಸಿದಿದ್ದು, ಹೀಗಾಗಿ ಈ ನಿಯಮ ತೆಗೆದು ಹಾಕಿ 11 ಆಟಗಾರರ ತಂಡವನ್ನು ಕಣಕ್ಕಿಸುವುದು ಸೂಕ್ತ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
  2. 5 ಓವರ್​ಗಳ ಅವಕಾಶ: ಟಿ20 ಕ್ರಿಕೆಟ್​ನಲ್ಲಿ ಒಬ್ಬ ಬೌಲರ್​ಗಳಿಗೆ 4 ಓವರ್​ಗಳನ್ನು ಮಾತ್ರ ಬೌಲ್ ಮಾಡಲು ಅವಕಾಶವಿದೆ. ಆದರೆ ಈ ನಿಯಮವನ್ನು ಬದಲಿಸಿ ಒಬ್ಬ ಬೌಲರ್​ಗೆ 5 ಓವರ್​ಗಳನ್ನು ಎಸೆಯತಲು ಅವಕಾಶ ನೀಡಬೇಕೆಂದು ಸಚಿನ್ ಆಗ್ರಹಿಸಿದ್ದಾರೆ. ಇದರಿಂದ  ಅತ್ಯುತ್ತಮವಾಗಿ ಬೌಲಿಂಗ್ ಮಾಡಿರುವ ಬೌಲರ್ ಆ ಪಂದ್ಯದಲ್ಲಿ​ ಹೆಚ್ಚಿನ ಪ್ರಭಾವ ಬೀರಲು ಸಹಕಾರಿಯಾಗಲಿದೆ. ಅಲ್ಲದೆ ಹೀಗೆ ಯಶಸ್ವಿಯಾದ ಬೌಲರ್​ ಮೂಲಕ ಬ್ಯಾಟರ್​ಗಳ ರನ್ ವೇಗಕ್ಕೆ ಕಡಿವಾಣ ಹಾಕಬಹುದು ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
  3. 4 + 2 ಪವರ್​ಪ್ಲೇ: ಟಿ20 ಕ್ರಿಕೆಟ್​ನಲ್ಲಿ ಮೊದಲ 6 ಓವರ್​ಗಳು ಪವರ್​ಪ್ಲೇ ಆಗಿದೆ. ಈ ವೇಳೆ ಕೇವಲ ಇಬ್ಬರು ಫೀಲ್ಡರ್​ಗಳಿಗೆ ಮಾತ್ರ ಬೌಂಡರಿ ಲೈನ್​ ಬಳಿ ಫೀಲ್ಡಿಂಗ್ ಮಾಡಲು ಅವಕಾಶ ನೀಡಲಾಗುತ್ತಿದೆ. ಈ ನಿಯಮದಲ್ಲೂ ಬದಲಾವಣೆ ತರುವುದು ಅತ್ಯವಶ್ಯಕ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಪ್ರಸ್ತುತ ಇರುವ ನಿಯಮದ ಬದಲಿಗೆ 4 ಓವರ್​ ಬ್ಯಾಟಿಂಗ್ ಪವರ್​ಪ್ಲೇ, 2 ಓವರ್​ ಬೌಲಿಂಗ್ ಪವರ್​ಪ್ಲೇ ಮಾಡಬೇಕೆಂದು ಸಚಿನ್ ಸಲಹೆ ನೀಡಿದ್ದಾರೆ. ಅಂದರೆ ಬೌಲಿಂಗ್ ಪವರ್​ಪ್ಲೇ ವೇಳೆ ಬೌಂಡರಿ ಲೈನ್ ಬಳಿ ಮೂವರು ಆಟಗಾರರಿಗೆ ಫೀಲ್ಡಿಂಗ್ ನಿಲ್ಲಲು ಅವಕಾಶ ನೀಡಬೇಕು. ಅಲ್ಲದೆ ಈ ಎರಡು ಓವರ್ ಪವರ್​ಪ್ಲೇ ಅನ್ನು ಬೌಲಿಂಗ್ ತಂಡವು ಮೊದಲ 6 ಓವರ್​ಗಳಲ್ಲಿ ಯಾವಾಗ ಬೇಕಾದರೂ ಬಳಸಲು ಅವಕಾಶ ಕಲ್ಪಿಸಬೇಕು. ಇದರಿಂದ ರನ್ ವೇಗಕ್ಕೆ ಕಡಿವಾಣ ಹಾಕುವುದರ ಜೊತೆಗೆ, ನಾಯಕರಿಗೆ ಹೊಸ ತಂತ್ರ ರೂಪಿಸಲು ಸಹಕಾರಿಯಾಗಲಿದೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಈ ನಿಯಮಗಳನ್ನು ಜಾರಿಗೊಳಿಸಿದರೆ, ಟಿ20 ಕ್ರಿಕೆಟ್​ನಲ್ಲಿ ಸಮತೋಲನವನ್ನು ತರಬಹುದು. ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಸಮಾನ ಪೈಪೋಟಿ ಇದ್ದರೆ ಮಾತ್ರ ಕ್ರಿಕೆಟ್ ನೋಡಲು ಮಜಾ ಇರಲಿದೆ. ಹೀಗಾಗಿ ಟಿ20 ಹಾಗೂ ಐಪಿಎಲ್​ನಲ್ಲಿ ಈ ನಿಯಮಗಳನ್ನು ಜಾರಿಗೊಳಿಸುವುದು ಉತ್ತಮ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಇದನ್ನೂ ಓದಿ: IPL 2026: ಆರೆಂಜ್ ಕ್ಯಾಪ್ ರೇಸ್​ನಿಂದ ವಿರಾಟ್ ಕೊಹ್ಲಿ ಔಟ್!

ಬೌಲರ್​ಗಳ ಹಿತರಕ್ಷಣೆಯನ್ನು ಮುಂದಿಟ್ಟು ಸಚಿನ್ ನೀಡಿರುವ ಈ ಸಲಹೆಗಳನ್ನು ಬಿಸಿಸಿಐ ಮತ್ತು ಐಸಿಸಿ ಮುಂಬರುವ ದಿನಗಳಲ್ಲಿ ಜಾರಿಗೆ ತರಲಿದೆಯಾ ಕಾದು ನೋಡಬೇಕಿದೆ.

Follow Us
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್
ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್