ಪೆಟ್ರೋಲ್ ಬಂಕ್​ನಲ್ಲಿ ಹೊತ್ತಿ ಉರಿದ ಓಮ್ನಿ ಕಾರ್

| Updated By: ganapathi bhat

Updated on: Apr 11, 2021 | 4:08 PM

ಹುಬ್ಬಳ್ಳಿಯ ಪೆಟ್ರೋಲ್​ ಬಂಕ್​ನಲ್ಲಿ ಮಾರಿತಿ ಓಮಿನಿಗೆ ಬೆಂಕಿ ತಗುಲಿ ಹೊತ್ತುರಿದ ಘಟನೆ ನಿನ್ನೆ (ಏಪ್ರಿಲ್ 10) ಸಂಜೆ ವೇಳೆಯಲ್ಲಿ ಹಳೇ ಹುಬ್ಬಳ್ಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

ಪೆಟ್ರೋಲ್ ಬಂಕ್​ನಲ್ಲಿ ಹೊತ್ತಿ ಉರಿದ ಓಮ್ನಿ ಕಾರ್
ಹೊತ್ತಿ ಉರಿದ ಓಮಿನಿ ವ್ಯಾನ್
Follow us on

ಹುಬ್ಬಳ್ಳಿ: ಪೆಟ್ರೋಲ್​ ಬಂಕ್​ನಲ್ಲಿ ಮಾರುತಿ ಓಮಿನಿ ಕಾರ್​ಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ನಿನ್ನೆ (ಏಪ್ರಿಲ್ 10) ಸಂಜೆ ವೇಳೆಯಲ್ಲಿ ಹಳೇ ಹುಬ್ಬಳ್ಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ. ಈ ದುರ್ಘಟನೆಯ ದೃಶ್ಯ ಪೆಟ್ರೋಲ್​ ಬಂಕ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾರುತಿ ಓಮಿನಿ ಚಾಲಕ ಬಂಕ್​ನಲ್ಲಿ ಪೆಟ್ರೋಲ್​ ಹಾಕಿಸಿಕೊಂಡು ಒಮಿನಿ ಕಾರು ಹತ್ತಿ ವ್ಯಾನ್​ ಸ್ಟಾರ್ಟ್​ ಮಾಡಲು ಪ್ರಯತ್ನಿಸುತ್ತಿದ್ದ. ವ್ಯಾನ್​ ಸ್ಟಾರ್ಟ್​ ಆಗುತ್ತಿದ್ದಂತೆಯೇ ವ್ಯಾನ್​ಗೆ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಪ್ರಾಣ ಉಳಿಸಿಕೊಳ್ಳಲು ವ್ಯಾನ್​ನಲ್ಲಿದ್ದ ಜನ ಪರದಾಡಿದ್ದಾರೆ. ಕ್ಷಣ ಮಾತ್ರದಲ್ಲಿ ವ್ಯಾನ್​ ಚಾಲಕ ತಮ್ಮ ಪ್ರಾಣ ಉಳಿಸಿಕೊಂಡಿದ್ದಾನೆ.

ವ್ಯಾನ್​ಗೆ ಬೆಂಕಿ ಕಾಣಿಸಿಕೊಂಡಿದ್ದು ಅರ್ಧಗಂಟೆಗೂ ಅಧಿಕ ಕಾಲದವರೆಗೆ ವ್ಯಾನ್​ ಹೊತ್ತಿ ಉರಿದಿದೆ. ಅದೃಷ್ಟವಶಾತ್​ ಕಾರಿನಲ್ಲಿದ್ದ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡು ಪ್ರಯಾಣಿಕರು ಮತ್ತು ಚಾಲಕ ಜೀವ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಪೆಟ್ರೋಲ್​ ಬಂಕ್​ನಲ್ಲಿ ಕಾರು

ಇದನ್ನೂ ಓದಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ

ನಾಗ್ಪುರ ಕೊವಿಡ್​ ಆಸ್ಪತ್ರೆಯಲ್ಲಿ ಬೆಂಕಿ, 4 ಸಾವು, 8 ಜನರಿಗೆ ಗಾಯ