ಧಾರವಾಡದ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಟಚ್; ಸ್ಟೇಷನ್ ಗೋಡೆಗಳ ಮೇಲೆ ಅರಳಿವೆ ಬಣ್ಣ ಬಣ್ಣದ ಚಿತ್ತಾರ
ದಕ್ಷಿಣ ಭಾರತದ ವಿವಿಧ ನಾಟ್ಯಗಳು ಮತ್ತು ನಾಟ್ಯದ ವಿವಿಧ ಭಂಗಿಗಳ ಚಿತ್ರಗಳನ್ನು ಪ್ರಸಿದ್ಧ ಕಲಾವಿದರಿಂದ ಈ ರೈಲ್ವೆ ನಿಲ್ದಾಣದಲ್ಲಿ ಚಿತ್ರಿಸಲಾಗಿದೆ. ಅದರಲ್ಲೂ ಕರಾವಳಿ ಪ್ರದೇಶದ ಕಥಕ್ಕಳಿ ನೃತ್ಯದ ಚಿತ್ರಗಳು ಜನರ ಆಕರ್ಷಣೆಯ ಕೇಂದ್ರವಾಗಿವೆ.

ಧಾರವಾಡ: ಒಂದು ಕಾಲದಲ್ಲಿ ರೈಲು ನಿಲ್ದಾಣಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಅಲ್ಲಿನ ಅಸುಚಿತ್ವ ಹಾಗೂ ಅವ್ಯವಸ್ಥೆಯಿಂದಾಗಿ ಜನರು ಆ ಕಡೆ ಅನಿವಾರ್ಯತೆ ಇದ್ದರೆ ಮಾತ್ರ ಹೋಗುತ್ತಿದ್ದರು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಅದರಲ್ಲೂ ಜಿಲ್ಲೆಯ ರೈಲ್ವೆ ನಿಲ್ದಾಣಕ್ಕಂತೂ ಹೈಟೆಕ್ ಟಚ್ ಸಿಕ್ಕಿದ್ದು, ರೈಲ್ವೆ ನಿಲ್ದಾಣದಲ್ಲಿನ ಅಂದವಾದ ಚಿತ್ರಗಳು ಜನರನ್ನು ಆಕರ್ಷಿಸುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಹಳೆ ಕಟ್ಟಡದಿಂದ ಮುಕ್ತವಾಗಿರುವ ಧಾರವಾಡದ ರೈಲ್ವೆ ನಿಲ್ದಾಣಕ್ಕೆ ಇದೀಗ ಹೈಟೆಕ್ ಆಗಿ ಮಾರ್ಪಾಡುಗೊಂಡಿದೆ. ಅದಗಲೇ ನಿಲ್ದಾಣದ ಹೊರ ಭಾಗದಲ್ಲಿ ನಿರ್ಮಿಸಲಾಗಿರುವ ವಾಲ್ ಗಾರ್ಡನ್ ಜನರ ಅಕರ್ಷಣೆಗೆ ಕಾರಣವಾಗಿದೆ. ಇದರ ಜೊತೆಗೆ ಇದೀಗ ಜನರನ್ನು ಆಕರ್ಷಿಸಲು ಬಗೆ ಬಗೆಯ ಬಣ್ಣದ ಚಿತ್ರಗಳು ಚಿತ್ರಿಸಲ್ಪಟ್ಟಿವೆ. ದಕ್ಷಿಣ ಭಾರತದ ವಿವಿಧ ನೃತ್ಯ ಪ್ರಕಾರಗಳ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದ್ದು, ಇವೆಲ್ಲವೂ ರೈಲ್ವೆ ನಿಲ್ದಾಣದ ಅಂದವನ್ನು ದ್ವಿಗುಣಗೊಳಿಸಿವೆ.
ದಕ್ಷಿಣ ಭಾರತದ ವಿವಿಧ ನಾಟ್ಯಗಳು ಮತ್ತು ನಾಟ್ಯದ ವಿವಿಧ ಭಂಗಿಗಳ ಚಿತ್ರಗಳನ್ನು ಪ್ರಸಿದ್ಧ ಕಲಾವಿದರಿಂದ ಈ ರೈಲ್ವೆ ನಿಲ್ದಾಣದಲ್ಲಿ ಚಿತ್ರಿಸಲಾಗಿದೆ. ಅದರಲ್ಲೂ ಕರಾವಳಿ ಪ್ರದೇಶದ ಕಥಕ್ಕಳಿ ನೃತ್ಯದ ಚಿತ್ರಗಳು ಜನರ ಆಕರ್ಷಣೆಯ ಕೇಂದ್ರವಾಗಿವೆ. ಇದುವರೆಗೂ ನಿಲ್ದಾಣದ ಹೊರ ಭಾಗದ ವಾಲ್ ಗಾರ್ಡನ್ ಜನರನ್ನು ಆಕರ್ಷಿಸುತ್ತಿತ್ತು. ಆದರೆ ಇದೀಗ ಇದರ ಜೊತೆಗೆ ಈ ಚಿತ್ರಗಳು ಕೂಡ ಜನರನ್ನ ತನ್ನತ್ತ ಸೆಳೆಯುತ್ತಿದೆ.

ರೈಲ್ವೆ ನಿಲ್ದಾಣದ ಗೊಡೆಗಳ ಮೇಲೆ ಅರಳಿದ ಚಿತ್ರಕಲೆ
ತೀರಾ ಹಳೆಯ ಕಟ್ಟಡವನ್ನು ಹೊಂದಿದ್ದ ಈ ನಿಲ್ದಾಣವನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಇಡೀ ಸ್ಟೇಷನ್ಗೆ ಹೈಟೆಕ್ ಟಚ್ ನೀಡಲಾಗುತ್ತಿದೆ. ಅದರೊಂದಿಗೆ ಹೀಗೆ ಸ್ಥಳೀಯ ಹಾಗೂ ಪಾರಂಪರಿಕ ಕಲೆಗಳನ್ನು ಗೋಡೆಗಳ ಮೇಲೆ ಚಿತ್ರಿಸುವ ಮೂಲಕ ಜನರ ಕಣ್ಣಿಗೆ ಹಿತವಾದ ಅನುಭೂತಿಯನ್ನು ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ.

ದಕ್ಷಿಣ ಭಾರತದ ವಿವಿಧ ನೃತ್ಯ ಪ್ರಕಾರಗಳ ಚಿತ್ರ

ಜನರನ್ನು ರೈಲ್ವೆ ನಿಲ್ದಾಣದತ್ತ ಆಕರ್ಷಿಸುತ್ತಿದೆ ಬಣ್ಣ ಬಣ್ಣದ ಚಿತ್ತಾರ
ಇದನ್ನೂ ಓದಿ:
ಪರಿಸರ ಸ್ನೇಹಿ ಗದಗ ರೈಲು ನಿಲ್ದಾಣ: ಹೈಟೆಕ್ ಟಚ್ನಿಂದ ಈಗ ಆಕರ್ಷಣೆಯ ಕೇಂದ್ರ ಬಿಂದು
Women’s Day 2021: ಟೈಂ ಟೇಬಲ್ ಸುನೀತಾ; ಯಾವ ರೈಲು ಎಷ್ಟೊತ್ತಿಗೆ ಎಲ್ಲಿಗೆ ಬರಬೇಕು ನಿರ್ಧರಿಸೋದು ಇವರು..