Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ; 14 ಚಿನ್ನದ ಪದಕಗಳಿಸಿ ಸಂಭ್ರಮಿಸಿದ ವಿದ್ಯಾರ್ಥಿ

ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬಿಎಸ್​ಸಿ ಪದವಿಯಲ್ಲಿ ಕಳೆದ ವರ್ಷ ಪ್ರಶಾಂತ್. ವಿ ಪ್ರತಿಶತ 92.2 ಅಂಕ ಗಳಿಸಿದ್ದಾನೆ. ಇದರಿಂದ ಒಟ್ಟು 14 ಚಿನ್ನದ ಪದಕಗಳು ಈತನನ್ನು ಅರಸಿ ಬಂದಿವೆ.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ; 14 ಚಿನ್ನದ ಪದಕಗಳಿಸಿ ಸಂಭ್ರಮಿಸಿದ ವಿದ್ಯಾರ್ಥಿ
14 ಚಿನ್ನದ ಪದಕ ಮುಡಿಗೇರಿಸಿಕೊಂಡ ಪ್ರಶಾಂತ್.ವಿ
Follow us
preethi shettigar
| Updated By: ಆಯೇಷಾ ಬಾನು

Updated on: Apr 08, 2021 | 6:31 AM

ಬಾಗಲಕೋಟೆ: ಸಾಧನೆ ಮಾಡುವುದಕ್ಕೆ ಬಡತನ ಅಡ್ಡಿಯಾಗುವುದಿಲ್ಲ. ಅದಕ್ಕೆ ಸಾಧಿಸುವ ಛಲ ಬೇಕು. ಸಾಧಿಸುವ ಛಲ ಹಾಗೂ ಮನೆಯವರ ಸಹಕಾರ ಇದ್ದರೆ ಯಾವುದೇ ಕಾರ್ಯವನ್ನು ಸಾಧಿಸಿ ತೋರಿಸಬಹುದು. ಆದರೆ ಕೆಲವರು ಬಡತನ ಎಂದು ನಿರಾಶರಾಗಿ ತಮ್ಮ ಗುರಿಯನ್ನೇ ಕೈ ಬಿಡುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬಡತನವನ್ನೇ ಮೆಟ್ಟಿಲು ಮಾಡಿಕೊಂಡು ಸಾಧನೆ ಶಿಖರ ಏರಿದ್ದಾನೆ. ಓರ್ವ ಬಡ ರೈತನ‌ ಮಗನಾಗಿದ್ದರೂ ಭರ್ಜರಿ ಚಿನ್ನದ ಭೇಟೆಯಾಡಿ ಚಿನ್ನದ ಹುಡುಗ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ಏಪ್ರಿಲ್ 6ರಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ 10ನೇ ಘಟಿಕೋತ್ಸವ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಸ್ನಾತಕೋತ್ತರ, ಪಿಹೆಚ್​ಡಿ ಸೇರಿದಂತೆ ಒಟ್ಟು 561 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು. ಈ ವಿಭಾಗದ ಒಟ್ಟು 28 ಜನ ವಿದ್ಯಾರ್ಥಿಗಳು ಸೇರಿ 64 ಚಿನ್ನದ ಪದಕ ಪಡೆದರು. ಇದರಲ್ಲಿ ಒಂದು ವಿದ್ಯಾರ್ಥಿ ಸಾಧನೆ ಮಾತ್ರ ಅಪಾರ.

ಸಾಧಿಸುವುದಕ್ಕೆ ಯಾವುದೇ ಬಡತನ ಅಡ್ಡಿಯಾಗುವುದಿಲ್ಲ ಅದಕ್ಕೆ ಛಲ ಬೇಕು ಗುರಿಯಿರಬೇಕು ಎಂಬುದನ್ನು ಓರ್ವ ಬಡ ರೈತನ ಮಗ ಸಾಧಿಸಿ ತೋರಿಸಿದ್ದಾನೆ. ಪ್ರಶಾಂತ.ವಿ ಎಂಬ ವಿದ್ಯಾರ್ಥಿ ಬಿಎಸ್​ಸಿ ತೋಟಗಾರಿಕೆ ವಿಜ್ಞಾನದಲ್ಲಿ ಬರೊಬ್ಬರಿ 14 ಚಿನ್ನದ ಪದಕ ಪಡೆದು ಚಿನ್ನದ ಹುಡುಗ ಎನ್ನಿಸಿಕೊಂಡಿದ್ದಾನೆ. ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬಿಎಸ್​ಸಿ ಪದವಿಯನ್ನು ಕಳೆದ ವರ್ಷ ಈತ ಪ್ರತಿಶತ ಅಂಕ 92.2 ಅಂಕ ಗಳಿಸಿದ್ದಾನೆ. ಇದರಿಂದ ಒಟ್ಟು 14 ಚಿನ್ನದ ಪದಕಗಳು ಅರಸಿ ಬಂದಿವೆ.

gold medal

ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ

ತೋಟಗಾರಿಕೆ ಸಚಿವ ಆರ್. ಶಂಕರ್, ಪ್ರಶಾಂತ್ ಅವರಿಗೆ 14 ಪದಕಗಳನ್ನು ಕೊರಳಿಗೆ ಹಾಕಿ ಶುಭಾಶಯ ತಿಳಿಸಿದರು. ನನ್ನದು ರೈತಾಪಿ ಕುಟುಂಬ ಎರಡು ಎಕರೆ ಹೊಲ ನಮ್ಮ ತಂದೆ ರೈತ. ನನ್ನ ಸಾಧನೆಗೆ ತಂದೆ -ತಾಯಿ ಮತ್ತು ತಾತ ಅವರ ಪ್ರೋತ್ಸಾಹ ಕಾರಣ ಮುಂದೆ ಸಂಶೋಧನಾ ವಿಭಾಗದಲ್ಲಿ ತೊಡಗಿ ಕೃಷಿ ವಿಜ್ಞಾನಿ ಆಗಬೇಕೆಂದು ಗುರಿ ಹೊಂದಿದ್ದೇನೆ ಎಂದು ಚಿನ್ನದ ಪದಕ ಪಡೆದ ಪ್ರಶಾಂತ್.ವಿ ಹೇಳಿದ್ದಾರೆ.

gold medal

ಒಟ್ಟು 561 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು

ಪ್ರಶಾಂತ್. ವಿ ಸದ್ಯ ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ತೋಟಗಾರಿಕೆ ವಿಭಾಗದಲ್ಲಿ ಆನುವಂಶೀಯ ಮತ್ತು ಸಸ್ಯ ತಳಿವೃದ್ಧಿಶಾಸ್ತ್ರದಲ್ಲಿ ಎಮ್ಎಸ್​ಸಿ ಓದುತ್ತಿದ್ದಾರೆ. ಮೂಲತಃ ಕನ್ನಡ ಮಾದ್ಯಮದ ವಿದ್ಯಾರ್ಥಿಯಾಗಿರುವ ಪ್ರಶಾಂತ್. ವಿ ಈ ಸಾಧನೆ ಮಾಡಿದ್ದಾರೆ. ಪ್ರಶಾಂತ್ ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕುನ್ನೂರು ಗ್ರಾಮದವರಾಗಿದ್ದಾರೆ. ಇವರ ತಂದೆ ವೆಂಕಟೇಶ್ ಓರ್ವ ರೈತ, ಕೇವಲ ಎರಡು ಎಕರೆ ಭೂಮಿ ಹೊಂದಿದ್ದು, ತಂದೆ – ತಾಯಿ ಮತ್ತು ತಾತ ಎಲ್ಲರೂ ಕೃಷಿ ಕೆಲಸ ಮಾಡುತ್ತಾರೆ.

ಕಷ್ಟಪಟ್ಟು ಬ್ಯಾಂಕ್ ಸಾಲ ಪಡೆದು ಕೃಷಿ ಮಾಡಿ ಮಗನನ್ನು ಓದಿಸಿದ್ದಾರೆ. ಚಿಕ್ಕಂದಿನಿಂದಲೂ ಪ್ರಶಾಂತ್ ಪ್ರತಿಭೆ ಕಂಡು ಪ್ರೋತ್ಸಾಹ ನೀಡುತ್ತಾ ಬಂದಿರುವ ಇವರು ಓದಿಸುವುದಕ್ಕೆ ಸಾಕಷ್ಟು ಶ್ರಮಪಟ್ಟಿದ್ದಾರೆ. ನಂತರ ಮಗನ ಪ್ರತಿಭೆಗೆ ಸಿಗುವ ಸ್ಕಾಲರ್ ಶಿಪ್ ಕೊಂಚ ಆಸರೆಯಾಗಿದೆ. ಹೆಚ್ಚಿನ ಹಣ ಬೇಕಾದಾಗ ಎಜ್ಯುಕೇಶನ್ ಸಾಲ ಪಡೆದಿದ್ದಾರೆ. ಪ್ರಶಾಂತ್ ಪದವಿಯಲ್ಲಿ ಮಾಡಿದ ಸಾಧನೆಗೆ ವಿವಿಧ ಶಿಕ್ಷಣ ಸಂಸ್ಥೆಗಳು, ಪೌಂಡೇಶನ್​ಗಳು ಒಟ್ಟು 14 ಚಿನ್ನದ ಪದಕ ನೀಡಿ ಗೌರವಿಸಿದ್ದು ವಿಶೇಷ.

(ವರದಿ: ರವಿ ಮೂಕಿ-9980914144)

ಇದನ್ನೂ ಓದಿ: 

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಚಾಮರಾಜನಗರದ ಪೊಲೀಸ್ ಹೆಡ್ ಕಾನ್ಸ್​ಟೇಬಲ್​

ತುಮಕೂರು ವಿವಿ 14ನೇ ಘಟಿಕೋತ್ಸವ ಸಮಾರಂಭ; 73 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

( University of Horticulture Student who grabs 14 gold medals in Bagalkot )

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ