ಲಾಕ್​ಡೌನ್ ಸಂಕಷ್ಟ: ಬಡವರಿಗೆ ಮಂಗಳವಾರದ ಬಿರಿಯಾನಿ ಬಾಡೂಟ ಹಂಚಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್

ಲಾಕ್​ಡೌನ್ ಸಂಕಷ್ಟ: ಬಡವರಿಗೆ ಮಂಗಳವಾರದ ಬಿರಿಯಾನಿ  ಬಾಡೂಟ ಹಂಚಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್
ಲಾಕ್​ಡೌನ್ ಸಂಕಷ್ಟ: ಬಡವರು, ನಿರ್ಗತಿಕರಿಗೆ ಮಂಗಳವಾರದ ಬಿರಿಯಾನಿ ಬಾಡೂಟ ಹಂಚಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್

Biryani Baduta: ಕೊರೊನಾ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಪರದಾಡ್ತಿರೂ ಬಡ ಜನ ಮಂಗಳವಾರದ ಹಿನ್ನೆಲೆ ಬಿರಿಯಾನಿ ಬಾಡೂಟ ಮಾಡಿದ್ದಾರೆ. ಅಂದಹಾಗೆ ಸಚಿವ ಎಂಟಿಬಿ ನಾಗರಾಜ್ ಪ್ರತಿ ಮಂಗಳವಾರ ಇದೇ ರೀತಿ ಇಲ್ಲಿ ಬಿರಿಯಾನಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

sadhu srinath

|

Jun 01, 2021 | 12:54 PM

ಹೊಸಕೋಟೆ: ಪೌರಾಡಳಿತ ಸಚಿವ, ಸ್ಥಳೀಯ ಜನಪ್ರತಿನಿಧಿ ಎಂಟಿಬಿ ನಾಗರಾಜ್ ಅವರ ವ್ಯಕ್ತಿತ್ವವೇ ಹಾಗೆ, ಅದು ವರ್ಚಸ್ಸೂ ಸಹ. ಊರ ಜಾತ್ರೆಯೇ ಇರಲಿ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮವೇ ಇರಲಿ… ಜನರ ಮಧ್ಯೆ ವಿಜೃಂಭಿಸುತ್ತಾರೆ. ಅದೂ ತಮ್ಮದೇ ಶೈಲಿಯಲ್ಲಿ ತಮಟೆ ಬಾರಿಸುತ್ತಾ, ಸ್ನೇಕ್​ ಡ್ಯಾನ್ಸ್​ ಮಾಡುತ್ತಾ… ಎಂಟಿಬಿ ನಾಗರಾಜ್ ಜನಜಂಗುಳಿಯ ಮಧ್ಯೆ ಕಾಣಿಸಿಕೊಳ್ಳುತ್ತಾರೆ. ಸದ್ಯಕ್ಕೆ ಸಚಿವ ಎಂಟಿಬಿ ನಾಗರಾಜ್ ಅವರು ಕೊರೊನಾ ಮಹಾಮಾರಿಯಿಂದ ಜನ ಬವಣೆ ಪಡುತ್ತಿರುವಾಗ ಅವರ ನೆರವಿಗೆ ಧಾವಿಸಿದ್ದಾರೆ. ಜನರ ಹೊಟ್ಟೆ ತುಂಬಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಪೌರಾಡಳಿತ ಸಚಿವರಿಂದ ಬಿರಿಯಾನಿ ಟಿಫಿನ್: ಕೊರೊನಾ ಲಾಕ್​ಡೌನ್ ವೇಳೆ ಸಂಕಷ್ಟ ಹಿನ್ನೆಲೆ ನೂರಾರು ಬಡ ಜನರು, ನಿರ್ಗತಿಕರಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಸ್ವತಃ ಬಿರಿಯಾನಿ ಹಂಚಿದ್ದಾರೆ. ಬೆಳಗಿನ ತಿಂಡಿಗೆ ಬಿಸಿ‌ ಬಿಸಿ ಬಿರಿಯಾನಿ ನೀಡಿದ್ದಾರೆ ಸಚಿವ ಎಂಟಿಬಿ ನಾಗರಾಜ್​. ಹೊಸಕೋಟೆ ಮತ್ತು ಗರುಡಾಚಾರ್ ಪಾಳ್ಯದ ಸುತ್ತಮುತ್ತಲಿನವರು ಬಿರಿಯಾನಿ ತೆಗೆದುಕೊಂಡುಹೋಗಿದ್ದಾರೆ. ಒಟ್ಟಿನಲ್ಲಿ ಕೊರೊನಾ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಪರದಾಡ್ತಿರೂ ಬಡ ಜನ ಮಂಗಳವಾರದ ಹಿನ್ನೆಲೆ ಬಿರಿಯಾನಿ ಬಾಡೂಟ (Biryani Baduta) ಮಾಡಿದ್ದಾರೆ. ಅಂದಹಾಗೆ ಸಚಿವ ಎಂಟಿಬಿ ನಾಗರಾಜ್ ಪ್ರತಿ ಮಂಗಳವಾರ ಇದೇ ರೀತಿ ಇಲ್ಲಿ ಬಿರಿಯಾನಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

minister mtb nagaraj distribute Biryani Baduta during coronavirus lockdown in hoskote

ಮಂಗಳವಾರದ ಹಿನ್ನೆಲೆ ಬಿರಿಯಾನಿ ಬಾಡೂಟ ಹಂಚಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್

(minister mtb nagaraj distribute Biryani Baduta during coronavirus lockdown in hoskote) MTB ನಾಗರಾಜ್ ಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ರೋಲ್ಸ್ ರಾಯ್ಸ್, ಫೆರಾರಿಗೆ ಪೂಜೆ ಸಲ್ಲಿಸಿದ ಮಾಜಿ ಶಾಸಕ

Follow us on

Related Stories

Most Read Stories

Click on your DTH Provider to Add TV9 Kannada