
ಚಿತ್ರದುರ್ಗ: ಕೊರೊನಾ ಮಾರಿಯಿಂದ ಬ್ಲ್ಯಾಕ್, ವೈಟ್, ಯೆಲ್ಲೋ ಹೀಗೆ.. ನಾನಾ ಬಣ್ಣಗಳ ಫಂಗಸ್ ಸುಳಿಗೆ ಜನ ಸಿಲುಕುತ್ತಿದ್ದಾರೆ. ಈಗ ಚರ್ಮಕ್ಕೂ ಫಂಗಸ್ ಬರುವುದನ್ನು ಎದುರಿಸುವಂತಾಗಿದೆ. ಅದೂ ಕರ್ನಾಟಕ ರಾಜ್ಯದ ಚಿತ್ರದುರ್ಗದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.
ದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದ್ದು, ಆತಂಕಕಾರಿಯಾಗಿದೆ ಎಂದು ಕಿವಿ, ಮೂಗು ಮತ್ತು ಗಂಟಲು (ಇಎನ್ಟಿ) ತಜ್ಞ ಡಾ. ಎನ್.ಬಿ. ಪ್ರಹ್ಲಾದ್ ಟಿವಿ9 ಗೆ ಮಾಹಿತಿ ನೀಡಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖವಾಗುತ್ತಿದ್ದ ವ್ಯಕ್ತಿಗೆ ಹೊಸದಾಗಿ ಚರ್ಮದ ಮೇಲೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಕರ್ನಾಟಕ ಇಎನ್ಟಿ ಆಸ್ಪತ್ರೆಯಲ್ಲಿ ಈ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು E.N.T ತಜ್ಞ ಪ್ರಹ್ಲಾದ್ ಅವರು ತಿಳಿಸಿದ್ದಾರೆ. ಕೊವಿಡ್ ನಿಂದ ಗುಣಮುಖವಾಗುತ್ತಿದ್ದ ಪಂಚಾಕ್ಷರಪ್ಪ(54) ಎಂಬುವವರಿಗೆ ಚರ್ಮದ ಬ್ಲ್ಯಾಕ್ ಫಂಗಸ್ ದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ.
ಕರ್ನಾಟಕ ಇಎನ್ಟಿ ಆಸ್ಪತ್ರೆಯಲ್ಲಿ ಈ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು E.N.T ತಜ್ಞ ಪ್ರಹ್ಲಾದ್
(Now black fungus found on skin in coronavirus patient in chitradurga karnataka)
ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಸೋಂಕಿತ ಅಪಾಯದಿಂದ ಪಾರು