ಕೊರೊನಾ ಸೋಂಕಿಲ್ಲದಿದ್ದರೂ ನನ್ನ ತಂದೆ ಬೆಡ್ ಸಿಗದೇ ಮೃತರಾಗಿದ್ದಾರೆ; ಟಿವಿ9 ಬಳಿ ಮಗನ ಕಣ್ಣೀರು

|

Updated on: May 02, 2021 | 4:47 PM

ನನ್ನ ತಂದೆಗೆ ಕೊರೊನಾ ಸೋಂಕಿಲ್ಲದಿದ್ದರೂ ಬೆಡ್ ಸಿಗದೇ ಇವತ್ತು (ಮೇ 2) ಸಾವನ್ನಪ್ಪಿದ್ದಾರೆ. ಯಡಿಯೂರಪ್ಪ, ಸುಧಾಕರ್ ಮನೆಯಲ್ಲಿ ಇದೇ ರೀತಿ ಆದಾಗ ಅವರಿಗೆ ನೋವು ಗೊತ್ತಾಗತ್ತೆ. ಆಗ ನಾನು ಮಾತನಾಡ್ತೀನಿ ಅಂತ ಟಿವಿ9 ಬಳಿ ತನ್ನ ತಂದೆಯನ್ನು ಕಳೆದುಕೊಂಡ ಮಗ ಕಣ್ಣೀರು ಹಾಕಿದ್ದಾರೆ.

ಕೊರೊನಾ ಸೋಂಕಿಲ್ಲದಿದ್ದರೂ ನನ್ನ ತಂದೆ ಬೆಡ್ ಸಿಗದೇ ಮೃತರಾಗಿದ್ದಾರೆ; ಟಿವಿ9 ಬಳಿ ಮಗನ ಕಣ್ಣೀರು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಶುರುವಾದ ಸಮಸ್ಯೆಗಳು ಒಂದೆರಡಲ್ಲ. ಕೆಲವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಇನ್ನು ಕೆಲವರು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಅಲ್ಲದೆ ಅದೆಷ್ಟೋ ಸೋಂಕಿತರ ಸಾವಿಗೆ ಬೆಡ್​ಗಳ ಕೊರತೆಯೂ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಕೊರೊನಾ ಸೋಂಕಿಲ್ಲದವರಿರೂ ಕೂಡಾ ಬೆಡ್​ಗಳ ಸಮಸ್ಯೆ ಕಾಡುತ್ತಿದೆ ಮತ್ತು ಸಾವನ್ನಪ್ಪುತ್ತಿದ್ದಾರೆ.

ನನ್ನ ತಂದೆಗೆ ಕೊರೊನಾ ಸೋಂಕಿಲ್ಲದಿದ್ದರೂ ಬೆಡ್ ಸಿಗದೇ ಇವತ್ತು (ಮೇ 2) ಸಾವನ್ನಪ್ಪಿದ್ದಾರೆ. ಯಡಿಯೂರಪ್ಪ, ಸುಧಾಕರ್ ಮನೆಯಲ್ಲಿ ಇದೇ ರೀತಿ ಆದಾಗ ಅವರಿಗೆ ನೋವು ಗೊತ್ತಾಗತ್ತೆ. ಆಗ ನಾನು ಮಾತನಾಡ್ತೀನಿ ಅಂತ ಟಿವಿ9 ಬಳಿ ತನ್ನ ತಂದೆಯನ್ನು ಕಳೆದುಕೊಂಡ ಮಗ ಕಣ್ಣೀರು ಹಾಕಿದ್ದಾರೆ.

ತಂದೆಗೆ ಉಸಿರಾಟ ಸಮಸ್ಯೆ ಅಂತ ಹೊಗದ ಆಸ್ಪತ್ರೆ ಇಲ್ಲ. ಸರ್ಕಾರಿ, ಖಾಸಗಿ ಎಲ್ಲಾ ಆಸ್ಪತ್ರೆ ಅಲೆದರೂ ನಾನ್ ಕೊವಿಡ್​ಗೆ ಬೆಡ್ ಇಲ್ಲ. ಕೊನೆಗೆ ನನ್ನ ಮನೆಯಲ್ಲೇ ಸಾಧ್ಯವಾದಷ್ಟು ಆಕ್ಸಿಜನ್ ಕೊಡಿಸಿದ್ದೆ. ಬಿಬಿಎಂಪಿಯವರು ನಮ್ಮ ಪ್ರಯತ್ನ ಮಾಡುತಿದ್ದೇವೆ. ಆದೆರ ಬೆಡ್ ಇಲ್ಲ ಎಂದಿದ್ದರು. ನನ್ನ ತಂದೆಯನ್ನು ಇವರೆಲ್ಲರೂ ಸೇರಿ ಮನೆಯಲ್ಲೇ ಸಾಯಿಸಿದ್ದಾರೆ.

ಎಲ್ಲಾ ಕಡೆ ಬೆಡ್ ಇಟ್ಟಿದಿವಿ, ಯಾವುದೇ ಸಮಸ್ಯೆ ಇಲ್ಲ ಅಂತ ಸುಧಾಕರ್, ಯಡಿಯೂರಪ್ಪರವರು ಹೇಳುತ್ತಾರೆ. ಆದರೆ ನಾನು ಎಲ್ಲಾ ಕಡೆ ಹುಡುಕಿದರೂ ಎಲ್ಲೂ ಇಲ್ಲ. ಓಟ್ ಬೇಕಾದಾಗ ಮಾತ್ರ ಬರುತ್ತಾರೆ. ಸತ್ತರೆ ಯಾರು ಬಂದು ಸಹಾಯ ಮಾಡುತ್ತಿಲ್ಲ ಎಂದು ಮಗ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ

ಕೊರೊನಾ ನಿರ್ವಹಣೆ ವಿಚಾರದಲ್ಲಿ ತಹಶೀಲ್ದಾರ್‌ ಕರ್ತವ್ಯ ಲೋಪ; ಮೈಸೂರು ಡಿಸಿ ರೋಹಿಣಿ ಸಿಂಧೂರಿಯಿಂದ ನೋಟಿಸ್ ಜಾರಿ

ಮಹಿಳೆಯ ಶವದ ಮೇಲಿದ್ದ ಚಿನ್ನಾಭರಣ ಕಳ್ಳತನ; ಚಿಕ್ಕಬಳ್ಳಾಪುರ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ

(Non Corona man is dying without getting a bed in hospital)

Published On - 4:40 pm, Sun, 2 May 21