ಪೇಟಿಎಂನಲ್ಲೇ ಸಲ್ಲಿಸಿ ಐಟಿಆರ್; ಕೇವಲ 11 ರೂಗೆ ಜಂಜಾಟವಿಲ್ಲದೆ ಸರಳವಾಗಿ, ಸುಲಭವಾಗಿ ಐಟಿ ರಿಟರ್ನ್ಸ್ ಸಲ್ಲಿಸಿ
File ITR for Rs 11 at Paytm App: ಪೇಟಿಎಂನಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಶುಲ್ಕ ಕೇವಲ 11 ರೂ. ಬಹಳ ಸುಲಭವಾಗಿ ಮತ್ತು ಸರಳವಾಗಿ ಐಟಿಆರ್ ಭರ್ತಿ ಮಾಡಿ ಸಲ್ಲಿಸಬಹುದು. ಕ್ಲಿಯರ್ ಟ್ಯಾಕ್ಸ್ ಸಹಯೋಗದಲ್ಲಿ ಪೇಟಿಎಂ ಈ ಸೇವೆ ಆರಂಭಿಸಿದೆ. ರಿಜಿಸ್ಟರ್ ಆಗಿ ಪ್ಯಾನ್ ನಂಬರ್ ನಮೂದಿಸಿ, ಫಾರ್ಮ್ 16 ಅಪ್‌ಲೋಡ್ ಮಾಡಿದರೆ ಬಹುತೇಕ ಫೈಲಿಂಗ್ ಮುಗಿದಂತೆ.

ನವದೆಹಲಿ, ಜುಲೈ 27: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಧಾವಂತದಲ್ಲಿರುವವರಿಗೆ ಖುಷಿ ಸುದ್ದಿ. ಪೇಟಿಎಂ (Paytm) ತನ್ನ ಪ್ಲಾಟ್ಫಾರ್ಮ್ನಲ್ಲೇ ಐಟಿ ರಿಟರ್ನ್ಸ್ ಸಲ್ಲಿಸುವ ಸೇವೆ ಆರಂಭಿಸಿದೆ. ಬಹಳ ಕಡಿಮೆ ಬೆಲೆಗೆ, ಮತ್ತು ಬಹಳ ಸರಳವಾಗಿ ತೆರಿಗೆದಾರರು ಐಟಿಆರ್ ಭರ್ತಿ ಮಾಡಿ ಸಲ್ಲಿಸಬಹುದು. ಟ್ಯಾಕ್ಸ್ ಕನ್ಸಲ್ಟಿಂಗ್ ಸಂಸ್ಥೆಯಾದ ಕ್ಲಿಯರ್ ಟ್ಯಾಕ್ಸ್ (ClearTax) ಜೊತೆ ಪೇಟಿಎಂ ಹೊಂದಾಣಿಕೆ ಮಾಡಿಕೊಂಡು ಈ ಸೇವೆ ನಡೆಸುತ್ತಿದೆ. ಇದಕ್ಕೆ ಶುಲ್ಕ ಕೇವಲ 11 ರೂ ಎನ್ನಲಾಗಿದೆ.
ಮಾರುಕಟ್ಟೆಯಲ್ಲಿ ಸಿಎ (CA) ಅಥವಾ ಇತರೆ ಪೋರ್ಟಲ್‌ಗಳ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾವಿರಾರು ರೂಪಾಯಿಗಳನ್ನು ತೆರಬೇಕಾಗುತ್ತದೆ. ಆದರೆ ಪೇಟಿಎಂ ಪ್ಲಾಟ್ಫಾರ್ಮ್ನಲ್ಲಿ ಕ್ಲಿಯರ್‌ಟ್ಯಾಕ್ಸ್ ಮೂಲಕ ಬಳಕೆದಾರರು ಕೇವಲ ₹11 ರ ಶುಲ್ಕದಲ್ಲಿ ತಮ್ಮ ರಿಟರ್ನ್ ಅನ್ನು ಫೈಲ್ ಮಾಡಬಹುದು.
ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್ಲಿಸ್ಟ್ ಪರಿಶೀಲಿಸಿ
ಸರಳ ಹಾಗೂ ಸುಲಭ ಪ್ರಕ್ರಿಯೆ: ತೆರಿಗೆದಾರರು ರಿಜಿಸ್ಟರ್ ಮಾಡಿಕೊಂಡು ಪ್ಯಾನ್ ನಂಬರ್ ನಮೂದಿಸಿದರೆ ಪೂರ್ವದಲ್ಲೇ ಭರ್ತಿಯಾದ ಫಾರ್ಮ್ ಅನ್ನು ಪಡೆಯಬಹುದು. ಫಾರ್ಮ್ 16 ಅಥವಾ ಅಗತ್ಯವಿರುವ ಆದಾಯದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಆ ಮೂಲಕ ಯಾವುದೇ ತೊಂದರೆಯಿಲ್ಲದೆ ಕೆಲವೇ ನಿಮಿಷಗಳಲ್ಲಿ ಐಟಿಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ತಜ್ಞರ ಮಾರ್ಗದರ್ಶನ: ಈ ಪ್ಲಾಟ್‌ಫಾರ್ಮ್ ಮೂಲಕ ತೆರಿಗೆದಾರರಿಗೆ ತಮ್ಮ ತೆರಿಗೆ ಉಳಿತಾಯದ ಕುರಿತು ಮತ್ತು ಯಾವುದೇ ಗೊಂದಲಗಳಿದ್ದಲ್ಲಿ ಪರಿಹಾರ ಪಡೆಯಲು ತಜ್ಞರ ಸಹಾಯವೂ (Expert Help) ಲಭ್ಯವಿರುತ್ತದೆ. ಅದೂ ಉಚಿತವಾಗಿ.
ಐಟಿಆರ್ ಸಲ್ಲಿಕೆ ಪ್ರಕ್ರಿಯೆಯು ನಿಖರವಾಗಿರುವುದರಿಂದ ತೆರಿಗೆ ರೀಫಂಡ್ (Tax Refund) ಪ್ರಕ್ರಿಯೆಯೂ ವೇಗವಾಗಿ ನಡೆಯಲು ಇದು ಸಹಕಾರಿಯಾಗಿದೆ.
ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ
ಸಂಬಳದಾರರು (Salaried Employees) ಹಾಗೂ ಸರಳ ಆದಾಯದ ಮೂಲಗಳನ್ನು ಹೊಂದಿರುವವರು ಪೇಟಿಎಂ ಆ್ಯಪ್ ಮೂಲಕ ಈ ಸೌಲಭ್ಯವನ್ನು ಪಡೆದುಕೊಂಡು, ಕಡಿಮೆ ವೆಚ್ಚದಲ್ಲಿ ಮತ್ತು ಸುರಕ್ಷಿತವಾಗಿ ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




