AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಾಜಿಗೂ ಮುನ್ನ RCB ಮಾಸ್ಟರ್ ಪ್ಲ್ಯಾನ್: ಪೆರ್ರಿ ಇನ್, ಗ್ರೇಸ್ ಔಟ್..!

ವುಮೆನ್ಸ್ ಪ್ರೀಮಿಯರ್ ಲೀಗ್​ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಅಂತಿಮ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿದೆ. ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಮರಳಿರುವುದು ಆರ್‌ಸಿಬಿ ಪಾಳಯಕ್ಕೆ ಆನೆ ಬಲ ತಂದಿದ್ದರೆ, ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ರೇಸ್ ಹ್ಯಾರಿಸ್ ಸೇರಿ ನಾಲ್ವರು ಆಟಗಾರ್ತಿಯರನ್ನು ಆರ್​ಸಿಬಿ ಬಿಡುಗಡೆ ಮಾಡಿದೆ.

ಹರಾಜಿಗೂ ಮುನ್ನ RCB ಮಾಸ್ಟರ್ ಪ್ಲ್ಯಾನ್: ಪೆರ್ರಿ ಇನ್, ಗ್ರೇಸ್ ಔಟ್..!
Perry - GraceImage Credit source: RCB
ಝಾಹಿರ್ ಯೂಸುಫ್
|

Updated on: Sep 29, 2026 | 8:03 AM

Share

ವುಮೆನ್ಸ್ ಪ್ರೀಮಿಯರ್ ಲೀಗ್ 2027ರ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು  ಫ್ರಾಂಚೈಸಿಯು ರಿಟೆನ್ಷನ್ ಹಾಗೂ ರಿಲೀಸ್ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಲೆಜೆಂಡ್ ಎಲ್ಲಿಸ್ ಪೆರ್ರಿ ಕಾಣಿಸಿಕೊಂಡಿದ್ದಾರೆ. ಅದೇ ವೇಳೆ ಕಳೆದ ಬಾರಿ ಆರ್​ಸಿಬಿ ತಂಡದಲ್ಲಿ ಗ್ರೇಸ್ ಹ್ಯಾರಿಸ್ ಹೊರಬಿದ್ದಿದ್ದಾರೆ.

ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎಲ್ಲಿಸ್ ಪೆರ್ರಿಯನ್ನು ಉಳಿಸಿಕೊಂಡು, ಗ್ರೇಸ್ ಹ್ಯಾರಿಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಎಲ್ಲಿ ಪೆರ್ರಿ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿರಲಿಲ್ಲ ಎಂಬುದು.

ಇತ್ತ ಕಳೆದ ಬಾರಿ ಕಣಕ್ಕಿಳಿಯದಿದ್ದರೂ ಪೆರ್ರಿಯನ್ನು ಆರ್​ಸಿಬಿ ತಂಡದಿಂದ ಕೈ ಬಿಟ್ಟಿರಲಿಲ್ಲ. ಇದೀಗ ಮುಂಬರುವ ಸೀಸನ್​ಗಾಗಿ ರಿಟೇನ್ ಮಾಡಿಕೊಳ್ಳುವ ಮೂಲಕ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಏಕೆಂದರೆ ಪೆರ್ರಿಯನ್ನು ಕೈ ಬಿಟ್ಟರೆ ಮತ್ತೆ ಖರೀದಿಸುವುದು ಕಷ್ಟ. ಹೀಗಾಗಿ ಹರಾಜಿಗೂ ಮುನ್ನವೇ ಅವರನ್ನು ಉಳಿಸಿಕೊಂಡು ಗ್ರೇಸ್ ಹ್ಯಾರಿಸ್ ಅವರನ್ನು ರಿಲೀಸ್ ಮಾಡುವ ಸಾಹಸಕ್ಕೆ ಕೈಹಾಕಿದೆ.

ಪೆರ್ರಿ ಇನ್ – ಗ್ರೇಸ್ ಔಟ್:

WPL ನಿಯಮಗಳ ಪ್ರಕಾರ, ಒಂದು ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ  ಗರಿಷ್ಠ ನಾಲ್ಕು ವಿದೇಶಿ ಆಟಗಾರ್ತಿಯರಿಗೆ ಮಾತ್ರ ಆಡಲು ಅವಕಾಶವಿರುತ್ತದೆ. ಎಲ್ಲಿಸ್ ಪೆರ್ರಿ ಮರಳಿರುವುದರಿಂದ, ಆರ್‌ಸಿಬಿ ಈಗಾಗಲೇ ನಾಲ್ಕು ಪ್ರಮುಖ ವಿದೇಶಿ ಆಟಗಾರ್ತಿಯರನ್ನು ರಿಟೇನ್ ಮಾಡಿಕೊಂಡಿದೆ.

• ಎಲ್ಲಿಸ್ ಪೆರ್ರಿ (ಆಲ್‌ರೌಂಡರ್) • ಜಾರ್ಜಿಯಾ ವೋಲ್ (ಬ್ಯಾಟರ್) • ಲಾರೆನ್ ಬೆಲ್ (ವೇಗದ ಬೌಲರ್) • ನಾಡಿನ್ ಡಿ ಕ್ಲರ್ಕ್ (ಆಲ್‌ರೌಂಡರ್)

ಒಂದು ವೇಳೆ ಗ್ರೇಸ್ ಹ್ಯಾರಿಸ್ ಅವರನ್ನೂ ಉಳಿಸಿಕೊಂಡಿದ್ದರೆ, ವಿದೇಶಿ ಆಟಗಾರ್ತಿಯರ ಸಂಖ್ಯೆ ಐದಾಗುತ್ತಿತ್ತು. ಇದರಿಂದ ಹ್ಯಾರಿಸ್ ಅವರಿಗೆ ಪ್ರತಿ ಪಂದ್ಯದಲ್ಲೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುವುದು ಕಷ್ಟವಾಗುತ್ತಿತ್ತು.

ಇನ್ನು 2026ರ ಸೀಸನ್‌ನಲ್ಲಿ ಪೆರ್ರಿ ವೈಯಕ್ತಿಕ ಕಾರಣಗಳಿಂದ ಹೊರಗುಳಿದಾಗ, ಅವರ ಸ್ಥಾನವನ್ನು ತುಂಬಲು ಮತ್ತು ಅಗ್ರ ಕ್ರಮಾಂಕಕ್ಕೆ ಬಲ ತುಂಬಲು ಆರ್‌ಸಿಬಿ ಗ್ರೇಸ್ ಹ್ಯಾರಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಹ್ಯಾರಿಸ್ ಅತ್ಯುತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಆದರೆ ಈಗ ಮೂಲ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರೇ ಲಭ್ಯವಿರುವುದರಿಂದ, ತಂಡದ ಸಮತೋಲನಕ್ಕಾಗಿ ಹ್ಯಾರಿಸ್ ಅವರನ್ನು ಬಿಡುಗಡೆ ಮಾಡುವುದು ಮ್ಯಾನೇಜ್‌ಮೆಂಟ್‌ಗೆ ಅನಿವಾರ್ಯವಾಯಿತು.

ಆರ್‌ಸಿಬಿ ಮುಖ್ಯ ತರಬೇತುದಾರ ಮಲೋಲನ್ ರಂಗರಾಜನ್ ತಿಳಿಸಿರುವಂತೆ, ಪೆರ್ರಿ ಅವರ ಮರಳುವಿಕೆಯು ತಂಡದ ರಚನೆಗೆ ಹೆಚ್ಚಿನ ಸಮತೋಲನವನ್ನು ನೀಡಿದೆ. ಪೆರ್ರಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ಜೊತೆಗೆ 4 ಓವರ್‌ಗಳ ಸಂಪೂರ್ಣ ಬೌಲಿಂಗ್ ಕೋಟಾವನ್ನು ಪೂರೈಸಬಲ್ಲ ವಿಶ್ವದ ಶ್ರೇಷ್ಠ ಆಲ್‌ರೌಂಡರ್.

ಹ್ಯಾರಿಸ್ ಅವರನ್ನು ರಿಲೀಸ್ ಮಾಡುವುದರಿಂದ ಆರ್‌ಸಿಬಿಗೆ ಹರಾಜಿನಲ್ಲಿ ಹೆಚ್ಚಿನ ಪರ್ಸ್ ಮನಿ ಸಿಗಲಿದ್ದು, ಇದರಿಂದ ಮಿನಿ ಹರಾಜಿನಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಬೇರೆ ಆಟಗಾರ್ತಿಯರನ್ನು ಖರೀದಿಸಲು ಸಹಾಯವಾಗುತ್ತದೆ. ಹೀಗಾಗಿ ಗ್ರೇಸ್ ಅವರನ್ನು ರಿಲೀಸ್ ಮಾಡಿ ಪೆರ್ರಿಯನ್ನು ಉಳಿಸಿಕೊಂಡಿದ್ದೇವೆ ಎಂದು ಆರ್​ಸಿಬಿ ಕೋಚ್ ತಿಳಿಸಿದ್ದಾರೆ.

RCB ರಿಟೇನ್ ಹಾಗೂ ರಿಲೀಸ್ ಆಟಗಾರ್ತಿಯರ ಪಟ್ಟಿ:

  • ಆರ್​ಸಿಬಿ ರಿಲೀಸ್ ಮಾಡಿದ ಆಟಗಾರ್ತಿಯರು:
  • ಸ್ಮೃತಿ ಮಂಧಾನ (ನಾಯಕಿ)
  • ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ)
  • ರಿಚಾ ಘೋಷ್ (ವಿಕೆಟ್ ಕೀಪರ್)
  •  ಶ್ರೇಯಾಂಕಾ ಪಾಟೀಲ್
  • ಪೂಜಾ ವಸ್ತ್ರಾಕರ್
  • ರಾಧಾ ಯಾದವ್
  • ಆರುಂಧತಿ ರೆಡ್ಡಿ
  • ಜಾರ್ಜಿಯಾ ವೋಲ್ (ಆಸ್ಟ್ರೇಲಿಯಾ)
  • ಲಾರೆನ್ ಬೆಲ್ (ಇಂಗ್ಲೆಂಡ್)
  • ನಾಡಿನ್ ಡಿ ಕ್ಲರ್ಕ್ (ಸೌತ್ ಆಫ್ರಿಕಾ)
  • ಸಯ್ಯಲಿ ಸತ್ಘರೆ
  • ಪ್ರೇಮಾ ರಾವತ್
  •  ಪ್ರತ್ಯೂಷಾ ಕುಮಾರ್

ಇದನ್ನೂ ಓದಿ: ಕಣಕ್ಕಿಳಿಯದೇ ಸೆಮಿಫೈನಲ್​ಗೆ ಪ್ರವೇಶಿಸಿದ ಟೀಮ್ ಇಂಡಿಯಾ

  • ಆರ್​ಸಿಬಿ ರಿಲೀಸ್ ಮಾಡಿದ ಆಟಗಾರ್ತಿಯರು:
  • • ಗ್ರೇಸ್ ಹ್ಯಾರಿಸ್ (ಆಸ್ಟ್ರೇಲಿಯಾ)
  • • ಲಿನ್ಸೆ ಸ್ಮಿತ್ (ಇಂಗ್ಲೆಂಡ್)
  • ದಯಾಲನ್ ಹೇಮಲತಾ
  • ಗೌತಮಿ ನಾಯಕ್.
Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!