ಹೆಸ್ಕಾಂ ಅಚಾತುರ್ಯ: ಟ್ರ್ಯಾಕ್ಟರ್​ನ ಪೈಪ್​ಗೆ ವಿದ್ಯುತ್ ಸ್ಪರ್ಶ, ಚಾಲಕ ಸಾವು

ಬಾಗಲಕೋಟೆ: ಟ್ರ್ಯಾಕ್ಟರ್ ಎಂಜಿನ್ ಮೇಲಿನ ಕಬ್ಬಿಣದ ಪೈಪ್​ಗೆ ವಿದ್ಯುತ್ ತಂತಿ ತಗುಲಿ ಚಾಲಕ ಮೃತಪಟ್ಟಿರುವ ಘಟನೆ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದಿದೆ. ಶಿವಲಿಂಗ ಸೋಮರಾಯಸವಣೂರ(20) ಮೃತ ಯುವಕ. ಪಾಂಡು ಹೊಳೆನ್ನವರ ಎಂಬುವರ ಹೊಲದಲ್ಲಿ ಟ್ರ್ಯಾಕ್ಟರ್​ ಎಂಜಿನ್​ನ ಪೈಪ್​ಗೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಶಿವಲಿಂಗಗೆ ವಿದ್ಯುತ್ ಶಾಕ್ ಹೊಡೆದು ಸಾವಿಗೀಡಾಗಿದ್ದಾನೆ. ಹಲವು ದಿನದಿಂದ ವಾಲಿದ್ದ ವಿದ್ಯುತ್ ಕಂಬ: ಕಳೆದ ಹಲವು ದಿನಗಳಿಂದ ವಿದ್ಯುತ್ ಕಂಬ ವಾಲಿತ್ತು. ಪರಿಣಾಮ ವಿದ್ಯುತ್ ತಂತಿಗಳು ತೀರಾ […]

ಹೆಸ್ಕಾಂ ಅಚಾತುರ್ಯ: ಟ್ರ್ಯಾಕ್ಟರ್​ನ ಪೈಪ್​ಗೆ ವಿದ್ಯುತ್ ಸ್ಪರ್ಶ, ಚಾಲಕ ಸಾವು

Updated on: Nov 22, 2019 | 4:53 PM

ಬಾಗಲಕೋಟೆ: ಟ್ರ್ಯಾಕ್ಟರ್ ಎಂಜಿನ್ ಮೇಲಿನ ಕಬ್ಬಿಣದ ಪೈಪ್​ಗೆ ವಿದ್ಯುತ್ ತಂತಿ ತಗುಲಿ ಚಾಲಕ ಮೃತಪಟ್ಟಿರುವ ಘಟನೆ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಡೆದಿದೆ.

ಶಿವಲಿಂಗ ಸೋಮರಾಯಸವಣೂರ(20) ಮೃತ ಯುವಕ. ಪಾಂಡು ಹೊಳೆನ್ನವರ ಎಂಬುವರ ಹೊಲದಲ್ಲಿ ಟ್ರ್ಯಾಕ್ಟರ್​ ಎಂಜಿನ್​ನ ಪೈಪ್​ಗೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಶಿವಲಿಂಗಗೆ ವಿದ್ಯುತ್ ಶಾಕ್ ಹೊಡೆದು ಸಾವಿಗೀಡಾಗಿದ್ದಾನೆ.

ಹಲವು ದಿನದಿಂದ ವಾಲಿದ್ದ ವಿದ್ಯುತ್ ಕಂಬ:
ಕಳೆದ ಹಲವು ದಿನಗಳಿಂದ ವಿದ್ಯುತ್ ಕಂಬ ವಾಲಿತ್ತು. ಪರಿಣಾಮ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟಕ್ಕೆ ಬಂದಿದ್ದವು. ವಿದ್ಯುತ್ ಕಂಬ ದುರಸ್ತಿ ಮಾಡದಿರೋದೆ ಘಟನೆಗೆ ಕಾರಣ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.