70ರ ಹರೆಯದ ಮಹಿಳೆಗೆ ಒಲಿದು ಬಂತು ಚಿನ್ನದ ಪದಕ; ಸಂಸ್ಕೃತ ವಿಷಯದಲ್ಲಿ ವಿಶೇಷ ಸಾಧನೆ

preethi shettigar

preethi shettigar | Edited By: ganapathi bhat

Updated on: Apr 11, 2021 | 4:15 PM

ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಶುಕ್ಲಯಜುರ್ವೇದ ಕ್ರಮಾಂಕ (ಬಿ.ಎ) ವಿಷಯದಲ್ಲಿ ಪರಮಪೂಜ್ಯ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿ ಮಹಾಸ್ವಾಮಿ ಸ್ವರ್ಣ ಪದಕವನ್ನು ಅನುಸೂಯ ಪಡೆದುಕೊಂಡಿದ್ದಾರೆ.

70ರ ಹರೆಯದ ಮಹಿಳೆಗೆ ಒಲಿದು ಬಂತು ಚಿನ್ನದ ಪದಕ; ಸಂಸ್ಕೃತ ವಿಷಯದಲ್ಲಿ ವಿಶೇಷ ಸಾಧನೆ
ಚಿನ್ನದ ಪದಕ ಪಡೆದ ಅನುಸೂಯ


ಬೆಂಗಳೂರು: ಸಾಧನೆ ಮಾಡುವುದಕ್ಕೆ ವಯಸ್ಸಿನ ಮಿತಿ ಇಲ್ಲ. ಸಾಧಿಸುವ ಛಲ ಮಾತ್ರ ಮುಖ್ಯ ಎನ್ನುವುದನ್ನು 70ರ ಹರೆಯದ ವೃದ್ಧೆ ನಿರೂಪಿಸಿದ್ದಾರೆ. ಒಂದು ಪದವಿ ಪಡೆದು ಉದ್ಯೋಗ ಮಾಡಲು ಶುರು ಮಾಡಿದರೆ ಅಷ್ಟೇ ಸಾಕು ಎನ್ನುವ ಜನರ ನಡುವೆ ಮೈಸೂರಿನ ಅನುಸೂಯ ಎಂಬುವವರು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಬಳಿಕ ಸಂಸ್ಕೃತ ಅಧ್ಯಯನಕ್ಕೆ ಮುಂದಾಗಿ, ಸ್ವರ್ಣ ಪದಕವನ್ನು ಮುಡಿಗೆರಿಸಿಕೊಂಡಿದ್ದಾರೆ.

ಮೂರು ದಶಕಗಳಿಗೂ ಅಧಿಕ ಕಾಲ ಭಾರತೀಯ ಸೇನೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಬಳಿಕ ವೈದ್ಯಕೀಯ ವೃತ್ತಿ ಮಾಡಿದ ಅನುಸೂಯ, ನಂತರ ಸಂಸ್ಕೃತವನ್ನು ಕಲಿಕೆಯ ವಿಷಯವಾಗಿ ತೆಗೆದುಕೊಂಡು ಆ ಕ್ಷೇತ್ರದಲ್ಲಿಯೇ ಸಾಧನೆ ಮಾಡಿದ್ದಾರೆ. ಶುಕ್ರವಾರ ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಶುಕ್ಲಯಜುರ್ವೇದ ಕ್ರಮಾಂಕ (ಬಿ.ಎ) ವಿಷಯದಲ್ಲಿ, ಪರಮಪೂಜ್ಯ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿ ಮಹಾಸ್ವಾಮಿ ಅವರಿಂದ ಅನುಸೂಯ ಅವರು ಸ್ವರ್ಣ ಪದಕವನ್ನು ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿ

ಭಾರತೀಯ ಸೇನೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅನುಸೂಯ ಅವರು ಮೈಸೂರಿನಲ್ಲಿ ವೈದ್ಯರಾಗಿಯೂ ಸೇವೆಸಲ್ಲಿಸಿದ್ದಾರೆ. ಆದರೆ ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಅನುಸೂಯ, ವೈದ್ಯ ಸೇವೆಯ ಜೊತೆಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಯನವನ್ನು ಪ್ರಾರಂಭ ಮಾಡಿದ್ದರು. ಇದೀಗ, ಬಿಎ ಪದವಿಯನ್ನು ಸ್ವರ್ಣಪದಕದೊಂದಿಗೆ ಪೂರ್ತಿ ಗೊಳಿಸಿದ್ದಾರೆ. ಇದರ ಜೊತೆಗೆ ಎಂಎ, ಪಿಎಚ್​​ಡಿ, ಆಫ್ತಾಮಾಲಜಿಯಲ್ಲಿ ಎಂಎಸ್, ಪ್ರಸೂತಿ ವಿಭಾಗದಲ್ಲಿ ಎಂಡಿ ಹಾಗೂ ಆಕ್ಯೂಪಂಚರ್ ವಿಭಾಗದಲ್ಲಿ ಎಂಡಿ ಪದವಿಯನ್ನು ಪಡೆದು, ಸ್ತ್ರೀ ರೋಗ ಮತ್ತು ನೇತ್ರತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶುಕ್ರವಾರ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಒಟ್ಟು 30 ಮಂದಿಗೆ ಪಿಎಚ್​ಡಿ ಪದವಿ ಹಾಗೂ 43 ಮಂದಿಗೆ ಎಂಫಿಲ್ ಪದವಿ ನೀಡಲಾಯಿತು. 2018-19ರ ಸಾಲಿನ 13 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ 17 ಮಂದಿಗೆ 20 ಚಿನ್ನದ ಪದಕವನ್ನು ವಿತರಣೆ ಮಾಡಲಾಯಿತು.

ಇದನ್ನೂ ಓದಿ:

 ದಾವಣಗೆರೆ ವಿಶ್ವವಿದ್ಯಾಲಯ ಘಟಿಕೋತ್ಸವ: ಮೆದುಳಿನಲ್ಲಿ ರಕ್ತಸ್ರಾವ ಆದರೂ ಛಲ ಬಿಡದೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಯುವತಿ

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ; 14 ಚಿನ್ನದ ಪದಕಗಳಿಸಿ ಸಂಭ್ರಮಿಸಿದ ವಿದ್ಯಾರ್ಥಿ

 

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada