ಐತಿಹಾಸಿಕ ಜೋಡು ಮಾರುತಿ ಮಂದಿರದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಸರ್ಕಾರದಿಂದ ಕೋಟಿ ಅನುದಾನ! ತೀವ್ರ ವಿರೋಧ

| Updated By: ಸಾಧು ಶ್ರೀನಾಥ್​

Updated on: Mar 21, 2024 | 11:50 AM

ಗದಗದ ಐತಿಹಾಸಿಕ ಜೋಡು ಮಾರುತಿ ದೇವಸ್ಥಾನದ ಭಕ್ತರಲ್ಲಿ ಕಳವಳ ಶುರುವಾಗಿದೆ. ಏಕೆಂದರೆ ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಪ್ಲಾನ್ ಹಾಕಲಾಗಿದೆ. ಇದರಿಂದ ಹಿಂದೂ ಸಮುದಾಯದ ಪೂಜೆ ಪುರಸ್ಕಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ. ಕೋಮಸೌಹಾರ್ದ ಧಕ್ಕೆ ಆಗುವ ಆತಂಕದಲ್ಲಿ ಹಿಂದೂ ಸಮುದಾಯವಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪರವಾನಿಗೆ ನೀಡದಂತೆ ಒತ್ತಾಯ ಮಾಡಲಾಗಿದೆ.

ಐತಿಹಾಸಿಕ ಜೋಡು ಮಾರುತಿ ಮಂದಿರದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಸರ್ಕಾರದಿಂದ ಕೋಟಿ ಅನುದಾನ! ತೀವ್ರ ವಿರೋಧ
ಐತಿಹಾಸಿಕ ಜೋಡು ಮಾರುತಿ ಮಂದಿರದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಸರ್ಕಾರದಿಂದ ಕೋಟಿ ಅನುದಾನ!
Follow us on

ಅದು ಐತಿಹಾಸಿಕ ಶ್ರೀ ಜೋಡು ಮಾರುತಿ ದೇವಸ್ಥಾನ. ಆ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣ ಮಾಡಲು ಒಂದು ಸಮುದಾಯ ಮುಂದಾಗಿದೆ. ಆದ್ರೆ ಹಿಂದೂ ಮಂದಿ ಶಾದಿಮಹಲ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಪೂಜೆ ಪುನಸ್ಕಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದ್ರು ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಮಹಿಳೆಯರು ಪ್ರತಿಭಟಿಸಿ ಒತ್ತಾಯ ಮಾಡಿದ್ದಾರೆ. ಒಂದು ವೇಳೆ ನಿರ್ಮಾಣ ಆರಂಭಿಸಿದ್ರೆ ಮುಂದೇ ಏನಾದ್ರೂ ಆದ್ರೆ ಜಿಲ್ಲಾಡಳಿತವೇ ಹೊಣೆ ಅಂತ ಎಚ್ಚರಿಕೆ ನೀಡಿದ್ದಾರೆ.

ಗದಗದ ಐತಿಹಾಸಿಕ ಜೋಡು ಮಾರುತಿ ದೇವಸ್ಥಾನದ ಭಕ್ತರಲ್ಲಿ ಕಳವಳ ಶುರುವಾಗಿದೆ. ಏಕೆಂದರೆ ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಪ್ಲಾನ್ ಹಾಕಲಾಗಿದೆ. ಇದರಿಂದ ಹಿಂದೂ ಸಮುದಾಯದ ಪೂಜೆ ಪುರಸ್ಕಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ. ಕೋಮಸೌಹಾರ್ದ ಧಕ್ಕೆ ಆಗುವ ಆತಂಕದಲ್ಲಿ ಹಿಂದೂ ಸಮುದಾಯವಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪರವಾನಿಗೆ ನೀಡದಂತೆ ಒತ್ತಾಯ ಮಾಡಲಾಗಿದೆ.

ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರುವಾಸಿಯಾದ ಗದಗ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಗದಗ ಜಿಲ್ಲೆಯಲ್ಲಿ ಈ ವಾಗ ಒಂದು ಆತಂಕ ಆರಂಭವಾಗಿದೆ. ಹೀಗಾಗಿ ಶಾದಿಮಹಲ್ ಬೇಡ ಅಂತ ಡಿಸಿ ಕಚೇರಿ ಎದುರು ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶ. ಹೌದು ಗದಗ ನಗರದ ಐತಿಹಾಸಿಕ ದೇವಸ್ಥಾನ ಜೋಡು ಮಾರುತಿ ದೇವಸ್ಥಾನ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಒಂದು ಸಮುದಾಯ ಮುಂದಾಗಿದೆ. ಇದು ಹಿಂದೂ ಜನ್ರ ಕೋಪಕ್ಕೆ ಕಾರಣವಾಗಿದೆ.

ಜೋಡಿ ಹನುಮಾನ ಮೂರ್ತಿಗಳು ಒಂದೇ ಕಡೆ ಇರೋದು ವಿಶೇಷ. ಹೀಗಾಗಿ ಈ ಜೋಡು ಮಾರುತಿ ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡ್ರೆ, ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಹಾಗಾಗಿ ಪ್ರತಿ ಶನಿವಾರ ಭಕ್ತರ ದಂಡೆ ಹರಿದು ಬರುತ್ತದೆ ಇಲ್ಲಿಗೆ. ಇತ್ತೀಚೆಗೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ‌. ಕೆಲವೇ ತಿಂಗಳಲ್ಲಿ ಮತ್ತೆ ಜೋಡು ಮಾರುತಿ ದೇವರ ಪ್ರಾಣ ಪ್ರತಿಷ್ಠಾನೆ ಕಾರ್ಯ ನಡೆಯಲಿದೆ. ಈ ಮಧ್ಯೆ ಹಿಂದೂ ಸಮುದಾಯದ ಜನರಲ್ಲಿ ಒಂದು ಆತಂಕ ಮನೆ ಮಾಡಿದೆ.

ಇದನ್ನೂ ಓದಿ: ನಗರ್ತ ​ಪೇಟೆ ಹಲ್ಲೆ ಪ್ರಕರಣದ ಬೆನ್ನಿಗೆ ಆನೇಕಲ್​​ನಲ್ಲೂ ಅನ್ಯಕೋಮಿನ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಈ ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣ ಮಾಡಲು, ಮತ್ತೊಂದು ಸಮುದಾಯ ಪ್ಲಾನ್ ಮಾಡಿದೆ. ಹೀಗಾಗಿ ಅಕ್ಕಪಕ್ಕದಲ್ಲಿ ದೇವಸ್ಥಾನ ಹಾಗೂ ಶಾದಿಮಹಲ್ ನಿರ್ಮಾಣವಾದ್ರೆ, ಪೂಜೆ ಪುರಸ್ಕಾರಕ್ಕೆ ಧಕ್ಕೆ ಆಗುತ್ತದೆ. ಹಾಗಾಗಿ ಬೇರೆ ಕಡೆ ಶಾದಿಮಹಲ್ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂ ಪರ ಸಂಘಟನೆ ಮುಖಂಡರು, ಮಹಿಳೆಯರು ಪ್ರತಿಭಟನೆ ಮಾಡಿ ಡಿಸಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಸೂಕ್ಷ್ಮವಾಗಿ ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಕೋಮುಗಲಭೆಗಳಿಗೆ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಮಸೀದಿ ಇದೆ. ಆ ಜಾಗದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಅಲ್ಪಸಂಖ್ಯಾತ ಇಲಾಖೆಯಿಂದ ಒಂದು ಕೋಟಿ ಅನುದಾನ ಬಿಡುಗಡೆಯಾಗಲಿದೆಯಂತೆ. ಹೀಗಾಗಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣವಾದ್ರೆ ಹನುಮಾನ್ ಭಕ್ತರಿಗೆ ಸಾಕಷ್ಟು ಸಮಸ್ಯೆಯಾಗಲಿದೆಯಂತೆ.

ಹೀಗಾಗಿ ಈ ಜಾಗದಲ್ಲಿ ಶಾಹಿಮಹಲ್ ನಿರ್ಮಾಣಕ್ಕೆ ಅವಕಾಶ ನೀಡಬಾರದು, ಬೇರೆ ಕಡೇ ಶಾದಿಮಹಲ್ ನಿರ್ಮಾಣ ಮಾಡಿಕೊಳ್ಳಲಿ ನಮ್ಮ ವಿರೋಧ ಇಲ್ಲಾ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಒತ್ತಾಯ ಮಾಡ್ತಾಯಿದ್ದಾರೆ. ಈಗಾಗಲೇ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಗೆ ಮನವಿ ಸಲ್ಲಿಸಿದ್ದಾರೆ. ಅಲ್ಪ ಸಂಖ್ಯಾತ ಇಲಾಖೆ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಇನ್ನು ಅವರ ಆಹಾರ ಪದ್ದತಿ ಬೇರೆಯದ್ದಾಗಿದೆ, ನಮ್ಮ ಆಹಾರ ಪದ್ದತಿಯೇ ಬೇರೆಯಿದೆ. ಶನಿವಾರ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂ ಭಕ್ತರು ದೇವಸ್ಥಾನಕ್ಕೆ ಬರ್ತಾರೆ. ಆಗ ಪವಿತ್ರತೆ ಹಾಳಾಗುತ್ತದೆ ಎನ್ನುವ ವಾದವನ್ನು ಹಿಂದೂ ಸಮಾಜದವರು ಮಾಡ್ತಾಯಿದ್ದಾರೆ. ಹೀಗಾಗಿ ದೇವಸ್ಥಾನದ ಪಕ್ಕದಲ್ಲೇ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಅಂತಾರೆ.

ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾದ ಗದಗ ಜಿಲ್ಲೆಯಲ್ಲಿ ಅಶಾಂತಿ ಮೂಡದಿರಲಿ. ಹೀಗಾಗಿ ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎನ್ನುವುದು ಹಿಂದೂ ಸಮಾಜದ ಆಗ್ರಹವಾಗಿದೆ. ಸದ್ಯ ಜಿಲ್ಲಾಧಿಕಾರಿಗಳು ಮನವಿ ಸ್ವೀಕಾರ ಮಾಡಿ, ಸ್ಥಳ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ. ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೋಡ್ಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ