Karnataka Weather: ಕರ್ನಾಟಕದಲ್ಲಿ 5 ದಿನ ಮಳೆ ಸಾಧ್ಯತೆ; ಮುಂದಿನ ವಾರದಲ್ಲಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ
Karnataka Rain: ಸೋಮವಾರ, ಬುಧವಾರ ಕೇರಳ ಮತ್ತು ಮಾಹೆಯಲ್ಲಿ, ಮಂಗಳವಾರ ಮತ್ತು ಬುಧವಾರ ಕರ್ನಾಟಕದ ಕರಾವಳಿ ಮತ್ತು ಉತ್ತರ ಭಾಗದಲ್ಲಿ ಭಾರೀ ಮಳೆಯಾಗಲಿದೆ. ಸೋಮವಾರದಿಂದ ಬುಧವಾರದವರೆಗೆ ಕರ್ನಾಟಕ, ತೆಲಂಗಾಣದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು: ದಕ್ಷಿಣ ಭಾರತದಲ್ಲಿ ಮುಂದಿನ ವಾರ ಭಾರೀ ಮಳೆಯಾಗಲಿದ್ದು, ಕರ್ನಾಟಕದಲ್ಲಿ 5 ದಿನ ಮಳೆ ಸಾಧ್ಯತೆ ಇದೆ. ಏಪ್ರಿಲ್10 -14ರ ವರೆಗೆ ದಕ್ಷಿಣ ಭಾರತದಲ್ಲಿ ಮಳೆಯಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ( IMD) ಹೇಳಿದೆ. ಇಲಾಖೆಯ ಮಾಹಿತಿ ಪ್ರಕಾರ ನೈಋತ್ಯ ಮಧ್ಯಪ್ರದೇಶ ಮತ್ತು ಸಮೀಪದ ರಾಜ್ಯಗಳಿಂದ ಚಂಡಮಾರುತವು ತಮಿಳುನಾಡಿನ ಕನ್ಯಾಕುಮಾರಿ ಮೇಲೆ ಹಾದು ದಕ್ಷಿಣ ಭಾರತದ ದ್ವೀಪದಲ್ಲಿ ಸೇರುವ ಪರಿಣಾಮ ದಕ್ಷಿಣ ಭಾರತದಲ್ಲಿ ಮಳೆಯಾಗಲಿದೆ. ಅದೇ ವೇಳೆ ಮುಂದಿನ 5 ದಿನಗಳಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಗಟೆಗೆ 30-40 ಕಿಮೀ ವೇಗದಲ್ಲಿ ಗಾಳಿ, ಮಿಂಚು, ಗುಡುಗಿನೊಂದಿಗೆ ವರುಣನ ಅಬ್ಬರ ಕಾಣಿಸಲಿದೆ. ಸೋಮವಾರ, ಬುಧವಾರ ಕೇರಳ ಮತ್ತು ಮಾಹೆಯಲ್ಲಿ, ಮಂಗಳವಾರ ಮತ್ತು ಬುಧವಾರ ಕರ್ನಾಟಕದ ಕರಾವಳಿ ಮತ್ತು ಉತ್ತರ ಭಾಗದಲ್ಲಿ ಭಾರೀ ಮಳೆಯಾಗಲಿದೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸೋಮವಾರ ಮತ್ತು ಬುಧವಾರ, ವಯನಾಡಿನಲ್ಲಿ ಬುಧವಾರ ಮಾತ್ರ ಮಳೆಯಾಗಲಿದೆ ಎಂದು ತಿರುವನಂತಪುರಂನ ಹವಾಮಾನ ಇಲಾಖೆ ಹೇಳಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಕರ್ನಾಟಕದಲ್ಲಿ ಸೋಮವಾರ ಮತ್ತು ಮಂಗಳವಾರ ಮಳೆ ಸಿಂಚನವಾಗಲಿದ್ದು, ಬುಧವಾರವೂ ಮುಂದುವರಿಯುವ ಸಾಧ್ಯತೆ ಇದೆ. ಕೇರಳ ಮತ್ತು ತಮಿಳುನಾಡಿನಲ್ಲಿ ವಾರಾಂತ್ಯದಲ್ಲಿ ಮಳೆಯಾಗಲಿದ್ದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಕೇರಳ ಮತ್ತು ತಮಿಳುನಾಡು ಜತೆ ಸೋಮವಾರದಿಂದ ಬುಧವಾರದವರೆಗೆ ಕರ್ನಾಟಕ, ತೆಲಂಗಾಣದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Scattered to fairly widespread rain with thunderstorm, lightning & gusty winds (30-40 kmph) likely over SW Peninsular India during next 5 days. Isolated heavy rain also likely over south & ghat areas of Tamil Nadu, Kerala & Mahe & Coastal & South Interior Karnataka on 14 & 15. pic.twitter.com/CeG1Xxud2L
— India Meteorological Department (@Indiametdept) April 11, 2021
ಸೌರಾಷ್ಟ್ರ ಮತ್ತು ಕಚ್ ನಲ್ಲಿ ಏಪ್ರಿಲ್ 11 ಮತ್ತು 12ರಂದು ಬಿಸಿ ಗಾಳಿ ಬೀಸಲಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಕ್, ಗಿಲ್ಗಿಟ್-ಬಲ್ಟಿಸ್ತಾನ್ ಮತ್ತು ಮುಜಾಫರ್ಬಾದ್ ನಲ್ಲಿ ವಿವಿಧ ಭಾಗಗಳಲ್ಲಿ ಏಪ್ರಿಲ್ 15ಂದು ಭಾರೀ ಮಳೆಯಾಗಲಿದೆ. ಪಶ್ಚಿಮ ರಾಜಸ್ಥಾನದಲ್ಲಿ ಏಪ್ರಿಲ್ 14 ಮತ್ತು 15ರಂದು ಗುಡುಗು ಸಹಿತ ಮಳೆಯಾಗಲಿದೆ.
ಮಾರ್ಚ್ 1ರಿಂದ ಏಪ್ರಿಲ್ 9ರ ಅವಧಿಯಲ್ಲಿ ತಮಿಳುನಾಡಿನಲ್ಲಿ 9.1 ಮಿಮಿ, ಕರ್ನಾಟಕದಲ್ಲಿ 4.2 ಮಿಮಿ, ಆಂಧ್ರ ಪ್ರದೇಶದಲ್ಲಿ 2.1ಮಿಮಿ ಮತ್ತು ತೆಲಂಗಾಣದಲ್ಲಿ 0.9 ಮಿಮಿ ಮಳೆಯಾಗಿದೆ. ಇದೇ ಅವಧಿಯಲ್ಲಿ ಕೇರಳದಲ್ಲಿ 70.5ಮಿಮಿ ಮಳೆಯಾಗಿದ್ದು, ಸರಾಸರಿಗಿಂತಲೂ ಹೆಚ್ಚು ಮಳೆ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖಯ ಮಾಹಿತಿ ಪ್ರಕಾರ ಸೋಮವಾರ ಅರುಣಾಚಲ ಪ್ರದೇಶ , ಜಮ್ಮು ಮತ್ತು ಕಾಶ್ಮೀರ, ಲಡಾಕ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ಕೇರಳದ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ಜಾರ್ಖಂಡ್ ಒಡಿಶಾ, ಛತ್ತೀಸಗಡ, ಪೂರ್ವ ಮಧ್ಯಪ್ರದೇಶ, ಪೂರ್ವ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಪ್ರದೇಶಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗಲಿದೆ. ಪಶ್ಚಿಮ ಸೌರಾಷ್ಟ್ರ, ಕಚ್, ಕೊಂಕಣ್ ಮತ್ತು ಗೋವಾದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಕಾಲಿಕ ಮಳೆಗೆ ನಲುಗಿದ ಯಾದಗಿರಿ; ವರುಣನ ಅಬ್ಬರಕ್ಕೆ ಶೇಂಗಾ ಬೆಳೆ ನೀರು ಪಾಲು
ಕಪ್ಪು ಬಣ್ಣಕ್ಕೆ ತಿರುಗಿದ ಮೆಕ್ಕೆ ಜೋಳ; ಅಕಾಲಿಕ ಮಳೆಯಿಂದ ಹಾವೇರಿ ರೈತರು ಕಂಗಾಲು
(Karnataka Weather predicted weather reports on coastal and other parts of Karnataka State)
Published On - 3:34 pm, Sun, 11 April 21