ದಾವಣಗೆರೆ ವಿಶ್ವವಿದ್ಯಾಲಯ ಘಟಿಕೋತ್ಸವ: ಮೆದುಳಿನಲ್ಲಿ ರಕ್ತಸ್ರಾವ ಆದರೂ ಛಲ ಬಿಡದೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಯುವತಿ

ಸ್ನಾತಕೋತ್ತರ ವಿಭಾಗ ಒಟ್ಟಾರೇ ಶೇಖಡಾ 95.31 ರಷ್ಟು ಫಲಿತಾಂಶ ಪಡೆದಿದೆ. ಇನ್ನು ಈ ಘಟಿಕೋತ್ಸವದಲ್ಲಿ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಹಾಗೂ ಹಿರಿಯ ವೈದ್ಯ ಡಾ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ದಾವಣಗೆರೆ ವಿಶ್ವವಿದ್ಯಾಲಯ ಘಟಿಕೋತ್ಸವ: ಮೆದುಳಿನಲ್ಲಿ ರಕ್ತಸ್ರಾವ ಆದರೂ ಛಲ ಬಿಡದೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಯುವತಿ
ದಾವಣಗೆರೆ ವಿಶ್ವವಿದ್ಯಾಲಯದ ಎಂಟನೆ ಘಟಿಕೋತ್ಸವ
Follow us
preethi shettigar
|

Updated on: Apr 09, 2021 | 2:00 PM

ದಾವಣಗೆರೆ: ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 8ರಂದು ಎಂಟನೇ ಘಟಿಕೋತ್ಸವ ಆಚರಿಸಿಲಾಯಿತು. ಈ ವಿಶ್ವವಿದ್ಯಾಲಯದಲ್ಲಿ ಚಿನ್ನಗಳಿಸುವ ಪಟ್ಟಿಯಲ್ಲಿ ಮಹಿಳೆಯರ ಪಾಲು ಹೆಚ್ಚಾಗಿದ್ದು, ವಿಶ್ವವಿದ್ಯಾಲಯದ ಉತ್ತಮ ಫಲಿತಾಂಶಕ್ಕೆ ಮತ್ತು ವಿಶ್ವವಿದ್ಯಾಲಯದ ಪ್ರಗತಿಗೆ ಹುಡುಗಿಯರೇ ಕಾರಣರಾಗಿದ್ದಾರೆ. ಇನ್ನು ಸಾಧನೆಗೆ ಯಾವುದೂ ಅಡ್ಡಿಪಡಿಸುವುದಿಲ್ಲ ಎನ್ನುವುದನ್ನು ಈ ವಿಶ್ವವಿದ್ಯಾಲಯದ ಯುವತಿಯೊಬ್ಬರು ನಿರೂಪಿಸಿದ್ದಾರೆ.

ಇಂಗ್ಲೀಷ್​ ವಿಭಾಗದ ನಿಸರ್ಗ ಎಂಬ ಯುವತಿ ಮೆದುಳಿನಲ್ಲಿ ರಕ್ತಸ್ರಾವ ಆಗಿ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರೂ ಅದರ ನಡುವೆಯೂ ಓದಿ ಚಿನ್ನದ ಪದಕ ಪಡೆದಿದ್ದಾರೆ. ಆ ಮೂಲಕ ನಿಸರ್ಗ ಇತರರಿಗೆ ಸ್ಪೂರ್ತಿ ಆಗಿದ್ದಾರೆ. ಇನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ ಗ್ರಾಮದ ಬಳೆ ಮಾರಾಟ ಮಾಡುವ ವ್ಯಕ್ತಿ ಪುತ್ರ ಹೈದರ್ ಅಲಿ ರಾಜ್ಯಶಾಸ್ತ್ರದಲ್ಲಿ ಚಿನ್ನದ ಪಡೆದು ಗಮನ ಸೆಳೆದಿದ್ದಾರೆ.

ನವದೆಹಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನ್ಯಾಕ್ ಸಮಿತಿಯು ದಾವಣಗೆರೆ ವಿವಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದೆ. ಮೇಲಾಗಿ ವಿವಿಗೆ ಮೂರು ವಿಶೇಷ ಸಂಶೋಧನಾ ಯೋಜನೆಗಳನ್ನ ಕೊಟ್ಟಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಪಾಠ -ಪ್ರವಚನದಲ್ಲಿ ಒಂದಿಷ್ಟು ಸಹ ತೊಂದರೆ ಆಗದಂತೆ ಇಲ್ಲಿನ ಸಿಬ್ಬಂದಿ ಕಾರ್ಯ ನಿರ್ವಹಿಸಿದೆ. ಇದೇ ಕಾರಣಕ್ಕೆ ಸ್ನಾತಕೋತ್ತರ ವಿಭಾಗದಲ್ಲಿ ಈ ವರ್ಷ 2,014 ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಇವರಲ್ಲಿ 1,189 ವಿದ್ಯಾರ್ಥಿನಿಯರು ಹಾಗೂ 824 ವಿದ್ಯಾರ್ಥಿಗಳು ಇದ್ದಾರೆ.

university convacation

ಚಿನ್ನದ ಪದಕ ಗೆಲ್ಲುವಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ

ಸ್ನಾತಕೋತ್ತರ ವಿಭಾಗ ಒಟ್ಟಾರೆ ಶೇಕಡಾ 95.31 ರಷ್ಟು ಫಲಿತಾಂಶ ಪಡೆದಿದೆ. ಇನ್ನು ಈ ಘಟಿಕೋತ್ಸವದಲ್ಲಿ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಹಾಗೂ ಹಿರಿಯ ವೈದ್ಯ ಡಾ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಏಳು ಜನ ಪಿಎಚ್​ಡಿ ವಿದ್ಯಾರ್ಥಿಗಳಲ್ಲಿ ಮೂರು ಜನ ಮಹಿಳಾ ಅಭ್ಯರ್ಥಿಗಳು. ಸ್ನಾತಕ ಪದವಿ ಪಡೆಯುವ 11,193 ವಿದ್ಯಾರ್ಥಿಗಳಲ್ಲಿ 6873 ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ 2,014 ಮಂದಿ ಪದವಿ ಸ್ವೀಕರಿಸಿದ್ದಾರೆ. ಇವರಲ್ಲಿ 1,189 ಜನ ವಿದ್ಯಾರ್ಥಿನಿಯರು. ಒಟ್ಟು ಪದವಿ ಪಡೆಯುವ 13,207 ಜನರಲ್ಲಿ 8,099 ಜನ ವಿದ್ಯಾರ್ಥಿನಿಯರು ಇದ್ದರು. ಇನ್ನು ಚಿನ್ನದ ಪದಕದ ವಿಚಾರಕ್ಕೆ ಬಂದರೆ ವಿವಿಯಲ್ಲಿ 74 ಚಿನ್ನದ ಪದಕಗಳು ಬಂದಿದೆ.

unvirsity convacation

ದಾವಣಗೆರೆ ವಿಶ್ವವಿದ್ಯಾಲಯದ ಎಂಟನೆ ಘಟಿಕೋತ್ಸವದ ಸಂಭ್ರಮಾಚರಣೆ

ಈ ಘಟಿಕೋತ್ಸವಕ್ಕೆ ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವರು ಗೈರು ಹಾಜರಾಗಿದ್ದರು. ಕುಲಪತಿ ಪ್ರೊ. ಶರಣಪ್ಪ ಹಲಸೆ ಪದವಿ ಪ್ರದಾನ ಮಾಡಿದರು. ಹಿರಿಯ ಚಿಂತಕ ಡಾ. ಗುರುರಾಜ ಕರಜಗಿ ಅವರು ಘಟಿಕೋತ್ಸವ ಭಾಷಣ ಮಾಡಿ, ಹಣ ಮುಖ್ಯ ಆದರೆ ಹಣವೇ ಮುಖ್ಯವಲ್ಲ ಎಂದು ತಮ್ಮ ಜೀವನದ ಅನುಭವಗಳನ್ನ ಹೇಳಿದರು.

ಇದನ್ನೂ ಓದಿ: 

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ; 14 ಚಿನ್ನದ ಪದಕಗಳಿಸಿ ಸಂಭ್ರಮಿಸಿದ ವಿದ್ಯಾರ್ಥಿ

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೆಚ್ಚಾಯಿತು ಅನೈತಿಕ ಚಟುವಟಿಕೆಗಳ ಆರೋಪ; ಎಲ್ಲಾ ತಿಳಿದರು ಮೌನವಾಗಿದೆ ಆಡಳಿತ ಮಂಡಳಿ

(Davanagere University Young lady won gold medal without losing persistence even though bleeding in the brain)

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ