AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾದಲ್ಲಿ ಒಬ್ಬರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ

BCCI Double Standards: ಅಭಿಷೇಕ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಟಿ20 ವಿಶ್ವಕಪ್​ನಿಂದಲೂ ಉತ್ತಮ ಫಾರ್ಮ್​ನಲ್ಲಿಲ್ಲ. ಮಾಜಿ ಆಟಗಾರ ಹನುಮ ವಿಹಾರಿ ಬಿಸಿಸಿಐನ ಆಯ್ಕೆ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಂಜು ಸ್ಯಾಮ್ಸನ್ ಕಳಪೆ ಪ್ರದರ್ಶನಕ್ಕಾಗಿ ತಂಡದಿಂದ ಕೈಬಿಟ್ಟಾಗ, ಅಭಿಷೇಕ್ ಶರ್ಮಾ ಅವರನ್ನು ಏಕೆ ಮುಂದುವರಿಸಲಾಗುತ್ತಿದೆ ಎಂದು ವಿಹಾರಿ ಪ್ರಶ್ನಿಸಿದ್ದಾರೆ. ಆಟಗಾರರಿಗೆ ಬೇರೆ ಬೇರೆ ನಿಯಮಗಳಿವೆಯೇ ಎಂದು ಬಿಸಿಸಿಐ ಡಬಲ್ ಸ್ಟ್ಯಾಂಡರ್ಡ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದಲ್ಲಿ ಒಬ್ಬರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ
Sanju, Abhishek
ಪೃಥ್ವಿಶಂಕರ
|

Updated on:Jul 27, 2026 | 7:47 PM

Share

ಟಿ20 ವಿಶ್ವಕಪ್​ನಿಂದಲೂ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಅವರ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲ. ಒಂದೆರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ್ದನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಒಂದಂಕಿ ದಾಟುವುದು ಕಷ್ಟಕರವಾಗಿತ್ತು. ಮೊದಲಿಗೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದ ಅಭಿಷೇಕ್, ಆ ನಂತರ ಜಿಂಬಾಬ್ವೆ ವಿರುದ್ಧವೂ ಅವರ ಪ್ರದರ್ಶನ ತೀರ ಕಳಪೆಯಾಗಿತ್ತು. ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 01, 08 ಮತ್ತು 02 ರನ್ ಗಳಿಸಿದರು. ಇದೀಗ ಅಭಿಷೇಕ್ ಅವರ ಕಳಪೆ ಫಾರ್ಮ್​ ಅವರನ್ನು ಮುಂದಿಟ್ಟು, ಟೀಂ ಇಂಡಿಯಾದ ಮಾಜಿ ಆಟಗಾರ ಹನುಮ ವಿಹಾರಿ ಬಿಸಿಸಿಐ ಅನ್ನು ಟೀಕಿಸಿದ್ದಾರೆ. ಐದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿರುವಾಗ ಅಭಿಷೇಕ್ ಶರ್ಮಾ ಅವರನ್ನು ಏಕೆ ಕೈಬಿಡುತ್ತಿಲ್ಲ ಎಂದು ಹನುಮ ವಿಹಾರಿ ಕೇಳಿದ್ದಾರೆ. ಇಲ್ಲಿ ಪ್ರತಿಯೊಬ್ಬ ಆಟಗಾರನಿಗೂ ವಿಭಿನ್ನ ನಿಯಮಗಳಿವೆಯೇ? ಎಂದು ಬಿಸಿಸಿಐನ ಪ್ರಶ್ನಿಸಿದ್ದಾರೆ.

ಹನುಮ ವಿಹಾರಿ ಹೇಳಿದ್ದೇನು?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಹನುಮ ವಿಹಾರಿ,‘ವಿಶ್ವಕಪ್‌ಗೂ ಮುನ್ನ, ಸಂಜು ಸ್ಯಾಮ್ಸನ್ ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಅವರು ಆಡುವ XI ನಲ್ಲಿ ಸ್ಥಾನ ಕಳೆದುಕೊಂಡರು. ನಂತರ ಅವರು ಮತ್ತೆ ತಂಡಕ್ಕೆ ಮರಳಿ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೂರ್ನಮೆಂಟ್‌ನ ಆಟಗಾರ ಪ್ರಶಸ್ತಿಯನ್ನು ಪಡೆದರು. ಇತ್ತ ಅದೇ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಭಿಷೇಕ್ ಶರ್ಮಾ ಎಷ್ಟು ರನ್ ಗಳಿಸಿದರು?. ಅಭಿಷೇಕ್ ಶರ್ಮಾ ಯುಕೆಯಲ್ಲಿ ನಡೆದ ಸರಣಿಯಲ್ಲಿ ಅರ್ಧಶತಕ ಗಳಿಸಿದನ್ನು ಬಿಟ್ಟರೆ ಅವರು ಬೇರೆ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಿಲ್ಲ.

ಅಭಿಷೇಕ್ ತಮ್ಮ ಕೊನೆಯ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ಬಾರಿಸಿದ್ದಾರೆ. ಅದರಲ್ಲೂ ತಮ್ಮ ಕೊನೆಯ 18 ಪಂದ್ಯಗಳಲ್ಲಿ ಕೇವಲ ಮೂರೇ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಸ್ಯಾಮ್ಸನ್ ವಿಶ್ವಕಪ್‌ನಲ್ಲಿ ಎಷ್ಟು ಪಂದ್ಯಗಳನ್ನು ಆಡಿದ್ದಾರೆ?. ಆಡಿದ್ದು ಕೇವಲ ಮೂರು. ಅವರು ಆ ಮೂರು ಪಂದ್ಯಗಳಲ್ಲೂ ಅರ್ಧಶತಕಗಳನ್ನು ಬಾರಿಸಿದರು. ಆದರೆ ಕೆಲವೇ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಸಂಜುರನ್ನು ತಂಡದಿಂದ ಹೊರಗಿಟ್ಟು ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಆಡುವ ಅವಕಾಶ ನೀಡಲಾಗಿದೆ.

ಇತ್ತ ಕೊನೆಯ ಐದು ಪಂದ್ಯಗಳಲ್ಲಿ ಅಭಿಷೇಕ್ ಅವರ ಅತ್ಯುತ್ತಮ ಸ್ಕೋರ್ ಕೇವಲ 16. ಹೀಗಿದ್ದರೂ ಯಾರೂ ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಒಬ್ಬೊಬ್ಬ ಆಟಗಾರನಿಗೆ ವಿಭಿನ್ನ ನಿಯಮಗಳಿವೆ ಏಕೆ?. ಸಂಜು ಬಗ್ಗೆ ಚರ್ಚಿಸಿದಾಗ, ಅವರು ರನ್ ಗಳಿಸುತ್ತಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಬೇಕು ಎನ್ನುವ ಕೂಗು ಜೋರಾಗುತ್ತದೆ. ಅವರು ಹೇಳುವುದರಲ್ಲಿ ಸತ್ಯವಿದೆ. ಆದರೆ ಅವರು ಲಯದಲ್ಲಿದ್ದಾಗ ಎಂತಹ ಒತ್ತಡದ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹನಮ ವಿಹಾರಿ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?

ಅಭಿಷೇಕ್ ಶರ್ಮಾ ಪ್ರದರ್ಶನ

ಅಭಿಷೇಕ್ ಶರ್ಮಾ ಈ ವರ್ಷ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿರುವ 23 ಪಂದ್ಯಗಳಲ್ಲಿ 23.36 ಸರಾಸರಿಯಲ್ಲಿ ಕೇವಲ 514 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳು ಸೇರಿವೆ. ಇನ್ನು ಕಳೆದ 10 ಪಂದ್ಯಗಳಲ್ಲಿ ಅಭಿಷೇಕ್ ಕೇವಲ 191 ರನ್ ಗಳಿಸಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿಯೂ ಅವರು ಸ್ಕೋರ್ ಮಾಡಲು ವಿಫಲರಾದರು. ಆಡಿದ ಮೂರು ಪಂದ್ಯಗಳಲ್ಲಿ ಕೇವಲ 11 ರನ್ ಮಾತ್ರ ಗಳಿಸಿದರು. ಅದಕ್ಕಾಗಿಯೇ ಅಭಿಷೇಕ್ ಶರ್ಮಾ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Mon, 27 July 26

Follow Us