ಬೆಂಗಳೂರು: ಬಿಡಿಎ ಸೈಟ್ ತೆಗೆದುಕೊಳ್ಳುವ ಮುನ್ನ ಇರಲಿ ಎಚ್ಚರ.. ಯಾಕಂದ್ರೆ ನಗರದಲ್ಲಿ ರಿಯಲ್ ಎಸ್ಟೇಟ್ ಸೈಟ್ ವಂಚಕರ ಜಾಲ ತಲೆ ಎತ್ತಿದೆ. ನೀವು ಸ್ವಲ್ಪ ಯಾಮಾರಿದ್ರು ಲಕ್ಷ ಲಕ್ಷ ಹಣ ಮೋಸ ಮಾಡಿ ಮಕ್ಮಲ್ ಟೋಪಿ ಹಾಕ್ತಾರೆ.
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ ವಿಜಯನಂದಸ್ವಾಮಿ ಎಂಬುವವರು ಬಿಡಿಎ ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆ. ಬಿಡಿಎ ಆಯುಕ್ತರ ನಕಲಿ ಸಹಿ ಮತ್ತು ಸ್ಟ್ಯಾಂಪ್ ಬಳಸಿ ಸುಮಾರು 50 ಜನರಿಗೆ ಟೋಪಿ ಹಾಕಿದ್ದಾರೆ. ಪ್ರತಿಯೊಬ್ಬರಿಂದಲೂ 50 ಸಾವಿರ ದಿಂದ 3 ಲಕ್ಷದವರೆಗೆ ಹಣ ಪಡೆದಿದ್ದಾರೆ.
ಬಿಡಿಎ ಸೈಟ್ ಕೊಡಿಸ್ತೀನಿ ಅಂತ ದುಡ್ಡು ಕಿತ್ತುಕೊಂಡು ನಕಲಿ ಸೈಟ್ ನೀಡಿದ್ದಾರೆ. ಸೈಟ್ ಅಸಲಿಯತ್ತನ್ನ ತಿಳಿದುಕೊಳ್ಳದೆ ಮೋಸ ಹೋಗಿದ್ದ ವ್ಯಕ್ತಿ ಬಿಡಿಎಗೆ ಬಂದು ತನಗಾಗಿರುವ ಮೋಸದ ಬಗ್ಗೆ ಹೇಳಿದಾಗಲೇ ಪ್ರಕರಣ ಬಯಲಾಗಿದೆ. ಬಿಡಿಎ ಟೀಂ ಅಕ್ರಮ ಜಾಲದ ವಂಚಕನ ಹುಡುಕಾಟದಲ್ಲಿದೆ. ಈ ಸಂಬಂಧ ಶೇಷಾದ್ರಿ ಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ವಂಚನೆ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಬಿಡಿಎ ಆಯುಕ್ತ ಡಾ ಹೆಚ್.ಆರ್.ಮಹಾದೇವ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Published On - 11:29 am, Fri, 12 June 20