AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಪ್ಪು ಬಣ್ಣಕ್ಕೆ ತಿರುಗಿದ ಮೆಕ್ಕೆ ಜೋಳ; ಅಕಾಲಿಕ ಮಳೆಯಿಂದ ಹಾವೇರಿ ರೈತರು ಕಂಗಾಲು

ಜೋಳದ ತೆನೆಗಳು ಕಪ್ಪು ಬಣ್ಣಕ್ಕೆ ತಿರುಗಿದರೆ, ಜೋಳದ ದಂಟು ಅಕಾಲಿಕ‌ ಮಳೆಯಿಂದ ಕೊಂಚ ಪ್ರಮಾಣದಲ್ಲಿ ಹಾಳಾಗಿದೆ. ಹೀಗಾಗಿ ಹಿಂಗಾರಿ ಬೆಳೆಯಾಗಿ ಬೆಳೆದ ಮೆಕ್ಕೆ ಜೋಳ ರೈತರಿಗೆ ಆಹಾರವಾಗುವ ಬದಲು ಕಪ್ಪು ಬಣ್ಣಕ್ಕೆ ತಿರುಗಿ ತಿನ್ನಲು ಬಾರದಂತಾಗಿವೆ.

ಕಪ್ಪು ಬಣ್ಣಕ್ಕೆ ತಿರುಗಿದ ಮೆಕ್ಕೆ ಜೋಳ; ಅಕಾಲಿಕ ಮಳೆಯಿಂದ ಹಾವೇರಿ ರೈತರು ಕಂಗಾಲು
ಕಪ್ಪು ಬಣ್ಣಕ್ಕೆ ತಿರುಗಿರುವ ಮೆಕ್ಕೆ ಜೋಳ
preethi shettigar
|

Updated on: Mar 28, 2021 | 11:39 AM

Share

ಹಾವೇರಿ: ಜಿಲ್ಲೆಯ ರೈತರ ಹಿಂಗಾರಿ ಬೆಳೆ ಅಂದ್ರೇನೆ ಜೋಳದ ಬೆಳೆ. ವರ್ಷಪೂರ್ತಿ ರೊಟ್ಟಿ ತಿಂದು ಗಟ್ಟಿಮುಟ್ಟಾಗಿ ಇರುವುದಕ್ಕೆ ಅಂತಾನೆ ಬಹುತೇಕ ರೈತರು ಜೋಳ ಬೆಳೆಯುತ್ತಾರೆ. ಈ ವರ್ಷವೂ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಜೋಳ ಬೆಳೆದಿದ್ದರು. ಮೆಕ್ಕೆ ಜೋಳದ ಬೆಳೆ ಕೂಡ ಭರ್ಜರಿಯಾಗಿ ಬಂದಿತ್ತು. ಆದರೆ ಅದೊಂದು ಮಳೆ ರೈತರು ಬೆಳೆದ ಜೋಳವನ್ನ ತಿನ್ನಲು ಬಾರದಂತೆ ಮಾಡಿದೆ.

ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾಗಿ ಶೇಂಗಾ, ಹತ್ತಿ, ಮೆಕ್ಕೆ ಜೋಳ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯಲಾಗುತ್ತದೆ. ಇನ್ನು ಹಿಂಗಾರು ಬೆಳೆಯಾಗಿ ಬಹುತೇಕ ರೈತರು ಮೆಕ್ಕೆ ಜೋಳವನ್ನ ಬೆಳೆಯುತ್ತಾರೆ. ಏಕೆಂದರೆ ರೈತರಿಗೆ ಜೋಳ ವರ್ಷವಿಡಿ ರೊಟ್ಟಿ ಊಟ ನೀಡಿದರೆ, ಜೋಳದ ದಂಟು ವರ್ಷಪೂರ್ತಿ ರೈತರ ಮನೆಗಳಲ್ಲಿನ ಜಾನುವಾರುಗಳಿಗೆ ಆಹಾರ ಆಗುತ್ತದೆ.

ಜಿಲ್ಲೆಯ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರಿ ಬೆಳೆಯನ್ನಾಗಿ ಜೋಳದ ಬೆಳೆ ಬೆಳೆದಿದ್ದರು. ರೈತರ ನಿರೀಕ್ಷೆಯಂತೆ ಜೋಳ ಬಿತ್ತನೆ ಮಾಡಿದ ನಂತರ ಭರ್ಜರಿಯಾಗಿ ಬೆಳೆ ಫಸಲು ಬಂದಿದೆ. ಆದರೆ ಕಳೆದ ತಿಂಗಳು ಅಕಾಲಿಕವಾಗಿ ಬಿದ್ದ ಮಳೆ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆ ಜೋಳವನ್ನ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಿದೆ. ಬಿಳಿ ಬಣ್ಣದ ಬದಲಾಗಿ ಕಪ್ಪು ಬಣ್ಣಕ್ಕೆ ತಿರುಗಿರುವ ಜೋಳ‌ ತಿನ್ನಲೂ ಬಾರದಂತಹ ಪರಿಸ್ಥಿತಿಗೆ ಬಂದಿದೆ. ಇದು ವರ್ಷವಿಡಿ ಜೋಳದ ರೊಟ್ಟಿ ತಿನ್ನುತ್ತಿದ್ದ ರೈತರಿಗೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

maize

ಅಕಾಲಿಕ ಮಳೆಯಿಂದಾಗಿ ಮೆಕ್ಕೆ ಜೋಳ ಬೆಳೆ ನಾಶ

ಹಾವೇರಿ ಜಿಲ್ಲೆಯಲ್ಲಿ ರೈತರು ಹಿಂಗಾರಿ ಬೆಳೆಯಾಗಿ ಬೆಳೆಯುತ್ತಿದ್ದ ಮೆಕ್ಕೆ ಜೋಳ ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ ಅವರವರ ಸಂಬಂಧಿಕರ ಕುಟುಂಬಗಳಿಗೂ ಊಟಕ್ಕೆ ನೆರವಾಗುತ್ತಿತ್ತು. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆದ ರೈತರು ಮಾರುಕಟ್ಟೆಯಲ್ಲಿ ಮಾರಾಟ ಸಹ ಮಾಡುತ್ತಿದ್ದರು. ಆದರೆ ಜೋಳ ಮಾತ್ರ ಬಿಳಿ ಬಣ್ಣದ ಬದಲು ಕಪ್ಪು ಬಣ್ಣಕ್ಕೆ ತಿರುಗಿದ್ದು, ರೈತರ ಮೊಗದಲ್ಲಿ ಅಸಮಾಧಾನ ಮೂಡಿಸಿದೆ.

ಇನ್ನೂ ಜೋಳದ ತೆನೆಗಳು ಕಪ್ಪು ಬಣ್ಣಕ್ಕೆ ತಿರುಗಿದರೆ, ಜೋಳದ ದಂಟು ಅಕಾಲಿಕ‌ ಮಳೆಯಿಂದ ಕೊಂಚ ಪ್ರಮಾಣದಲ್ಲಿ ಹಾಳಾಗಿದೆ. ಹೀಗಾಗಿ ಹಿಂಗಾರಿ ಬೆಳೆಯಾಗಿ ಬೆಳೆದ ಮೆಕ್ಕೆ ಜೋಳ ರೈತರಿಗೆ ಆಹಾರವಾಗುವ ಬದಲು ಕಪ್ಪು ಬಣ್ಣಕ್ಕೆ ತಿರುಗಿ ತಿನ್ನಲು ಬಾರದಂತಾಗಿವೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಜೋಳದ ಬೆಲೆ ಕ್ವಿಂಟಲ್‌ಗೆ 2000 ದಿಂದ 3000 ರೂಪಾಯಿವರೆಗೆ ಬೆಲೆ ಇದೆ. ಹೀಗಾಗಿ ಜೋಳ‌ ಬೆಳೆದು ಅಕಾಲಿಕ‌ ಮಳೆಯಿಂದ ಹಾನಿಗೆ ಒಳಗಾದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಜೋಳ ಬೆಳೆದ ರೈತರು ಒತ್ತಾಯಿಸಿದ್ದಾರೆ.

maize

ಕಪ್ಪು ಬಣ್ಣಕ್ಕೆ ತಿರುಗಿರುವ ಜೋಳ‌ ತಿನ್ನಲೂ ಬಾರದಂತಹ ಸ್ಥಿತಿಗೆ ತಲುಪಿದೆ

ಉತ್ತರ ಕರ್ನಾಟಕ ಭಾಗದ ರೈತರ ಪ್ರಮುಖ ಆಹಾರವೆ ಜೋಳದ ರೊಟ್ಟಿಯ ಊಟ. ಆದರೆ ಬೆಳೆದಿದ್ದ ಜೋಳ ಅಕಾಲಿಕ ಮಳೆಯಿಂದ‌ ಕಪ್ಪು ಬಣ್ಣಕ್ಕೆ ತಿರುಗಿದ್ದು, ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಕೂಡಲೆ ಸರ್ಕಾರ ಜೋಳ ಬೆಳೆದು ಹಾನಿಗೆ ಒಳಗಾದ ನಮಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಜೋಳ ಬೆಳೆದ ರೈತ ಫಕ್ಕೀರಗೌಡ ಗಾಜೀಗೌಡ್ರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: 

ಮೆಕ್ಕೆ ಜೋಳದ ರಾಶಿಗೆ ಬೆಂಕಿ ಹಾಕಿದ ದುಷ್ಕರ್ಮಿಗಳು; 5 ಎಕರೆಯಲ್ಲಿ ಬೆಳೆದಿದ್ದ ಜೋಳದ ತೆನೆಗಳು ಭಸ್ಮ

ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್

ಜನತೆಗೆ ಗುಡ್​ ನ್ಯೂಸ್ ಕೊಟ್ಟ ಕೇಂದ್ರ: ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?
ಜನತೆಗೆ ಗುಡ್​ ನ್ಯೂಸ್ ಕೊಟ್ಟ ಕೇಂದ್ರ: ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ